
ನವದೆಹಲಿ(ನ.17): ರಾಜ್ಯದಲ್ಲಿ ಇಂದು ಕನಕ ಜಯಂತಿ ನಿಮಿತ್ತ ಸರ್ಕಾರಿ ರಜೆ ಇದೆ. ಆದರೆ, ಬ್ಯಾಂಕ್ಗಳಿಗೆ ಮಾತ್ರ ರಜೆಯಿಲ್ಲ. ಸಾರ್ವಜನಿಕರ ನೋಟು ವಿನಿಮಯ ಕಾರ್ಯಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಬ್ಯಾಂಕ್'ಗಳಿಗೆ ಘೋಷಿಸಿದ್ದ ರಜೆಗಳನ್ನು ಸರ್ಕಾರ ರದ್ದುಗೊಳಿಸಿದೆ. ಎಂದಿನಂತೆ ಅಂಚೆಕಚೇರಿಗಳ ಜೊತೆ ಬ್ಯಾಂಕ್'ಗಳು ಕಾರ್ಯನಿರ್ವಹಿಸಲಿವೆ.
ಬ್ಯಾಂಕ್'ಗಳಿಗೆ ಇನ್ನೂ ತಲುಪಿಲ್ಲ ಇಂಕ್
ನೋಟು ವಿನಿಮಯ ವೇಳೆ ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ನಿನ್ನೆಯಿಂದ ನೋಟು ವಿನಿಮಯ ಬಳಿಕ ಗ್ರಾಹಕರ ಕೈ ಬೆರಳಿಗೆ ಶಾಹಿ ಹಾಕುವ ಪದ್ಧತಿ ಜಾರಿಯಾಗಿದೆ. ಆದರೆ ಅದೆಷ್ಟೋ ಬ್ಯಾಂಕ್'ಗಳಿಗೆ ಇಂಕ್ ಪೂರೈಕೆಯಾಗಿಯೇ ಇಲ್ಲ.
ಧಾರ್ಮಿಕ ಸಂಸ್ಥೆಗಳಿಗೂ ಮಾಹಿತಿ ಕೇಳಿ ನೋಟಿಸ್
ಈ ಮಧ್ಯೆ ಆದಾಯ ತೆರೆಇಗೆ ಇಲಾಖೆ ದೇಶದ ಹಲವು ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜಸೇವಾ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ.ತಮ್ಮಲ್ಲಿರುವ ಹಣದ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವಂತೆ ಮಾರ್ಚ್ 31ರಿಂದ ನವೆಂಬರ್ 8ರವರೆಗೆ ಎಷ್ಟು ಹಣ ದಾನದ ರೂಪದಲ್ಲಿ ಬಂದಿದೆ ಎಂಬ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಒಟ್ಟಿನಲ್ಲಿ ರಜೆ ರದ್ದುಪಡಿಸುವ ಮೂಲಕ ಒಂದೆಡೆ ಗ್ರಾಹಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ರೆ, ಆದಾಯ ತೆರಿಗೆ ಇಲಾಖೆ ಲೆಕ್ಕ ಕೇಳುವ ಮೂಲಕ ಧಾರ್ಮಿಕ ಸಂಸ್ಥೆಗಳಿಗೆ ಹೊಸ ತಲೆನೋವು ಶುರುವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.