ಬೆಡ್‌ ರೂಂನಲ್ಲಿ ಸಿಸಿಟಿವಿ ಇಟ್ಟ ಗಂಡ, ಹೆಂಡತಿಗೆ ಉಳಿದಿದ್ದು ಒಂದೇ ದಾರಿ

Published : Jul 19, 2019, 05:10 PM ISTUpdated : Jul 19, 2019, 05:18 PM IST
ಬೆಡ್‌ ರೂಂನಲ್ಲಿ ಸಿಸಿಟಿವಿ ಇಟ್ಟ ಗಂಡ, ಹೆಂಡತಿಗೆ ಉಳಿದಿದ್ದು ಒಂದೇ ದಾರಿ

ಸಾರಾಂಶ

ತ್ರಿಪುರಾದ ಮಹಿಳೆಯೊಬ್ಬರು ತನ್ನ ಗಂಡನ ವಿರುದ್ಧ ವಿಚಿತ್ರ ಕಾರಣಕ್ಕೆ ಮಹಿಳಾ ಆಯೋಗದ ಬಾಗಿಲು ತಟ್ಟಿದ್ದಾರೆ. ಗಂಡ ಬೆಡ್ ರೂಂ ಸೇರಿದಂತೆ ಮನೆಯ ಎಲ್ಲ ಕಡೆ ಸಿಸಿಟಿವಿ ಅಳವಡಿಕೆ ಮಾಡಿದ್ದಾನೆ ಎಂಬ ಕಾರಣಕ್ಕೆ ಮಹಿಳೆ ಆಯೋಗದ ಮೊರೆ ಹೋಗಿದ್ದಾರೆ. ಆದರೆ ಇದು ಆತ್ಮರಕ್ಷಣೆ ಮತ್ತು ಸುರಕ್ಷತೆಗೆ ಮಾಡಿಕೊಂಡ ಕೆಲಸ ಎಂದು ಗಂಡ ವಾದ ಮುಂದಿಟ್ಟಿದ್ದಾರೆ.

ತ್ರಿಪುರಾ[ಜು. 19]  ಪಶ್ಚಿಮ ತ್ರಿಪುರಾ ಜಿಲ್ಲೆಯ ಸಾಧುತಿಲ್ಲ ಪ್ರದೇಶ ವ್ಯಾಪ್ತಿಯ ಪ್ರತಾಪಗಢದ ರತ್ನಾ ಪೋಡ್ಡಾರ್[38] ಮತ್ತು ಚಂದನ್ ಕಾಂತಿ ಧರ್ [47]  ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ರತ್ನಾ  ಹೇಳುವಂತೆ ಮದುವೆ ಸಮಯದಲ್ಲಿ ವರದಕ್ಷಿಣೆಯಂಥ ಯಾವುದೇ ಬೇಡಿಕೆ ಇಟ್ಟಿರಲಿಲ್ಲ.

ಆದರೆ ಮದುವೆಯಾದ ನಂತರ ವರದಕ್ಷಿಣೆಗಾಗಿ ಕಿರುಕುಳ ಆರಂಭವಾಯಿತು. ಅತ್ತೆ, ಭಾಮೈದ ಸೇರಿದಂತೆ ನೆರೆ ಮನೆಯವರು ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಾರೆ.

ನನ್ನ ತವರು ಮನೆಯಲ್ಲಿದ್ದ ಜಮೀನನನ್ನು ಮಾರಿ ವರದಕ್ಷಿಣೆ ರೂಪದಲ್ಲಿ 2 ಲಕ್ಷ ರೂ. ನೀಡಲಾಗಿತ್ತು.  ತನ್ನ ಗಂಡ ಮತ್ತು ಸಂಬಂಧಿಕರ ಮಹಿಳೆ ನಡುವೆ ಅಫೇರ್ ಇದೆ ಎಂಬ ಅನುಮಾನವೂ ನನಗೆ ಬಂದಿತ್ತು. ಇದಾದ ಕೆಲ ದಿನದಲ್ಲಿ ನಾಲ್ಕು ರೂಂ ನ ಮನೆಗೆ 5 ಸಿಸಿಟಿವಿ ಅಳವಡಿಕೆ ಮಾಡಿದರು.  ಅಲ್ಲಿಂದ ನಂತರ ನಾನು ನನ್ನ ಅಮ್ಮನೊಂದಿಗೆ ವಾಸ ಮಾಡಲು ಆರಂಭಿಸಿದೆ ಎಂದು ಮಹಿಳೆ ಹೇಳುತ್ತಾರೆ.

ಸಿಸಿಟಿವಿಯಲ್ಲಿ ಕಂಡು ಬಂತು ವಿಚಿತ್ರ ಜೀವಿ: ನೀವೇನಾದ್ರೂ ನೋಡಿದ್ದೀರಾ?

ಮನೆಯ  ಎಲ್ಲ ಕಡೆ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಮುಖ್ಯ ದ್ವಾರ, ಕಾರಿಡಾರ್, ಅತ್ತೆಯ ಕೋಣೆ, ಮತ್ತೊಂದು ಕೋಣೆ ಹಾಗೂ ನಮ್ಮ  ಬೆಡ್ ರೂಂಗೂ ಕ್ಯಾಮರಾ ಹಾಕಲಾಗಿದೆ.  ನನ್ನ ಅತ್ತೆಯ ಕೋಣೆಯಲ್ಲಿ ಮಾನಿಟರ್ ಇಡಲಾಗಿದೆ. ನಾನು ಒಬ್ಬ ಮಹಿಳೆ,, ನನ್ನ ಪರ್ಸನಲ್ ಸ್ಪೇಸ್ ಗೆ ಇದು ಧಕ್ಕೆ ತಂದಿದ್ದು ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಹರಕೆ ನೇಮ ವಿವಾದ, ತಮ್ಮಣ್ಣ ಶೆಟ್ಟಿ ಎತ್ತಿದ ಹಲವು ಪ್ರಶ್ನೆಗಳಿವು
ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ?