ಮೋದಿ ಟ್ವಿಟರ್ ಖಾತೆ ದಾನ, ಭಾರತ ವನಿತೆಯರಿಗೆ ರನ್ನರ್ ಅಪ್ ಸ್ಥಾನ; ಮಾ.08ರ ಟಾಪ್ 10 ಸುದ್ದಿ!

By Suvarna News  |  First Published Mar 8, 2020, 5:52 PM IST

ಮಹಿಳಾ ದಿನಾಚರಣೆಯಂದು ಭಾರತ ಮಹಿಳಾ ಕ್ರಿಕೆಟ್ ತಂಡ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಮಹಿಳಾ ಸಾಧಕಿಯರಿಗೆ ಪ್ರಧಾನಿ ಮೋದಿ ತಮ್ಮ ಟ್ವಿಟರ್ ಖಾತೆಯನ್ನು ನೀಡಿದ್ದಾರೆ. ಕನ್ನಡಿಗ ಸುನಿಲ್ ಜೋಶಿ ನೇತೃತ್ವದ ಟೀಂ ಇಂಡಿಯಾ ಆಯ್ಕೆ ಸಮಿತಿ ಸೌತ್ ಆಫ್ರಿಕಾ ತಂಡಕ್ಕೆ ಭಾರತ ತಂಡ ಆಯ್ಕೆ ಮಾಡಿದೆ. ಬೆಂಗಳೂರಿನಲ್ಲಿ ಸ್ಫೋಟ, ರೈತರ ಸಾಲಮನ್ನಾ ಸೇರಿದಂತೆ ಮಹಿಳಾ ದಿನಾಚರಣೆಯ ದಿನವಾದ ಮಾರ್ಚ್ 8ರ ಟಾಪ್ 10 ಸುದ್ದಿ ಇಲ್ಲಿವೆ.


ನಿರಾಶ್ರಿತರ ಹಸಿವು ನೀಗಿಸಿದ 'ಸ್ನೇಹಾ'ಗೆ ಮೋದಿ ಟ್ವಿಟರ್ ಖಾತೆ!, ಯಾರೀಕೆ?

Tap to resize

Latest Videos

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು 7 ಸ್ಫೂರ್ತಿದಾಯಕ ಮಹಿಳೆಯರಿಗೆ ತನ್ನ ಸೋಶಿಯಲ್ ಮಿಡಿಯಾ ಖಾತೆ ಬಿಟ್ಟು ಕೊಟ್ಟ ಮೋದಿ| ಇಂದು ಇಡೀ ದಿನ ಮೋದಿ ಟ್ವಿಟರ್ ಖಾತೆಗೆ ಮಹಿಳೆಯರೇ ಬಾಸ್| ಮೊದಲ ಟ್ವೀಟ್ ಮಾಡಿದ ಸ್ನೇಹಾ ಮೋಹನ್‌ದಾಸ್

ರಾಮ ಮಂದಿರ ನಿರ್ಮಾಣಕ್ಕೆ ಉದ್ಧವ್‌ ಠಾಕ್ರೆ 1 ಕೋಟಿ ರು.!

ಮಹಾರಾಷ್ಟ್ರದಲ್ಲಿ ತಮ್ಮ ಸರ್ಕಾರ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಶನಿವಾರ ಅಯೋಧ್ಯೆಗೆ ಭೇಟಿ ನೀಡಿದ್ದು, ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರು. ನೀಡುವುದಾಗಿ ಘೋಷಿಸಿದ್ದಾರೆ.

'ರೈತರು ದಾಖಲೆ ನೀಡಿದ 24 ಗಂಟೆಯಲ್ಲಿ ಸಾಲಮನ್ನಾ'

ಹಿಂದಿನ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರದ ಸಾಲ ಮನ್ನಾ ಯೋಜನೆ ಮುಂದುವರಿಸುವ ಕುರಿತ ಗೊಂದಲಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಂತ್ಯ ಹಾಡಿದ್ದಾರೆ. ಸಾಲ ಮನ್ನಾಕ್ಕೆ ಸಂಬಂಧಿಸಿ ಅರ್ಹತಾ ಪತ್ರಗಳನ್ನು ಪರಿಶೀಲಿಸಲಾಗುತ್ತಿದೆ. ಅರ್ಹ ರೈತರು ದಾಖಲೆಗಳನ್ನು ನೀಡಿದರೆ 24 ಗಂಟೆಗಳಲ್ಲಿ ಸಾಲ ಮನ್ನಾ ಯೋಜನೆಯ ಹಣ ತಲುಪಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ; ಹಾರ್ದಿಕ್ ಕಮ್‌ಬ್ಯಾಕ್!

ಕನ್ನಡಿಗ ಸುನಿಲ್ ಜೋಶಿ ನೇತೃತ್ವದ ನೂತನ ಆಯ್ಕೆ ಸಮಿತಿ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ತಂಡ ಪ್ರಕಟಿಸಿದೆ. ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. 15 ಸದಸ್ಯರ ತಂಡ ಇಲ್ಲಿದೆ.

ಶಫಾಲಿ ಆಡಲಿಲ್ಲ, ಭಾರತ ಗೆಲ್ಲಲಿಲ್ಲ; ಆಸ್ಟ್ರೇಲಿಯಾಗೆ ಮಹಿಳಾ ಟಿ20 ವಿಶ್ವಕಪ್ ಟ್ರೋಫಿ

ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಫೈನಲ್ ಪ್ರವೇಶಿದ್ದ ಭಾರತ ಮಹತ್ವದ ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ. ಟ್ರೋಫಿ ಗೆದ್ದು ದಾಖಲೆ ಬರೆಯಲು ಸಜ್ಜಾಗಿದ್ದ ಭಾರತ ಮಹಿಳಾ ತಂಡ ರನ್ನರ್ ಪ್ರಶಸ್ತಿಗೆ ತೃಪ್ತಿ ಪಡಬೇಕಾಯಿತು. 

ತೆರೆ ಮೇಲೆ ಕಿಸ್ ಕೊಡಲು ಮಗನಿಗೆ ಕ್ರೇಜಿ ಗ್ರೀನ್ ಸಿಗ್ನಲ್!

ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಹೊಸ ಸಿನಿಮಾ ಮುಗಿಸಿದ್ದಾರೆ. ಸದ್ದಿಲ್ಲದೇ ಪೂರ್ಣಗೊಂಡಿರೋ ಈ ಚಿತ್ರ, ಈಗ ರಿಲೀಸ್ ಗೆ ರೆಡಿ ಆಗಿದೆ. ಈ ಚಿತ್ರಕ್ಕೆ ಈಗ ಹೊಸ ಕ್ರೇಜ್ ಬಂದಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಬಂದು ಆ ಕ್ರೇಜನ್ನ ಹೆಚ್ಚಿಸಿದ್ದಾರೆ. 

ಬೆಂಗಳೂರಿನಲ್ಲಿ ಸ್ಫೋಟ: ಬೆಚ್ಚಿ ಬಿದ್ದ ಜನತೆ

ಕೆಮಿಕಲ್ ಸ್ಫೋಟಗೊಂಡ ಪರಿಣಾಮ ಓರ್ವ ವ್ಯಕ್ತಿಯ ಎಡಗಾಲು ತುಂಡಾದ ಘಟನೆ ನಗರದ ಆಡುಗೋಡಿಯಲ್ಲಿ ಇಂದು [ಭಾನುವಾರ] ನಡೆದಿದೆ. ಸ್ಫೋಟದಲ್ಲಿ ಕಾಲುಕಳೆದುಕೊಂಡವರನ್ನ ನರಸಿಂಹಯ್ಯ[50] ಎಂದು ಗುರುತಿಸಲಾಗಿದೆ. 


ಆತಂಕದಲ್ಲಿದ್ದ ಯಸ್ ಬ್ಯಾಂಕ್ ಗ್ರಾಹಕರಿಗೆ ಬಿಗ್ ರಿಲೀಫ್!

ಕಳೆದೆರಡು ದಿನಗಳಿಂದ ಹಣವಿಲ್ಲದೇ ಪರದಾಡುತ್ತಿದ್ದ ಯಸ್ ಬ್ಯಾಂಕ್ ಗ್ರಾಹಕರಿಗೆ ನಿಟ್ಟುಸಿರು ಬಿಡುವಂತ ಸುದ್ದಿ ಬಂದೆರಗಿದೆ. ಸದ್ಯ ಗ್ರಾಹಕರು ಯಸ್ ಬ್ಯಾಂಕ್ ಮಾತ್ರವಲ್ಲದೇ, ಇತರ ಬ್ಯಾಂಕ್ ಎಟಿಎಂಗಳಿಂದಲೂ ಹಣ ಡ್ರಾ ಮಾಡಬಹುದು ಎಂದು ಬ್ಯಾಂಕ್ ಹೇಳಿದೆ. ಅಲ್ಲದೇ ಗ್ರಾಹಕರ ತಾಳ್ಮೆಗೆ ಬ್ಯಾಂಕ್ ಮಂಡಳಿ ಧನ್ಯವಾದ ತಿಳಿಸಿದೆ.

ತುಸು ಸಿಲ್ಲಿ ಕೆಲಸ ಮಾಡೋಣ..ಐಂದ್ರಿತಾ ಬಹಿರಂಗ ಆಹ್ವಾನ!

ನಟ ನಟಿಯರು  ಸೋಶಿಯಲ್‌ ಮಿಡಿಯಾದಲ್ಲಿ ತಮ್ಮ ಫೋಟೊ ವಿಡಿಯೋಗಳನ್ನು ಶೇರ್‌ ಮಾಡಿಕೊಂಡು ಸಕ್ರಿಯವಾಗಿರುವುದು  ಇತ್ತೀಚಿನ ಟ್ರೆಂಡ್‌ ಆಗಿದೆ.  ಸ್ಯಾಂಡಲ್‌ ಬೆಡಗಿ ಐಂದ್ರಿತಾ ರೇನೂ ಇದಕ್ಕೆ ಹೊರತಲ್ಲ. ಈಗ ಬನ್ನಿ ಜೊತೆಯಲ್ಲಿ ಸೇರಿ ಸಿಲ್ಲಿ ಕೆಲಸ ಮಾಡೋಣ ಎಂದು ಟಿಕ್‌ಟಾಕ್‌ಗೆ ಎಂಟ್ರಿ ಕೊಟ್ಟಿರುವ ವಿಡಿಯೋಯಿಂದ ಸಖತ್‌ ಸುದ್ದಿಯಾಗಿ ಹರಿದಾಡುತ್ತಿದೆ.

600 ಚೀಲ ಪಡಿತರ ಅಕ್ಕಿ ಅಕ್ರಮ ಸಾಗಣೆ..!

ಜನರಿಗಾಗಿ ಸರ್ಕಾರದಿಂದ ನೀಡಲಾಗುವ ಪಡಿತರ ಅಕ್ಕಿಯನ್ನು ಆಂಧ್ರದಿಂದ ಬಂಗಾರಪೇಟೆಗೆ ಸಾಗಿಸುವಾಗ ಆಂಧ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಮಾರು 600 ಚೀಲ ಅಕ್ಕಿಯನ್ನು ಆಂಧ್ರದಿಂದ ಸಾಗಿಸಲಾಗುತ್ತಿತ್ತು.
 

click me!