
ನವದೆಹಲಿ : ಕಾಂಗ್ರೆಸ್ ತೊರೆದು ನಾಲ್ಕು ವರ್ಷಗಳ ಬಳಿಕ ಇದೀಗ ಮತ್ತೆ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಕಿರಣ್ ಕುಮಾರ್ ಕಾಂಗ್ರೆಸ್ ತೊರೆದಿದ್ದರು. ಈ ಬಗ್ಗೆ ಕಾಂಗ್ರೆಸ್ ಸಂವಹನ ಮುಖ್ಯಸ್ಥರಾದ ರಣದೀಪ್ ಸರ್ಜೆವಾಲಾ ಅವರು ಕಿರಣ್ ಕುಮಾರ್ ಅವರು ಪಕ್ಷಕ್ಕೆ ವಾಪಸಾಗುವ ಬಗ್ಗೆ ಘೋಷಿಸಿದ್ದರು.
ಎಐಸಿಸಿ ಆಂಧ್ರ ಪ್ರದೇಶ ಉಸ್ತುವಾರಿ ಒಮನ್ ಚಾಂಡಿ ಅವರನ್ನು ಭೇಟಿ ಮಾಡಿ ಸರ್ಜೆವಾಲಾ ಹಾಗೂ ಎನ್. ರಘುವೀರ್ ನೇತೃತ್ವದಲ್ಲಿ ಪಕ್ಷಕ್ಕೆ ಮರಳಿದ್ದಾರೆ.
2014ರ ಫೆಬ್ರವರಿ ತಿಂಗಳಲ್ಲಿ ಕಿರಣ್ ಕುಮಾರ್ ಅವರು ಪಕ್ಷವನ್ನು ತೊರೆದಿದ್ದರು. ಇದೀಗ ಲೋಕಸಭಾ ಚುನಾವಣೆಗೂ ಮುನ್ನವೇ ಮತ್ತೆ ಪಕ್ಷಕ್ಕೆ ಸೇರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.