ಮಾಜಿ ಬ್ಯೂಟಿ ಕ್ವೀನ್‌ಗಾಗಿ ರಾಜಪಟ್ಟಕ್ಕೇ ಗುಡ್‌ಬೈ ಎಂದಿದ್ದ ರಾಜ| ಮದುವೆಯಾದ ಒಂದೇ ವರ್ಷದಲ್ಲಿ ಡೈವೋರ್ಸ್| ಮದುವೆ ಮುರಿದು ಬಿದ್ದಿದ್ದೇಕೆ?
ಮಲೇಷ್ಯಾ[ಜು.19]: ಭಾರೀ ಸದ್ದು ಮಾಡಿದ್ದ ಮಲೇಷ್ಯಾದ ಕೆಲಾತಾನ್ ನ ಮಾಜಿ ರಾಜ ಸುಲ್ತಾನ್ ಮೊಹಮ್ಮದ್ ವಿ ಹಾಗೂ ರಷ್ಯಾದ ಮಾಜಿ ಬ್ಯೂಟಿ ಕ್ವೀನ್ ವೋಕ್ಸಾನಾ ವೋಯಿವೊದೀನಾ ವಿವಾಹ ಇದೀಗ ಮತ್ತೆ ಸೌಂಡ್ ಮಾಡುತ್ತಿದೆ. ಹೌದು ಕೇವಲ ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಈ ಜೋಡಿ ಇದೀಗ ವಿಚ್ಛೇದನ ಪಡೆದು ದೂರವಾಗಿದ್ದಾರೆ.
ವರದಿಗಳನ್ವಯ ಇವರಿಬ್ಬರು ಜುಲೈ 1 ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದಾಧ ಬಳಿಕ ಇವರ ವಿಚ್ಛೇದನದ ಸರ್ಟಿಫಿಕೇಟ್ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಇಬ್ಬರೂ ಡೈವೋರ್ಸ್ ಪಡೆದಿದ್ದರೆಂಬುವುದು ಉಲ್ಲೇಖನೀಯ.
undefined
A post shared by Rihana Oksana Petra (@rihanapetra) on Jun 3, 2019 at 9:24am PDT
ಕಳೆದ ವರ್ಷ ಜುಲೈನಲ್ಲಿ ಸುಲ್ತಾನ್ ಮೊಹಮ್ಮದ್ ಹಾಗೂ ವೋಕ್ಸಾನಾ ವೋಯಿವೊದೀನಾ ಮದುವೆಯಾಗಿದ್ದರು. 2019ರ ಮೇಯಲ್ಲಿ ವೋಕ್ಸಾನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಪುಟ್ಟ ಕಂದನಿಗೆ ಇಸ್ಮಾಯಿಲ್ ಲಯನ್ ಎಂದು ಹೆಸರಿಟ್ಟಿದ್ದರು.
ವೋಕ್ಸಾನಾಗೆ ಮದುವೆಗೂ ಮುನ್ನ ಬೇರೆಯವರೊಂದಿಗೆ ಸಂಬಂಧವಿತ್ತು ಎಂಬ ಸುದ್ದಿ ಭಾರೀ ವಿವಾದ ಸೃಷ್ಟಿಸಿತ್ತು. ಹೀಗಾಗಿ ಇಬ್ಬರ ಮದುವೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಮಿಸ್ ಮಾಸ್ಕೋ ಜೊತೆ ಮದುವೆಯಾಗಲು ಸುಲ್ತಾನ್ ಸಿಂಹಾಸನವನ್ನೇ ತೊರೆದಿದ್ದರು.
ಮದುವೆ ಬಳಿಕ ವೋಕ್ಸಾನಾ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು ಹಾಗೂ ತ್ಮಮ ಹೆಸರನ್ನು ರಿಹಾನಾ ವೋಕ್ಸಾನಾ ಪೆಟ್ರೋ ಎಂದು ಬದಲಾಯಿಸಿಕೊಂಡಿದ್ದರು. ಆದರೀಗ ಇವರಿಬ್ಬರು ಮದುವೆಯಾದ ಒಂದೇ ವರ್ಷದಲ್ಲಿ ಡೈವೋರ್ಟ್ ಪಡೆದಿದ್ದೇಕೆ? ಇದಕ್ಕೇನು ಕಾರಣ ಎಂಬುವುದು ತಿಳಿದು ಬಂದಿಲ್ಲ. ಲಭ್ಯವಾದ ಮಾಹಿತಿ ಅನ್ವಯ ಇವರು ತ್ರಿವಳಿ ತಲಾಖ್ ಮೂಲಕ ದೂರವಾಗಿದ್ದಾರೆ ಎನ್ನಲಾಗಿದೆ.
ಹೀಗಿದ್ದರೂ ಈ ಡೈವೋರ್ಸ್ ಸುದ್ದಿ ಸದ್ದು ಮಾಡುತ್ತಿರುವಾಗಲೇ ಮಾಜಿ ಬ್ಯೂಟಿ ಕ್ವೀನ್ ತಮ್ಮ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಗಂಡನ ಜೊತೆ ಡಾನ್ಸ್ ಮಾಡಿರುವ ರೊಮಾಂಟಿಕ್ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆಂಬುವುದು ಉಲ್ಲೇಖನೀಯ.