
ಲಕ್ನೋ(ಜು.19): ದೇಶಾದ್ಯಂತ ಹಲವೆಡೆ ನೀರಿನ ಅಭಾವದಿಂದ ಜನ ತತ್ತರಿಸಿದ್ದು, ಹಲವೆಡೆ ನೀರಿಂಗಿಸುವ ಕಾರ್ಯ, ಇಂಗು ಗುಂಡಿಗಳನ್ನು ಮಾಡುವ ಕೆಲಸ ಭರದಿಂದ ಸಾಗಿದೆ. ಯಾವುದೇ ಖರ್ಚಿಲ್ಲದೆ, ಯಾವುದೇ ಶ್ರಮವಿಲ್ಲದೆಯೇ ನೀರುಳಿಸುವ ಕ್ರಿಯೇಟಿವ್ ಐಡಿಯಾವನ್ನು ಯೋಗಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಮುಂದಿಟ್ಟಿದೆ.
ಮುಂದಿನ ದಿನಗಳಲ್ಲಿ ನೀರಿನ ಅಭಾವವನ್ನು ತಡೆಯಲು ನೀರನ್ನು ಮಿತವಾಗಿ ಬಳಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಲಕ್ನೋ ರಾಜ್ಯ ಸರ್ಕಾರಿ ಕಾರ್ಯಾಲಯದಲ್ಲಿ ಅರ್ಧ ಗ್ಲಾಸ್ ನೀರಿಡಲು ಸರ್ಕಾರ ನಿರ್ಧರಿಸಿದ್ದು, ಇದು ನೀರನ್ನು ವ್ಯರ್ಥ ಮಾಡುವುದಕ್ಕೆ ಕಡಿವಾಣ ಹಾಕಿದಂತಾಗಿದೆ.
ಅರ್ಧ ಗ್ಲಾಸ್ ನೀರನ್ನು ಮಾತ್ರ ಇಡಬೇಕು. ಹೀಗಾಗಿ ಜನ ನೀರು ವ್ಯರ್ಥ ಮಾಡುವುದಿಲ್ಲ ಎಂದು ಸ್ವೀಕರ್ ಸೂಚಿಸಿರುವುದಾಗಿ ಮುಖ್ಯ ಕಾರ್ಯದರ್ಶಿ ಪ್ರದೀಪ್ ದುಬೆ ಹೇಳಿದ್ದಾರೆ. ಯಾವುದೇ ವ್ಯಕ್ತಿ ಹೆಚ್ಚು ನೀರು ಕೇಳಿದಲ್ಲಿ ಕೊಡಲಾಗುತ್ತದೆ. ಆದರೆ ಆರಂಭದ ಹಂತದಲ್ಲಿ ಅರ್ಧ ಗ್ಲಾಸ್ ನೀರನ್ನಷ್ಟೇ ಇಡಬೇಕು ಎಂದು ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.