ರಾಜ್ಯಾದ್ಯಾಂತ ಭಾರೀ ಮಳೆ: ಮುನ್ಸೂಚನೆ

First Published May 24, 2018, 6:11 PM IST
Highlights
  • ಮುಂದಿನ 2 ದಿನ ಭಾರಿ ಮಳೆಯಾಗುವ ಮುನ್ಸೂಚನೆ
  • ಮಲೆನಾಡು, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ

ಬೆಂಗಳೂರು: ಮುಂದಿನ 2 ದಿನ ರಾಜ್ಯದ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ರಾಜ್ಯದ ಕರಾವಳಿ, ಮಲೆನಾಡು, ಮತ್ತು ದಕ್ಷಿಣ ಒಳನಾಡಿನಲ್ಲಿ ಗುರುವಾರ ಮತ್ತು ಶುಕ್ರವಾರ ಗಾಳಿ, ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಇಲಾಖೆ ನೀಡಿದೆ.   

Updated 24hrs Forecast map pic.twitter.com/E8ypRN50ns

— KSNDMC (@KarnatakaSNDMC)

ಉತ್ತರ ಕನ್ನಡ, ಉಡುಪಿ ಹಾಗೂ ಉಡುಪಿ ಜಿಲ್ಲೆಗಳಲ್ಲಿ  ಮುಂದಿನ ನಾಲ್ಕೈದು ದಿನ ಮಳೆಯಾಗಬಹುದು.  

ನೆರೆಯ ಕೇರಳ ರಾಜ್ಯದಲ್ಲಿ  ಮುಂದಿನ ವಾರವೇ ಮಾನ್ಸೂನ್ ಪ್ರವೇಶಿಸಲಿದ್ದು, ರಾಜ್ಯದಲ್ಲಿ ಮೇ.29 ರಿಂದ ಜೂ.2 ನಡುವೆ ಮಳೆಗಾಲ ಆರಂಭವಾಗುವ ಸಾಧ್ಯತೆಗಳಿವೆ. 

ಈ ಬಾರಿ ರಾಜ್ಯದಲ್ಲಿ  ಉತ್ತಮ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. 

 

click me!