ಸಿಎಂ ಪ್ರಮಾಣ ವಚನ ಮುಗೀತು, ಯಾರಾಗ್ತಾರೆ ಸಚಿವರು?

First Published May 24, 2018, 11:05 AM IST
Highlights

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸಿಯಾಯ್ತು. ಆದರಿನ್ನೂ, ಯಾರು ಸಚಿವರಾಗುತ್ತಾರೆಂಬ ಕುತೂಹಲ ತಣಿದಿಲ್ಲ. ಯಾರಿಗೆ ಸಿಗುತ್ತೆ ಮಂತ್ರಿ ಸ್ಥಾನ? ಯಾರಿದ್ದಾರೆ ರೇಸ್‌ನಲ್ಲಿ?

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸಿಯಾಯ್ತು. ಆದರಿನ್ನೂ, ಯಾರು ಸಚಿವರಾಗುತ್ತಾರೆಂಬ ಕುತೂಹಲ ತಣಿದಿಲ್ಲ. ಯಾರಿಗೆ ಸಿಗುತ್ತೆ ಮಂತ್ರಿ ಸ್ಥಾನ? ಯಾರಿದ್ದಾರೆ ರೇಸ್‌ನಲ್ಲಿ?

ಮೈತ್ರಿ ಸೂತ್ರದಂತೆ ಕಾಂಗ್ರೆಸ್ ಗೆ 21 ಜೆಡಿಎಸ್ ಗೆ 11 ಸಚಿವ ಸ್ಥಾನಗಳನ್ನು ನೀಡಲು ನಿರ್ಧರಿಸಲಾಗಿದೆ. ಆದರೆ, ಉಭಯ ಪಕ್ಷಗಳಲ್ಲಿಯೂ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ವಿಶೇಷವಾಗಿ 78 ಶಾಸಕರ ಬಲ ಹೊಂದಿರುವ ಕಾಂಗ್ರೆಸ್‌ಗೆ ಸಚಿವಾಕಾಂಕ್ಷಿಗಳನ್ನು ಸಮಾಧಾನ ಪಡಿಸೋದೇ ದೊಡ್ಡ ತಲೆನೋವಾಗಿದೆ. ಅದರಲ್ಲಿಯೂ 14 ಲಿಂಗಾಯತ ಶಾಸಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು, ನಾಲ್ವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ಚಿಂತಿಸಿದೆ. ಆದ್ರೆ ಒಬ್ಬರಿಗೆ ಕೊಟ್ರೆ ಮತ್ತೊಬ್ಬರು ಮುನಿಸಿಕೊಂಡು ಬಂಡಾಯ ಏಳುವ ಭೀತಿ ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿದೆ.

ಸಚಿವ ಸ್ಥಾನದ ರೇಸ್‌ನಲ್ಲಿರೋ ಶಾಸಕರು...


ಲಿಂಗಾಯತ

ಶ್ಯಾಮನೂರು ಶಿವಶಂಕರಪ್ಪ - ದಾವಣಗೆರೆ

ಎಂ. ಬಿ ಪಾಟೀಲ್ - ಬಬಲೇಶ್ವರ್ - ವಿಜಾಪುರ ಜಿಲ್ಲೆ

ಶಿವಾನಂದ ಪಾಟೀಲ್ - ಬಸವನ ಬಾಗೇವಾಡಿ - ವಿಜಾಪುರ ಜಿಲ್ಲೆ

ಈಶ್ವರ್ ಖಂಡ್ರೆ - ಭಾಲ್ಕಿ - ಬೀದರ್ ಜಿಲ್ಲೆ

ರಾಜಶೇಖರ್ ಪಾಟೀಲ್ - ಹುನ್ನಾಬಾದ್ - ಬೀದರ್ ಜಿಲ್ಲೆ

ಬಿ.ಸಿ ಪಾಟೀಲ್ - ಹಿರೇಕೇರೂರು - ಹಾವೇರಿ ಜಿಲ್ಲೆ

ಎಸ್. ಆರ್ ಪಾಟೀಲ್ - ಪರಿಷತ್ ಸದಸ್ಯ- ಬಾಗಲಕೋಟೆ.

ಅಮರೇಗೌಡ ಬಯ್ಯಾಪುರ - ಕೊಪ್ಪಳ ಜಿಲ್ಲೆ

ಲಕ್ಷ್ಮೀ ಹೆಬ್ಬಾಳ್ಕರ್ - ಬೆಳಗಾವಿ - 
ಎಚ್.ಕೆ ಪಾಟೀಲ್ - ಗದಗ 

ಒಕ್ಕಲಿಗ
ಟಿ.ಡಿ ರಾಜೇಗೌಡ - ಚಿಕ್ಕಮಗಳೂರು 

ಕೃಷ್ಣಭೈರೇಗೌಡ - ಬೆಂಗಳೂರು 

ಎಂ ಕೃಷ್ಣಪ್ಪ - ವಿಜಯನಗರ, ಬೆಂಗಳೂರು

ಸುಧಾಕರ್ - ಚಿಕ್ಕಬಳ್ಳಾಪುರ

ಸತೀಶ್ ಜಾರಕಿಹೊಳಿ - ಬೆಳಗಾವಿ

ಬ್ರಾಹ್ಮಣ

ಆರ್.ವಿ ದೇಶಪಾಂಡೆ - ಹಳಿಯಾಲ-ಉತ್ತರ ಕನ್ನಡ ಜಿಲ್ಲೆ

ದಿನೇಶ್ ಗುಂಡೂರಾವ್ - ಬೆಂಗಳೂರು ನಗರ 

ಮುಸ್ಲಿಂ
ಯು.ಟಿ ಖಾದರ್ - ದಕ್ಷಿಣ ಕನ್ನಡ  
ತುಕಾರಾಮ್ - ಬಳ್ಳಾರಿ ಜಿಲ್ಲೆ 

ನಾಯಕ
ಬಿ.ಕೆ ಸಂಗಮೇಶ್ - ಭದ್ರಾವತಿ, ಶಿವಮೊಗ್ಗ 


ರೆಡ್ಡಿ ಸಮುದಾಯ

ಶಿವಶಂಕರ ರೆಡ್ಡಿ  - ಚಿಕ್ಕಬಳ್ಳಾಪುರ ಜಿಲ್ಲೆ 

ರಾಮಲಿಂಗಾರೆಡ್ಡಿ - ಬೆಂಗಳೂರು

ಕ್ರೈಸ್ತ ಸಮುದಾಯ

ಕೆ.ಜೆ ಜಾರ್ಜ್ - ಬೆಂಗಳೂರು


ಉಪ್ಪಾರ
ಪುಟ್ಟರಂಗ ಶೆಟ್ಟಿ - ಚಾಮರಾಜನಗರ 


ಅಲ್ಪಸಂಖ್ಯಾತ 
ಜಮೀರ್ ಅಹಮದ್ - ಬೆಂಗಳೂರು - 

ದಲಿತ (ಎಡ)
ರೂಪಾ ಶಶಿಧರ್-  ಕೋಲಾರ 

ದಲಿತ (ಬಲ)
ಪ್ರೀಯಾಂಕ ಖರ್ಗೆ - ಕಲಬುರಗಿ

ಜೆಡಿಎಸ್ 

ಒಕ್ಕಲಿಗ

ಸತ್ಯನಾರಾಯಣ್ - ತುಮಕೂರು ಜಿಲ್ಲೆ

ಶ್ರೀನಿವಾಸ ಗೌಡ - ಕೋಲಾರ ಜಿಲ್ಲೆ 
ಜಿ.ಟಿ ದೇವೇಗೌಡ-ಮೈಸೂರು ಜಿಲ್ಲೆ
ಸಿ.ಎಸ್ ಪುಟ್ಟರಾಜು - ಮಂಡ್ಯ
ಎಚ್‌.ಡಿ ರೇವಣ್ಣ - ಹಾಸನ 

ಲಿಂಗಾಯತ 

ಬಂಡೆಪ್ಪ ಕಾಶಂಪುರ್ - ಬೀದರ್ 
ಬಸವರಾಜ್ ಹೊರಟ್ಟಿ - ಧಾರವಾಡ ಜಿಲ್ಲೆ


ಕುರುಬ

ವೆಂಕಟರಾವ್ ನಾಡಗೌಡ - ರಾಯಚೂರು ಜಿಲ್ಲೆ 


ಎಚ್‌. ವಿಶ್ವನಾಥ್ - ಮೈಸೂರ್ ಜಿಲ್ಲೆ 
ಆರ್. ಶಂಕರ್ - ಪಕ್ಷೇತರ 

ದಲಿತ

ಎಸ್ ಮಹೇಶ್ - ಚಾಮರಾಜ ನಗರ 

ಎಚ್ ನಾಗೇಶ್ - ಪಕ್ಷೇತರ  

ಮೈತ್ರಿ ಇಷ್ಟವಿಲ್ಲದವರು ಬಿಜೆಪಿಗೆ ಬನ್ನಿ: ಬೆಎಸ್‌ವೈ
 

click me!