ಚಳಿಗಾಲದ ಅಧಿವೇಶನದಲ್ಲಿ ನೋಟಿನ ಬಿಸಿ

Published : Nov 17, 2016, 03:58 AM ISTUpdated : Apr 11, 2018, 12:50 PM IST
ಚಳಿಗಾಲದ ಅಧಿವೇಶನದಲ್ಲಿ ನೋಟಿನ ಬಿಸಿ

ಸಾರಾಂಶ

ಚಳಿಗಾಲದ ಸಂಸತ್‌ ಅಧಿವೇಶನ ನಿನ್ನೆಯಿಂದ ಆರಂಭವಾಗಿದ್ದು. 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟು ನಿಷೇಧ ಕಲಾಪವನ್ನು ನುಂಗಿಹಾಕುವ ಬೃಹತ್ ಅಸ್ತ್ರವಾಗಿ ಪರಿಣಮಿಸಿದೆ. ಪ್ರಧಾನಿ ಮೋದಿ ಕೈಗೊಂಡಿರುವ ನಿಲುವು ತಪ್ಪು, ಅದನ್ನು ವಾಪಸ್​ ಪಡೆಯಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ, ಕಲಾಪದಲ್ಲಿ ಏನೆಲ್ಲಾ ನಡೆಯಿತು? ಇಂದು ಏನೆಲ್ಲಾ ನಡೆಯುವ ಸಾಧ್ಯತೆ ಇದೆ ಎನ್ನುವುದರ ಡಿಟೇಲ್ಸ್

ನವದೆಹಲಿ(ನ.17): ಚಳಿಗಾಲದ ಸಂಸತ್‌ ಅಧಿವೇಶನ ನಿನ್ನೆಯಿಂದ ಆರಂಭವಾಗಿದ್ದು. 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟು ನಿಷೇಧ ಕಲಾಪವನ್ನು ನುಂಗಿಹಾಕುವ ಬೃಹತ್ ಅಸ್ತ್ರವಾಗಿ ಪರಿಣಮಿಸಿದೆ. ಪ್ರಧಾನಿ ಮೋದಿ ಕೈಗೊಂಡಿರುವ ನಿಲುವು ತಪ್ಪು, ಅದನ್ನು ವಾಪಸ್​ ಪಡೆಯಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ, ಕಲಾಪದಲ್ಲಿ ಏನೆಲ್ಲಾ ನಡೆಯಿತು? ಇಂದು ಏನೆಲ್ಲಾ ನಡೆಯುವ ಸಾಧ್ಯತೆ ಇದೆ ಎನ್ನುವುದರ ಡಿಟೇಲ್ಸ್

ಚಳಿಗಾಲದ ಅಧಿವೇಶನದಲ್ಲಿ ನೋಟಿನ ಬಿಸಿ

ಚಳಿಗಾಲದ ಸಂಸತ್‌ ಅಧಿವೇಶನ ನಿನ್ನೆಯಿಂದ ಆರಂಭವಾಗಿದೆ. 500 ರೂಪಾಯಿ ಮತ್ತು 1000 ರೂಪಾಯಿ ಮುಖಬೆಲೆಯ ನೋಟು ಬ್ಯಾನ್ ವಿಚಾರವೇ ಈ ಅಧಿವೇಶನ ನುಂಗಿಹಾಕೋ ಸಾಧ್ಯತೆಯಿದೆ. ನಿನ್ನೆಯೇ ರಾಜ್ಯಸಭೇಲ್ಲಿ  ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್  ಸದಸ್ಯ ಆನಂದ್ ಶರ್ಮಾ, ನೋಟ್ ಬ್ಯಾನ್ ದಿಢೀರ್ ನಿರ್ಧಾರದಿಂದ  ರೈತರು, ಕಾರ್ಮಿಕರಿಗೆ ಸಂಕಷ್ಟ ಪಡುತ್ತಿದ್ದಾರೆ. ಹೀಗಾಗಿ ಪ್ರಧಾನಿ ದೇಶದ ಜನರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ಇದಲ್ಲದೇ ಸಂಸತ್ ಹೊರಗೆ ಅಮದರೆ ಅಂದ್ರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ರಾಷ್ಟ್ರಪತಿ ಭವನ ಪಾದಯಾತ್ರೆ ನಡೆದಿದ್ದು, ಶಿವಸೇನೆ, ಅಕಾಲಿ ದಳ, ನ್ಯಾಷನಲ್ ಕಾನ್ಫೆರನ್ಸ್ ಪಕ್ಷಗಳು ಸಾಥ್ ನೀಡಿದ್ವು. ಈ ಬಗ್ಗೆ ಲೋಕಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿ ಹೋರಾಟ ನಡೆಸೋದಾಗಿ ನಿನ್ನೆಯೇ ದೀದಿ ನೋಟಿನ ಗದ್ದಲದ ಸೂಚನೆ ಕೊಟ್ಟಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಆಜಾದಪುರದ ಮಂಡಿಯಲ್ಲಿ  ಸಾರ್ವಜನಿಕ ಸಭೆಯಲ್ಲಿ ನೋಟಿನ ವಿಚಾರವಾಗಿ ಮಮತಾ ಬ್ಯಾನರ್ಜಿ ಹಾಗೂ ತಾವು ಮಾತನಾಡುವುದಾಗಿ ದೆಹಲಿ ಸಿಎಂ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ನೋಟಿನ ವಿಚಾರದಲ್ಲಿ ಉತ್ತರಿಸುತ್ತಾರಾ ಮೋದಿ?

ರಾಜ್ಯಸಭೆಯಲ್ಲಿ ನಿನ್ನೆ ಚರ್ಚೆ ಅಪೂರ್ಣಗೊಂಡಿದ್ದು ಲೋಕಸಭೆಯಲ್ಲಿ ಇವತ್ತು ನಿಯಮ 377 ಅಡಿಯಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಪ್ರಧಾನಿ ಈ ಕುರಿತು ಮಾತನಾಡುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ನೋಟಿನ ವಿಚಾರ ಹಾಗೂ ಬಿಜೆಪಿ ನಾಯಕ ಗಾಲಿ ಜನಾರ್ಧನ ರೆಡ್ಡಿ  ಪುತ್ರಿ ದುಬಾರಿ ವಿವಾಹದ ವಿಚಾರ ಇವತ್ತು ಸಂಸತ್'​ನಲ್ಲಿ ಭಾರೀ ಚರ್ಚೆಗೆ ಒಳಪಡುವ ಸಾಧ್ಯತೆಗಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೋವಿನ ಕೂಗು ಕೇಳಲಿಲ್ಲ, ಕೆನಡಾ ಆಸ್ಪತ್ರೆ ನಿರ್ಲಕ್ಷ್ಯಕ್ಕೆ 8 ಗಂಟೆ ನರಳಾಡಿ ಹೃದಯಾಘಾತದಿಂದ ಭಾರತೀಯನ ಸಾವು!
ಅಧಿಕಾರ ಶಾಶ್ವತವಲ್ಲ: ಸಿಎಂ ಬದಲಾವಣೆ ಬಗ್ಗೆ ಮೌನ ಮುರಿದ ಯತೀಂದ್ರ ! ಡಿಕೆಶಿ ಹೇಳಿಕೆಗೆ ನೀಡಿದ ಉತ್ತರವೇನು?