ತ್ರಿಭಾಷಾ ಶಿಕ್ಷಣ ಸೂತ್ರಕ್ಕೆ ಪ.ಬಂಗಾಳದಲ್ಲಿ ವಿರೋಧ| ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ವಿರುದ್ಧ ಭಾರೀ ಪ್ರತಿಭಟನೆ| ಒತ್ತಾಯದ ಹಿಂದಿ ಹೇರಿಕೆ ಸಲ್ಲ ಎಂದ ಪ.ಬಂಗಾಳ|
ಕೋಲ್ಕತ್ತಾ(ಜೂ.02): ಹಿಂದಿ ಕಲಿಕೆಗೆ ಮಾನವ ಸಂಪನ್ಮೂಲ ಇಲಾಖೆಗೆ ಹೊರಡಿಸಿರುವ ಆದೇಶವನ್ನು ಪ.ಬಂಗಾಳ ತಿರಸ್ಕರಿಸಿದೆ.
ಹಿಂದಿ ಕಲಿಕೆಯನ್ನು ಕಡ್ದಾಯಗೊಳಿಸುವುದರ ವಿರುದ್ಧ ತಮಿಳುನಾಡಿನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಇದೀಗ ಪ.ಬಂಗಾಳ ಕೂಡ ಕೇಂದ್ರದ ಒತ್ತಾಯ ಪೂರ್ವಕ ಹಿಂದಿ ಹೇರಿಕೆಯನ್ನು ವಿರೋಧಿಸಿದೆ.
undefined
ರಾಜ್ಯದ ಶಿಕ್ಷಣ ತಜ್ಞರು, ಬರಹಗಾರರ ಗುಂಪು ಹಿಂದಿ ಹೇರಿಕೆಯನ್ನು ವಿರೋಧಿಸಿದ್ದು, ಶಾಲೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಲು ವಿರೋಧಿಸಿದ್ದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ 8 ನೇ ತರಗತಿ ವರೆಗೆ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಬೇಕೆಂಬ ಅಂಶವನ್ನು ಸೇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.