ಮೈಮೇಲೆ ಹಚ್ಚೆ ಇದ್ದರೆ ಭಾರತೀಯ ವಾಯುಪಡೆ ಸೇರುವಂತಿಲ್ಲ

By Suvarna Web DeskFirst Published Jan 30, 2018, 10:05 AM IST
Highlights

ಭಾರತೀಯ ವಾಯು ಪಡೆಗೆ ಸೇರಿಕೊಳ್ಳುವ ಆಕಾಂಕ್ಷೆ ಹೊಂದಿರುವವರು ಕೈ ಮತ್ತು ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಆಸೆ ಬಿಡುವುದು ಒಳಿತು. ಇಲ್ಲದಿದ್ದರೆ, ವಾಯು ಪಡೆಗೆ ಸೇರಬೇಕೆಂಬ ಆಸೆ ಈಡೇರುವುದಿಲ್ಲ.

ನವದೆಹಲಿ: ಭಾರತೀಯ ವಾಯು ಪಡೆಗೆ ಸೇರಿಕೊಳ್ಳುವ ಆಕಾಂಕ್ಷೆ ಹೊಂದಿರುವವರು ಕೈ ಮತ್ತು ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಆಸೆ ಬಿಡುವುದು ಒಳಿತು. ಇಲ್ಲದಿದ್ದರೆ, ವಾಯು ಪಡೆಗೆ ಸೇರಬೇಕೆಂಬ ಆಸೆ ಈಡೇರುವುದಿಲ್ಲ. ಹೌದು, ಮೊಣಕೈಗೆ ಶಾಶ್ವತವಾದ ಹಚ್ಚೆ ಹಾಕಿಸಿಕೊಂಡಿದ್ದ ವ್ಯಕ್ತಿಯ ನೇಮಕಾತಿಯನ್ನು ರದ್ದುಗೊಳಿಸಿದ್ದ ಭಾರತೀಯ ವಾಯು ಪಡೆಯ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ.

ಆದರೆ ಬುಡಕಟ್ಟು ಜನಾಂಗದಲ್ಲಿರುವ ಸಾಂಪ್ರದಾಯಿಕ ಹಚ್ಚೆಗಳಿಗೆ ವಿನಾಯ್ತಿ ನೀಡಲಾಗಿದೆ. 2016ರಲ್ಲಿ ಭಾರತೀಯ ವಾಯುಪಡೆ ನೇಮಕಾತಿಗೆ ವ್ಯಕ್ತಿಯೋರ್ವ ಅರ್ಜಿ ಸಲ್ಲಿಸಿದ್ದ. ಬಳಿಕ ಸೇನೆ ನಡೆಸುವ ಎಲ್ಲ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ 2017ರ ಡಿಸೆಂಬರ್ 24ರಂದು ಸೇವೆಗೆ ಹಾಜರಾಗುವಂತೆ ನೇಮಕಾತಿ ಪ್ರತಿಯನ್ನು ಪಡೆದಿದ್ದ.

ಆದರೆ, ಕೆಲಸಕ್ಕೆ ಹಾಜರಾದ ಮಾರನೇ ದಿನವೇ ವ್ಯಕ್ತಿಯ ಮೊಣಕೈ ಮೇಲೆ ಶಾಶ್ವತವಾದ ಹಚ್ಚೆ ಇದ್ದು, ಈ ಹಿನ್ನೆಲೆಯಲ್ಲಿ ತಮ್ಮ ನೇಮಕಾತಿ ರದ್ದುಗೊಳಿಸಲಾಗಿದೆ ಎಂದು ಪತ್ರ ನೀಡಲಾಗಿತ್ತು. ಇದರಿಂದ ಆಕ್ರೋಶಗೊಂಡ ವ್ಯಕ್ತಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.

click me!