ಪಿಯು ಪರೀಕ್ಷೆ ಬರೆದ ಒಬ್ಬ ವಿದ್ಯಾರ್ಥಿಗಾಗಿ 14 ಸಿಬ್ಬಂದಿ!

By Web Desk  |  First Published Mar 13, 2019, 1:08 PM IST

ಪಿಯು ಪರೀಕ್ಷೆ ಬರೆದ ಒಬ್ಬ ವಿದ್ಯಾರ್ಥಿಗಾಗಿ 14 ಸಿಬ್ಬಂದಿ! ಕೊಟ್ಟೂರು ಕಾಲೇಜಿನಲ್ಲಿ ಭೂಗೋಳಶಾಸ್ತ್ರ ಪರೀಕ್ಷೆಗೆ ಒಬ್ಬನೇ ವಿದ್ಯಾರ್ಥಿ ಹಾಜರಾಗಿದ್ದಾನೆ. 


ಕೊಟ್ಟೂರು (ಮಾ. 13): ಪರೀಕ್ಷೆ ಬರೆದಿದ್ದು ಒಬ್ಬನೇ ವಿದ್ಯಾರ್ಥಿ. ಆದರೆ ಪರೀಕ್ಷೆ ನಡೆಸಲು ನಿಯೋಜನೆಗೊಂಡಿದ್ದು 14 ಸಿಬ್ಬಂದಿ!

ಹೌದು ಇಂತಹ ಘಟನೆಯೊಂದು ನಡೆದದ್ದು ಕೊಟ್ಟೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ. ಮಂಗಳವಾರ ನಡೆದ ದ್ವಿತೀಯ ಪಿಯು ಭೂಗೋಳ ಶಾಸ್ತ್ರ (ಜಿಯಾಗ್ರಫಿ) ಪರೀಕ್ಷೆಗೆ ಕೊಟ್ಟೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಕಾಶ ಎಂಬ ಏಕೈಕ ವಿದ್ಯಾರ್ಥಿ ಹಾಜರಾಗಿದ್ದ.

Tap to resize

Latest Videos

ಅದೂ ಖಾಸಗಿ(ಬಾಹ್ಯ) ವಿದ್ಯಾರ್ಥಿಯಾಗಿ ಶಿಕ್ಷಣ ವಿಭಾಗ ಆಯ್ಕೆ ಮಾಡಿಕೊಂಡು ಭೂಗೋಳಶಾಸ್ತ್ರ ವಿಷಯದಲ್ಲಿ ಪರೀಕ್ಷೆ ಬರೆದಿದ್ದ. ಈ ವಿಷಯ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವುದು ವಿರಳ ಎನ್ನಲಾಗಿದೆ. ಪರೀಕ್ಷಾ ಮೇಲ್ವಿಚಾರಕರು, ವಿಚಕ್ಷಕ ದಳ, ಸಿಟ್ಟಿಂಗ್‌ ಸ್ಕಾ$್ವಡ್‌, ಉತ್ತರ ಪತ್ರಿಕೆ ಪಾಲಕರು, ಅಧೀಕ್ಷಕರು ಸೇರಿದಂತೆ 14 ಸಿಬ್ಬಂದಿ ಕಾರ್ಯನಿರ್ವಹಿಸಿದರು.

click me!