ಇಫ್ತಾರ್ ಅತಿಥಿಗಳಿಗೆ ತಡೆ: ಪಾಕ್ ವಿರುದ್ಧ ಸಿಡಿದೆದ್ದ ಭಾರತ!

By Web DeskFirst Published Jun 2, 2019, 8:00 PM IST
Highlights

ಭಾರತದ ರಾಯಭಾರಿ ಕರೆದ ಇಫ್ತಾರ್ ಕೂಟದ ಅತಿಥಿಗಳನ್ನು ತಡೆದ ಪಾಕ್| ಇಸ್ಲಾಮಾಬಾದ್‌ನಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದ ಅಜಯ್ ಬಿಸಾರಿಯಾ| ಹೊಟೇಲ್ ಸೆರೆನಾ ಸುತ್ತುವರೆದು ಅತಿಥಿಗಳನ್ನು ತಡೆದ ಪಾಕ್ ಅಧಿಕಾರಿಗಳು| ಪಾಕ್ ಉದ್ಘಟತನವನ್ನು ತೀವ್ರ ವಿರೋಧಿಸಿದ ಭಾರತ| ಪಾಕಿಸ್ತಾನ ಅನಾಗರಿಕ ವರ್ತನೆ ತೋರಿದೆ ಎಂದ ಭಾರತ| ಸೂಕ್ತ ತನಿಖೆಗೆ ಪಾಕ್‌ನ್ನು ಒತ್ತಾಯಿಸಿದ ಭಾರತ|

ನವದೆಹಲಿ(ಜೂ.02): ಪಾಕಿಸ್ತಾನಕ್ಕೆ ಭಾರತದ ರಾಯಭಾರಿ ಅಜಯ್ ಬಿಸಾರಿಯಾ ಕರೆದಿದ್ದ ಇಫ್ತಾರ್ ಕೂಟಕ್ಕೆ ಭಂಗ ಉಂಟು ಮಾಡಿರುವ ಪಾಕಿಸ್ತಾನ, ಇಫ್ತಾರ್ ಕೂಟದ ಅತಿಥಿಗಳನ್ನು ತಡೆದು ಉದ್ಘಟತನ ಮೆರೆದಿದೆ.

ಇಸ್ಲಾಮಾಬಾದ್‌ನಲ್ಲಿರುವ ಹೋಟೆಲ್ ಸೆರೆನಾದಲ್ಲಿ ಭಾರತದ ರಾಯಭಾರಿ ಅಜಯ್ ಬಿಸಾರಿಯಾ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಆದರೆ ಸೆರೆನಾ ಹೋಟೆಲ್‌ನ್ನು ಸುತ್ತುವರೆದ ಪಾಕ್ ಅಧಿಕಾರಿಗಳು, ಇಫ್ತಾರ್ ಕೂಟಕ್ಕೆ ಬಂದ ಅತಥಿಗಳನ್ನು ವಾಪಸ್ ಕಳುಹಿಸಿದರು.

ಪಾಕಿಸ್ತಾನದ ಉದ್ಘಟತನವನ್ನು ತೀವ್ರ ವಿರೋಧಿಸಿರುವ ಭಾರತ, ಪಾಕ್ ಅನಾಗರಿಕ ವರ್ತನೆ ತೋರಿದೆ ಎಂದು ಕಟು ಶಬ್ಧಗಳಿಂದ ಟೀಕಿಸಿದೆ.

India lodges strong protest with Pak for intimidating guests at Iftar party

Read Story | https://t.co/mu4YOFFO1g pic.twitter.com/oxB5e4jmTu

— ANI Digital (@ani_digital)

ಈ ಕುರಿತು ಪತ್ರ ಬರೆದಿರುವ ಅಜಯ್ ಬಿಸಾರಿಯಾ, ಪಾಕಿಸ್ತಾನದ ವರ್ತನೆ ನಾಗರಿಕ ಸಮಾಜಕ್ಕೆ ಶೋಭೆ ತರುವಂತದ್ದಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ರಾಯಭಾರಿ ಹಕ್ಕಿನ ಉಲ್ಲಂಘನೆ ಮಾಡಿರುವ ಪಾಕಿಸ್ತಾನ ಈ ಕುರಿತು ಸೂಕ್ತ ತನಿಖೆ ನಡೆಸಲಿದೆ ಎಂದು ಭಾರತ ಭರವಸೆ ವ್ಯಕ್ತಪಡಿಸಿದೆ.

click me!