
ಬೆಂಗಳೂರು(ಮಾ.13): ನಗರದ ಹಲವಡೆ ಬಿಬಿಎಂಪಿ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಮುಂದುವರಿದಿದೆ. ಇದೀಗ ಆರ್.ವಿ.ರಸ್ತೆ, ಲಾಲ್‌ಬಾಗ್ ನಿಂದ ಬನಶಂಕರಿ ಟಿಟಿಎಂಸಿ ವರೆಗಿನ ಕಾಮಗಾರಿ ಆರಂಭಗೊಂಡಿದೆ. ಹೀಗಾಗಿ ಕಾಮಗಾರಿ ನಡೆಯುವ ಹಿನ್ನಲೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ: ತಳ್ಳಾಡುವ ಬಿಎಂಟಿಸಿ ಕಂಡಕ್ಟರ್, ಈ ದೂರು ಎಲ್ಲ ಮಹಿಳೆಯರ ದನಿ
ಅರ್ ವಿ ರಸ್ತೆ, ಲಾಲ್ ಬಾಗ್, ಮಾರೇನಹಳ್ಳಿ ಜಂಕ್ಷನ್, ಬನಶಂಕರಿ ಟಿಟಿಎಂಸಿ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ನಾಳೆಯಿಂದ(ಮಾ.14) ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಲಿದೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಮಾಹಿತಿಗಾಗಿ ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: ಎಲಿವೇಟೆಡ್ ಕಾರಿಡಾರ್ ಬದಲು ಕಾಂಕ್ರಿಟ್ ಸೇತುವೆ, ಬೆಂಗಳೂರಿನ ಯಾವ ಮಾರ್ಗ?
ಸರಿ ಸುಮಾರು 1 ತಿಂಗಳಿಗೂ ಹೆಚ್ಚು ಕಾಲ ವೈಟ್ ಟಾಪಿಂಗ್ ನಡೆಯಲಿದೆ. ಕಾಮಗಾರಿಯಿಂದ ಈ ಮಾರ್ಗಗಳಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಲಿದೆ. ಹೀಗಾಗಿ ವಾಹನ ಸವಾರರು ಮಾರ್ಗ ಬದಲಾಯಿಸಿ ಸಂಚರಿಸಲು ಬಿಬಿಎಂಪಿ ಸೂಚಿಸಿದೆ. ಇಷ್ಟೇ ಅಲ್ಲ ಅಡಚಣೆಗೆ ಸಹಕರಿಸಬೇಕಾಗಿ ಮನವಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.