ಭಾರತದಲ್ಲಿ ಉಗ್ರ ಕೃತ್ಯಕ್ಕೆ 386 ಉಗ್ರರಿಗೆ ಪಾಕ್ ತರಬೇತಿ

By Suvarna Web DeskFirst Published Jan 30, 2018, 9:33 AM IST
Highlights

ಪಾಕಿಸ್ತಾನ ಸೇನೆ ಮತ್ತು ಗೂಢಾಚರ್ಯೆ ಸಂಸ್ಥೆ(ಐಎಸ್‌ಐ)ಯಿಂದ ತರಬೇತಿ ಪಡೆದ 386 ಉಗ್ರರ ತಂಡ ಭಾರತದ ಜಮ್ಮು- ಕಾಶ್ಮೀರದೊಳಕ್ಕೆ ನುಸುಳಿ, ಉಗ್ರ ಕೃತ್ಯವೆಸಗಲು ಸಜ್ಜಾಗಿದೆ ಎಂಬ ಮಾಹಿತಿ ಗುಪ್ತಚರದಿಂದ ಬಯಲಾಗಿದೆ.

ನವದೆಹಲಿ: ಪಾಕಿಸ್ತಾನ ಸೇನೆ ಮತ್ತು ಗೂಢಾಚರ್ಯೆ ಸಂಸ್ಥೆ(ಐಎಸ್‌ಐ)ಯಿಂದ ತರಬೇತಿ ಪಡೆದ 386 ಉಗ್ರರ ತಂಡ ಭಾರತದ ಜಮ್ಮು- ಕಾಶ್ಮೀರದೊಳಕ್ಕೆ ನುಸುಳಿ, ಉಗ್ರ ಕೃತ್ಯವೆಸಗಲು ಸಜ್ಜಾಗಿದೆ ಎಂಬ ಮಾಹಿತಿ ಗುಪ್ತಚರದಿಂದ ಬಯಲಾಗಿದೆ.

ಇತ್ತೀಚೆಗಷ್ಟೇ ಪಾಕಿಸ್ತಾನ ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐನ ಹಿರಿಯ ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಉಗ್ರರಿಗೆ ದಾಳಿ ತರಬೇತಿ, ಶಸ್ತ್ರಾಸ್ತ್ರ ಮತ್ತು ಅವರನ್ನು ಭಾರತದೊಳಕ್ಕೆ ನುಗ್ಗಿಸುವ ತೀರ್ಮಾನ ಕೈಗೊಳ್ಳಲಾಗಿತ್ತು ಎಂಬುದು ಗುಪ್ತಚರದಳದಿಂದ ಗೊತ್ತಾಗಿದೆ.

ಈ ಪ್ರಕಾರ 386 ಮಂದಿಯಿರುವ ವಿಶೇಷ ಕಾರ್ಯಪಡೆ ಹೆಸರಿನ ಉಗ್ರರ ಪಡೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 13 ಲಾಂಚ್‌ಪಾಡ್‌ಗಳಲ್ಲಿ ನೆಲೆಗೊಂಡಿದೆ ಎಂದೂ ಹೇಳಲಾಗಿದೆ. ಆದರೆ, ಪಾಕಿಸ್ತಾನದ ಇಂಥ ಚಟುವಟಿಕೆಗಳನ್ನು ವಿಫಲಗೊಳಿಸುವ ಸಾಮರ್ಥ್ಯ ನಮಗಿದೆ ಎಂದು ಭಾರತ ಭದ್ರತಾ ಪಡೆ ತಿಳಿಸಿದೆ.

click me!