ಸಾಧನೆಯ ಮೌಂಟ್ ಎವರೆಸ್ಟನ್ನೇರಿದ ನಂದಿತಾ ನಾಗನಗೌಡ

By Suvarna Web DeskFirst Published Apr 29, 2017, 11:17 AM IST
Highlights

ಓದಿದ್ದು ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್, ಮತ್ತು ಇಂಗ್ಲೆಂಡಿನ ಇಂಟರ್ ನ್ಯಾಷನಲ್ ಬಿಸಿನೆಸ್ ಸ್ಕೂಲ್’ನಲ್ಲಿ ಎಂಬಿಎ. ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕು ಅಂತ ಹೊರಟವರು, ವಾಲಿದ್ದು ಮಾತ್ರ ಸಾಹಸಿ ಕ್ರೀಡಾ ಕ್ಷೇತ್ರದ ಕಡೆ. ಮೊದಲು ಕೈ ಹಾಕಿದ್ದು ಅತ್ಯಂತ ಎತ್ತರದ ಪರ್ವತಶ್ರೇಣಿ ಮೌಂಟ್ ಎವರೆಸ್ಟ್ ಹತ್ತುವ ಸಾಹಸಕ್ಕೆ.

ಸಾಧಿಸಬೇಕಂಬ ಛಲ, ಸತತ ಪರಿಶ್ರಮ ಇದ್ದರೆ ಎಂತಹದೇ ಕಠಿಣ ಸವಾಲನ್ನು ಬೇಕಾದರೂ ಎದುರಿಸಿ ಸಾಧನೆ ಮಾಡಬಹುದು ಎಂಬುವುದಕ್ಕೆ ಈ ಸಾಧಕಿಯೇ ಸಾಕ್ಷಿ. ಇವರ ಮಾಡಿದ ಸಾಧನೆ ಇಡಿ ಕನ್ನಡ ನಾಡು ಹೆಮ್ಮೆ ಪಡುವಂತಹದ್ದು.

ಹೆಸರು ನಂದಿತಾ ನಾಗನಗೌಡ, ವಯಸ್ಸು 28. ಮೂಲತ ವಾಣಿಜ್ಯನಗರಿ ಹುಬ್ಬಳ್ಳಿಯವರು. ಓದಿದ್ದು ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್, ಮತ್ತು ಇಂಗ್ಲೆಂಡಿನ ಇಂಟರ್ ನ್ಯಾಷನಲ್ ಬಿಸಿನೆಸ್ ಸ್ಕೂಲ್’ನಲ್ಲಿ ಎಂಬಿಎ. ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕು ಅಂತ ಹೊರಟವರು, ವಾಲಿದ್ದು ಮಾತ್ರ ಸಾಹಸಿ ಕ್ರೀಡಾ ಕ್ಷೇತ್ರದ ಕಡೆ. ಮೊದಲು ಕೈ ಹಾಕಿದ್ದು ಅತ್ಯಂತ ಎತ್ತರದ ಪರ್ವತಶ್ರೇಣಿ ಮೌಂಟ್ ಎವರೆಸ್ಟ್ ಹತ್ತುವ ಸಾಹಸಕ್ಕೆ. ಕುಟುಂಬದವರ ತೀವ್ರ ವಿರೋಧ ನಡುವೆ ಅಂದುಕೊಂಡಿದ್ದನ್ನು ಸಾಧಿಸಿಯೇ ಬಿಟ್ಟ ಛಲಗಾತಿ ಈ ನಂದಿತಾ ನಾಗನಗೌಡ . ಸತತ 52 ದಿನದಲ್ಲಿ 7906 ಮೀಟರ್ ಎತ್ತರದ ಸೌಥ್ ಪೋಲ್’ವರೆಗೆ ತಲುಪಿ ಸಾಧನೆ ಮಾಡಿದ ಮೊದಲ ಕನ್ನಡತಿ ಎಂಬ ಹೆಗ್ಗಳಿಕೆ ಮೆರೆದಿದ್ದಾಳೆ.

ಮೌಂಟ್ ಎವರೆಸ್ಟ್ ಶಿಖರ ಏರುವ ಸಾಹಸಕ್ಕೆ ಕೈ ಹಾಕಿದಕ್ಕೆ ಕುಟುಂಬದರಿಂದ ಹಿಡಿದು ಎಲ್ಲರೂ ವಿರೋಧಿಸಿದ್ದರು. ಲಂಡನ್’ನಲ್ಲಿ ಎಂಬಿಎ ಕಲಿಯುವಾಗಲೇ ಸ್ನೇಹಿತರ ಜೊತೆಗೂಡಿ ಟ್ರೆಕ್ಕಿಂಗ್ ಹಾಗೂ ಪರ್ವತಾರೋಹಣಕ್ಕೆ ಹೋಗುತ್ತಿದ್ದರು.ಬಳಿಕ ಮನಾಲಿಯಲ್ಲಿನ ಅಟಲ್ ಬಿಹಾರಿ ವಾಜಪೇಯಿ ಇನ್ಸ್ಟಿಟ್ಯೂಟ್ ಆಫ್ ಮೌಂಟೆನಿರಿಂಗ್’ನಲ್ಲಿ 28 ದಿನಗಳ ತರಬೇತಿ ಪಡೆದು, 'ಎ' ಗ್ರೇಡ್’ನಲ್ಲಿ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿ ಮೌಂಟ್ ಎವರೆಸ್ಟ್ ಏರಲು ಆಂಭಿಸಿದ 52 ದಿನದಲ್ಲಿ 7906 ಮೀಟರ್ ಎತ್ತರಕ್ಕೆ ಏರಿದ್ದರು. - 50ಡ್ರಿಗಿ ಉಷ್ಣಾಂಶ’ದಲ್ಲಿ ಭಾರವಾದ ಆಕ್ಸಿಜನ್, ಕಿಟ್, ಹೊತ್ತು ಪರ್ವತಾರೋಹಣ ಮಾಡಿದ್ದು ಮಹತ್ಸಾಧನೆ.

ಅದಕ್ಕೆ ಹೇಳಿದ್ದು ಸಾಧಿಸಬೇಕೆಂಬ ಛಲ, ಅದಕ್ಕೆ ತಕ್ಕದಾದ ಪರಿಶ್ರಮ ಇದ್ದರೆ ಎಂತಹದೇ ಕಠಿಣ ಸವಾಲ ಬೇಕಾದರೂ ಎದುರಿಸಿ ಸಾಧಿಸಬಹುದು.

ವರದಿ: ಹುಬ್ಬಳ್ಳಿಯಿಂದ ಗುರುರಾಜ ಹೂಗಾರ್ ಸುವರ್ಣ ನ್ಯೂಸ್‌.

click me!