ಮಹಿಳಾ ಪತ್ರಕರ್ತೆ ತಬ್ಬಿಕೊಂಡ ಪೊಲೀಸ್ ಪೇದೆ!

By Web DeskFirst Published Jul 13, 2018, 3:16 PM IST
Highlights

ಆ ಪೊಲೀಸ್ ಪೇದೆ ಮಹಿಳಾ ಪತ್ರಕರ್ತೆಯೊಬ್ಬರ ಮನೆಗೆ ಪಾಸ್ ಪೋರ್ಟ್ ವೆರಿಫಿಕೇಶನ್ ಗಾಗಿ ಭೇಟಿ ನೀಡಿದ್ದ. ಅವನಿಗೆ ಎನು ಅನ್ನಿಸಿತೋ ಗೊತ್ತಿಲ್ಲ. ಮಾತನಾಡುತ್ತಗ ಇದ್ದಕ್ಕಿದ್ದಂತೆ ಮಹಿಳೆಯನ್ನು ಗಟ್ಟಿಯಾಗಿ ತಬ್ಬಿಕೊಂಡ. ಮುಂದೆ ಆತನ ಕತೆ ಏನಾಯಿತು?

ಘಜಿಯಾಬಾದ್(ಜು.) ಪಾಸ್ ಪೋರ್ಟ್ ವೆರಿಫಿಕೇಶನ್ ಸಂಬಂಧ ಪತ್ರಕರ್ತೆಯೊಬ್ಬರ ಮನೆಗೆ ಬಂದಿದ್ದ ಪೇದೆ ತಾನು ಮಾಡಿದ ತಪ್ಪಿಗೆ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾನೆ.

ಮನೆಗೆ ಬಂದ ಪೇದೆ ದೇವೇಂದ್ರ ಸಿಂಗ್ ವೆರಿಫಿಕೇಶನ್ ಆರಂಭಿಸಿದ್ದಾರೆ. ನನ್ನ ಹೆಸರು ವಿಳಾಸ ಎಲ್ಲವನ್ನು ಕೇಳಿ ತಿಳಿದುಕೊಳ್ಳುತ್ತಿದ್ದ. ನಾನು ಮೂಲ ಊರು ಗುಹವಾಟಿ ಎಂದಾಗ ನಾನು ಅಲ್ಲಿ ಕೆಲ ಕಾಲ ಕೆಲಸ ಮಾಡಿದ್ದೇನೆ. ಅಂದರೆ ನಾವಿಬ್ಬರು ಈಗ ಫ್ರೆಂಡ್ಸ್ ಎಂದು ಹೇಳುತ್ತಾ ನನ್ನ ತೊಡೆ ಭಾಗಕ್ಕೆ ಕೈಯಿಂದ ಗುದ್ದಿದ್ದಾನೆ. ನಂತರ ನನ್ನ ತಬ್ಬಿಕೊಳ್ಳಲು ಮುಂದಾಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಆ್ಯಪ್’ನಲ್ಲಿ ಪಾಸ್’ಪೋರ್ಟ್’ಗೆ ಅರ್ಜಿ ಸಲ್ಲಿಸುವ 10 ಹಂತಗಳು

ಪತ್ರಕರ್ತೆ ಮಾಡಿದ ಸರಣಿ ಟ್ವೀಟ್ ಗಳ ನಂತರ ಎಚ್ಚೆತ್ತುಕೊಂಡ ಪೊಲೀಸ್ ಪೇದೆಯನ್ನು ಅಮಾನತು ಮಾಡಿದೆ. ಅಲ್ಲದೇ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಮಾಡಲಾಗುವುದು. ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆಯೂ ತಿಳಿಸಲಾಗಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.


 

click me!