
ಕೈ ಕಾಲು ನೆಟ್ಟಗಿದ್ರೆ ಏನು ಬೇಕಾದ್ರು ಮಾಡಬಹುದು. ಆದರೆ ನೆಟ್ಟಗಿದ್ದ ಕೈ ಕಾಲು ಯಾವುದೊ ಒಂದು ದುರಂತದಲ್ಲಿ ಏನಾದ್ರು ಆದ್ರೆ ಜೀವನವೇ ಸಾಕು ಎಂದು ಜನ ಕುಗ್ಗಿ ಹೋಗುತ್ತರೆ. ಇನ್ನು ಹುಟ್ಟಿನಿಂದಲೆ ಕಾಯಿಲೆಯಿಂದ ಬಳಲುತ್ತಿರುವ ಸಂಖ್ಯೆಗೆ ಕಮ್ಮಿ ಇಲ್ಲ. ಆದರೆ ಅವೆಲ್ಲಾವನ್ನು ಮೆಟ್ಟಿ ನಿಂತು ಸಾಧನೆಯ ದಾರಿಯತ್ತ ಮುಖ ಮಾಡಿದವರು ಬೆರಳೆಣಿಕೆಯಷ್ಟು. ಇಂತಹ ಸಾಧಕಿಯರ ಹುಡುಕಾಟವನ್ನು ಸುವರ್ಣ ನ್ಯೂಸ್ ನಡೆಸಿತ್ತು. ಆ ಹುಡುಕಾಟದಲ್ಲಿ ನಮಗೆ ಸಿಕ್ಕವರು ಕುಮಾರಿ ನಿವೇದಿತಾ. ಇವರ ಸಾಧನೆ ಏನು ನಾವು ತೋರಿಸ್ತಿವಿ ನೋಡಿ
ನಿವೇದಿತಾ, ಜಗತ್ತಿಗೆ ಈಗಷ್ಟೆ ಕಾಲಿಡುತ್ತಿರುವ ಪುಟ್ಟ ಕಂದಮ್ಮ. ಹುಟ್ಟಿದ ಮೂರೆ ದಿನಕ್ಕೆ ಕಾಮಾಲೆ ರೋಗ ಅಂಟಿಕೊಂಡಿತ್ತು. ವೈದ್ಯರ ಬಳಿ ಚಿಕಿತ್ಸೆ ಮಾಡಸಿದರೂ ವಾಸಿಯಾಗಲೇ ಇಲ್ಲ. ನಂತರ ಎರಡು ತಿಂಗಳ ಮುಗುವಿಗೆ ಮೇಜರ್ ಸರ್ಜರಿ ಮಾಡಲಾಯಿತು. ಈ ಸರ್ಜರಿಯಲ್ಲಿ ಹೊಟ್ಟೆಯ ಕಾಲು ಭಾಗವನ್ನು ತೆಗೆಯಲಾಯಿತು. ಹುಟ್ಟಿ ಮೂರು ನಾಲ್ಕು ವರ್ಷವಾದರೂ ಮಾತು ಬರಲ್ಲಿಲ್ಲ. ನಡಿಗೆ ಸರಿಯಿಲ್ಲ. ಕಿವಿ ಕೂಡ ಕೇಳಿಸುತ್ತಿಲ್ಲ. ಇನ್ನು ಓದು ಬರಹವೆಲ್ಲಿ ಜೆಎಸ್ಎಸ್ ಅಕ್ಯಾಡಮಿಯಲ್ಲಿ ನಾಲ್ಕನೆ ತರಗತಿಯವರೆಗೆ ಓದಿದರು. ಎಂಟನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಯಲು ಶುರು ಮಾಡಿದರು. ನಿರಂತರವಾಗಿ 20 ವರ್ಷದಿಂದ ಈ ನೃತ್ಯವನ್ನು ಕಲಿಯುತ್ತಿದ್ದಾರೆ. ಬರೇ ಭರತನಾಟ್ಯವಷ್ಟೆ ಅಲ್ಲದೆ ಕುಚುಪುಡಿ ಹಾಗು ಆದ್ರ ನಾಟ್ಯಮ್ ಕೂಡ ಕಲಿತಿದ್ದಾರೆ.
ಇಷ್ಟೆಲ್ಲ ಸಂಕಷ್ಟಗಳು ಎದುರಾದರೂ ಕೂಡ ಎಲ್ಲಿಯೂ ಕುಗ್ಗದೆ ಎಲ್ಲರಂತೆ ತಾನು ಒಬ್ಬಳು ಎಂದು ನೃತ್ಯ ಮಾಡುತ್ತಿದ್ದಾರೆ. ಇದುವರೆಗೆ ಇವರು ದೆಹಲಿಯಲ್ಲಿ ನಡೆದ ಎಬಿಲಿಟಿ ಉತ್ಸವದಲ್ಲಿ ಎರಡನೆ ಪ್ರಶಸ್ತಿ ಪಡೆದಿದ್ದಾರೆ. ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿಯವರು ಬಳಿ ಪ್ರಶಸ್ತಿ ಪಡೆದಿದ್ದಾರೆ. ಇಷ್ಟೆ ಅಲ್ಲದೆ ರಾಜ್ಯ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಸೃಷ್ಟಿ ಪ್ರಶಸ್ತಿ, ನಾಡ ಪ್ರಭು ಕೆಂಪೆಗೌಡ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಇನ್ನು ಇವರ ಹೆಸರು 2015ರ ಸಾಲಿನ ವಂಡರ್ ಬುಕ್ ಆಫ್ ರೆಕಾರ್ಡ್ಸ್ ಬುಕ್'ನಲ್ಲಿ ಕೂಡ ಸೇರ್ಪಡೆಯಾಗಿದೆ..
ಮಹಿಳೆಯರು ಯಾವುದರಲ್ಲೂ ಕಡಿಮೆಯಿಲ್ಲ. ವಿಶೇಷ ಚೇತನರು ಕೂಡ ಎಲ್ಲರಂತೆ ನಾವು ಕೂಡ ಸಮಾನರು. ಸಾಧನೆಯ ದಾರಿಯಲ್ಲಿ ನಮ್ಮದು ಒಂದು ದಿಟ್ಟ ಹೆಜ್ಜೆ ಇದೆ ಅಂತ ತೋರಿಸಿಕೊಟ್ಟ ನಿವೇದಿತಾ ಅವರೆ ಎಲ್ಲರಿಗು ಒಂದು ಮಾದರಿ.
ವರದಿ: ಬೆಂಗಳೂರಿನಿಂದ ಕ್ಯಾಮೆರಮನ್ ಶಿವಕುಮಾರ್ ಜೊತೆ ಪ್ರಿಯಾಂಕ ತಳವಾರ ಸುವರ್ಣ ನ್ಯೂಸ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.