ಎಲೆಮರೆ ಕಾಯಿಯಂತಿದ್ದ ಲೇಖಕಿ ಕಸ್ತೂರಿ ಬಾಯರಿಗೆ ಮಹಿಳಾ ಸಾಧಕಿ ಪ್ರಶಸ್ತಿ

By Suvarna Web DeskFirst Published Apr 29, 2017, 9:57 AM IST
Highlights

ಅವರೊಬ್ಬ ನೇರಾನೇರ ನುಡಿಯ ಸಾಹಿತ್ಯ ಲೋಕದ ಎಲೆಮರೆಯ ಕಾಯಂತಿರೋ ಶ್ರೇಷ್ಠ ಲೇಖಕಿ, ಜೀವನದಲ್ಲಿ ಮದುವೆಯನ್ನೇ ಆಗದೇ ಸಾಹಿತ್ಯವನ್ನೇ ತಮ್ಮ ಉಸಿರಾಗಿಸಿಕೊಂಡು ಬಂದ ಗೌರವದ ಸಾಹಿತಿ, ಇಂದಿಗೂ ಪ್ರಚಾರವನ್ನ ಬಯಸದ ಸರಳ ಜೀವನದ ಸಜ್ಜನಿಕೆಯ ವ್ಯಕ್ತಿತ್ವದ ಮಹಿಳಾ ಸಾಹಿತಿ. ಹೌದು. ಇಂತಹವೊಂದು ವಿಶೇಷ ವ್ಯಕ್ತಿತ್ವವುಳ್ಳ ಮಹಿಳಾ ಸಾಹಿತಿ ಕಸ್ತೂರಿ ಬಾಯಿರಿ ಅವರಿಗೆ ಈಗ ನಮ್ಮ ಸುವರ್ಣನ್ಯೂಸ್​ ಮತ್ತು ಕನ್ನಡಪ್ರಭದ ಶ್ರೇಷ್ಠ ಮಹಿಳಾ ಸಾಧಕಿ ಪ್ರಶಸ್ತಿ ಗರಿ. ಇಂತಹ ಮಹಿಳಾ ಸಾಧಕಿ ಕುರಿತ ವರದಿ ಇಲ್ಲಿದೆ.

ಅವರೊಬ್ಬ ನೇರಾನೇರ ನುಡಿಯ ಸಾಹಿತ್ಯ ಲೋಕದ ಎಲೆಮರೆಯ ಕಾಯಂತಿರೋ ಶ್ರೇಷ್ಠ ಲೇಖಕಿ, ಜೀವನದಲ್ಲಿ ಮದುವೆಯನ್ನೇ ಆಗದೇ ಸಾಹಿತ್ಯವನ್ನೇ ತಮ್ಮ ಉಸಿರಾಗಿಸಿಕೊಂಡು ಬಂದ ಗೌರವದ ಸಾಹಿತಿ, ಇಂದಿಗೂ ಪ್ರಚಾರವನ್ನ ಬಯಸದ ಸರಳ ಜೀವನದ ಸಜ್ಜನಿಕೆಯ ವ್ಯಕ್ತಿತ್ವದ ಮಹಿಳಾ ಸಾಹಿತಿ. ಹೌದು. ಇಂತಹವೊಂದು ವಿಶೇಷ ವ್ಯಕ್ತಿತ್ವವುಳ್ಳ ಮಹಿಳಾ ಸಾಹಿತಿ ಕಸ್ತೂರಿ ಬಾಯಿರಿ ಅವರಿಗೆ ಈಗ ನಮ್ಮ ಸುವರ್ಣನ್ಯೂಸ್​ ಮತ್ತು ಕನ್ನಡಪ್ರಭದ ಶ್ರೇಷ್ಠ ಮಹಿಳಾ ಸಾಧಕಿ ಪ್ರಶಸ್ತಿ ಗರಿ. ಇಂತಹ ಮಹಿಳಾ ಸಾಧಕಿ ಕುರಿತ ವರದಿ ಇಲ್ಲಿದೆ.

ಉತ್ತರ ಕರ್ನಾಟಕದ ಪ್ರಮುಖ ಸಾಹಿತಿಗಳಲ್ಲಿ ಪ್ರಚಾರವನ್ನ ಬಯಸದೇ ಸಾಹಿತ್ಯದ ಕೃಷಿ ಮಾಡುತ್ತ ಎಲೆಮರೆಯ ಕಾಯಂತಿರೋ ಮಹಿಳಾ ಲೇಖಕಿ ಕಸ್ತೂರಿ ಬಾಯಿರಿ. ಇವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ನಿವಾಸಿಯಾಗಿದ್ದರೂ ಇವರ ಹುಟ್ಟಿದ್ದು ಮಾತ್ರ ಉಡುಪಿ ಜಿಲ್ಲೆಯಲ್ಲಿ. ಇವರ ತಂದೆ ಶಂಕರ್​ರಾವ್ ತಾಯಿ ಕಾತ್ಯಾಯಿನಿ. ಉಡುಪಿ ಜಿಲ್ಲೆಯ ಸಾಸ್ತಾನ ಊರಿನವರಾಗಿದ್ದು ಇದೇ ಗ್ರಾಮದಲ್ಲಿ ಕಸ್ತೂರಿಯವರು 1956 ಎಪ್ರಿಲ್ 27 ರಂದು ಜನಿಸಿದರು. ಉಡುಪಿ ಜಿಲ್ಲೆಯವರಾದ ಅವರ ತಂದೆ ಹೊಟೇಲ್ ಉದ್ಯಮ ಅರಸಿ ಬಾದಾಮಿಗೆ ಬಂದು ನೆಲೆಸಿದ್ದರಿಂದ ಈಗ ಕಸ್ತೂರಿಯವರು ಕಳೆದ 60 ವರ್ಷಗಳಿಂದ ಇಲ್ಲಿಯೇ ನೆಲೆಸಿ ಉತ್ತರ ಕರ್ನಾಟಕದ ಶ್ರೇಷ್ಟ ಮಹಿಳಾ ಸಾಹಿತಿಯಾಗಿ ಬೆಳೆದು ಬಂದದ್ದು ಮಾತ್ರ ಹೆಮ್ಮೆ ತರುವಂತಹ ಸಂಗತಿ.

ಬಿಎ. ಎಲ್​ಎಲ್​ಬಿ ಪದವಿಯನ್ನ ಪಡೆದ ಕಸ್ತೂರಿಯವರು ಬಾದಾಮಿಯ ಕಾಳಿದಾಸ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯೋಪಾಧ್ಯಯಿನಿಯಾಗಿ ನಂತರ ಉಚಿತ ನ್ಯಾಯ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು, ಬಳಿಕ ತಮ್ಮ ತಂದೆಯ ನಿಧನ ನಂತ್ರ ಜೀವನದಲ್ಲಿ ಎದುರಾದ ಸಮಸ್ಯೆ ನೋವು ನಲಿವುಗಳನ್ನ ವಿಮರ್ಶಿಸಿ ಪ್ರತಿಯೊಬ್ಬರ ಜೀವನಕ್ಕೆ ಕೈಗನ್ನಡಿಯಾಗುವಂತೆ ವಿಮರ್ಶಾತ್ಮಕ ಪುಸ್ತಕಗಳನ್ನ ಬರೆಯಲಾರಂಭಿಸಿದರು.  ಬಳಿಕ ಖ್ಯಾತ ಸಾಹಿತಿ ಖಲೀಲ ಅವರ ಗಿಬ್ರಾನ್​ ಎಂಬ ಆಂಗ್ಲ ಬಾಷೆಯ ಪ್ರೇಮ ಪತ್ರಗಳನ್ನ ಕನ್ನಡಕ್ಕೆ ಅನುವಾದಿಸಿ ಸೈ ಎನಿಸಿಕೊಂಡಿದ್ದಾರೆ. ಕಾತ್ಯಾಯಿನಿ, ನದಿಯಾದವಳು, ಭೋರಂಗಿ, ಗಂಧವತಿ, ನೀಲಿ ಆಕಾಶಕ್ಕೆ ರೆಕ್ಕೆಗಳು ಎಂಬ ಕವನ ಸಂಕಲನಗಳನ್ನ, ಥೈರಾಯಿಡ್​ ಮತ್ತು ಪಾಂಚಾಲಿ , ಹಲವು ಮಕ್ಕಳ ತಾಯಿಬೇರು, ಒಂದೇ ಕಾಂಡದ ಖುರ್ಚಿ, ದಿಂಡಿ, ಕಲ್ಲಾದಳು ಅಹಲ್ಯೆ, ಎರಡು ರೆಕ್ಕೆಗಳು ಎಂಬ ಕಥಾಸಂಕಲನಗಳನ್ನ ಹೊರತಂದಿದ್ದಾರೆ. ಕನ್ನಡದಲ್ಲಿ ಭಾವಚಿತ್ರಗಳ ಅಂಕಗಳ ಗಿರಿಗಿಟ್ಲೆ ಪುಸ್ತಕ ಜನರ ನಾಡಿಮಿಡಿತ ಅನಾವರಣಗೊಳಿಸಿದರೆ, ಇತ್ತ ಇನ್​ಕ್ರೆಡಿಬಲ್​ ವೈಸ್​ ಎಂಬ ಪುಸ್ತಕ ಆಂಗ್ಲ ಭಾಷೆಯಲ್ಲಿ ಪ್ರಕಟಗೊಂಡಿದ್ದು, ಈ ಕವನ ಸಂಕಲನ ಮೂಲಕ ತಮ್ಮ ಆಂತರಿಕ ಅಮೂರ್ತ ಭಾವನೆಗಳನ್ನ ಹೊರಹಾಕಿದ್ದಾರೆ.

ಇನ್ನು 2015ನೇ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆಯ ಬೇಲೂರಿನಲ್ಲಿ ನಡೆದ 5ನೇ ಬಾದಾಮಿ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಇಂತಹ ಎಲೆಮರೆಯ ಕಾಯಿಯಂತ ವಿಶಿಷ್ಟ ಸಾಹಿತಿ ಇಂದಿಗೂ ಸಹ ಮದುವೆಯಾಗದೇ ಸಾಹಿತ್ಯವನ್ನೇ ತಮ್ಮ ಉಸಿರನ್ನಾಗಿಸಿಕೊಂಡು ಬೆಳೆದುಕೊಂಡು ಬಂದು ಇಂದಿಗೂ ಸಾಹಿತ್ಯ ವಲಯದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.

ಇಂತಹ ಸಾಧಕಿಗೆ ಈಗ ನಮ್ಮ ಸುವರ್ಣನ್ಯೂಸ್​ ಮತ್ತು ಕನ್ನಡಪ್ರಭ ಜಂಟಿಯಾಗಿ ಶ್ರೇಷ್ಟ ಮಹಿಳಾ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಿರೋದು ಚಾಲುಕ್ಯರ ರಾಜಧಾನಿ ಬಾದಾಮಿಯ ಜನರಿಗೆ ಮತ್ತೊಂದು ಸಾಧನೆಯ ಗರಿ ಸಿಕ್ಕಂತಾಗಿದೆ.

click me!