
ಮಂಗಳೂರು(ನ.17):ನೋಟಿಗಾಗಿ ಜನತೆಯ ಪರದಾಟ ಎಲ್ಲಡೆ ಮುಂದುವರೆದಿದೆ. ಆದರೆ ಕರಾವಳಿಯ ಗ್ರಾಮೀಣ ಪ್ರದೇಶದ ಆಟೋ ಚಾಲಕರೊಬ್ಬರು ಜನತೆಗೆ ತಮ್ಮ ಅಳಿಲು ಸೇವೆಯನ್ನ ಅರ್ಪಿಸಿದ್ದಾರೆ. ಹಣ ಬದಲಾವಣೆಗಾಗಿ ಬ್ಯಾಂಕ್'ಗೆ ಹೋಗುವ ಸಾರ್ವಜನಿಕರಿಗೆ ಉಚಿತ ಆಟೋ ಸೇವೆ ನೀಡುವ ಮೂಲಕ, ಮೋದಿ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಯಾರು ಈ ಮಾದರಿ ಪುರುಷ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.
'ಹಣ ಬದಲಾಯಿಸಲು ಹೋಗುವ ಗ್ರಾಹಕರಿಗೆ ಉಚಿತ ಪ್ರಯಾಣ' ಇಂತಹ ಬ್ಯಾನರ್'ನ್ನು ತನ್ನ ಆಟೋ ಮುಂದೆ ಹಾಕಿ ಮಾನವೀಯ ಕಾರ್ಯಕ್ಕೆ ಕೈ ಹಾಕಿದವರು ಪುತ್ತೂರಿನ ಸಾದಿಕ್. ಕಳೆದೆರಡು ದಿನಗಳಿಂದ ಈತನ ಆಟೋದಲ್ಲಿ ನೂರಾರು ಮಂದಿ ಬ್ಯಾಂಕ್'ಗೆ ಹೋಗಿ ನೋಟು ಬಲದಾಯಿಸಿಕೊಂಡು ಬಂದಿದ್ದಾರೆ.
ಸಾದಿಕ್ ಪ್ರಧಾನಿ ಮೋದಿಯ ದೊಡ್ಡ ಅಭಿಮಾನಿ. ಹೀಗಾಗಿ ಮೋದಿಯವರು ನೋಟ್ ಬ್ಯಾನ್ ಮೂಲಕ ಕಪ್ಪು ಕುಳಗಳ ವಿರುದ್ಧ ಸಮರ ಸಾರಿದ್ದಕ್ಕೆ ಇವರಿಗೆ ಎಲ್ಲಿಲ್ಲದ ಸಂತಸ. ಜೊತೆಗೆ ಅವರ ಈ ಕಾರ್ಯಕ್ಕೆ ನನ್ನದೂ ಒಂದು ಅಳಿಲು ಸೇವೆ ಎನ್ನುವ ರೀತಿ. ಬ್ಯಾಂಕ್'ಗೆ ನೋಟು ವಿನಿಮಯ ಮಾಡಿಕೊಳ್ಳಲು ತೆರಳುವ ಸಾರ್ವಜನಿಕರಿಗೆ ತಮ್ಮ ಆಟೋದಲ್ಲಿ ಉಚಿತ ಪಿಕಪ್ ಡ್ರಾಪ್ ನೀಡುತ್ತಿದ್ದಾರೆ.
ಸಾದಿಕ ಸೇವೆಯಿಂದ ಜನಸಾಮಾನ್ಯರು ಖೂಷಿಯಾಗಿದ್ದಾರೆ. ಅಷ್ಟೇ ಅಲ್ಲದೆ ಮೋದಿ ಅಭಿಮಾನಿಗಳು ಸಂತಸವ್ಯಕ್ತಪಡಿಸಿದ್ದು, ಈ ವಿಚಾರವನ್ನು ಟ್ವಿಟ್ಟರ್ ಮೂಲಕ ಪ್ರಧಾನಿಗೂ ಮುಟ್ಟಿಸುವ ಕೆಲಸ ಮಾಡಿದ್ದಾರೆ.
ದಿನವೊಂದಕ್ಕೆ 100 ರಿಂದ 150 ಜನರಿಗೆ ಸಾದಿಕ್ ಉಚಿತ ಆಟೋ ಪ್ರಯಾಣ ಸೇವೆ ನೀಡುತ್ತಿದ್ದಾರೆ.. ಹೊಟ್ಟೆಪಾಡಿಗಾಗಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುವ ಆಟೋ ಚಾಲಕನ ಈ ಸಮಾಜ ಸೇವೆ ನಿಜಕ್ಕೂ ಶ್ಲಾಘನೀಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.