
ಹೈದರಾಬಾದ್ (ಮೇ. 24): ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ಸಮಸ್ಯೆ ಎದುರಾಗಿದೆ ಅಂತಾ ಅದರ ನಾಯಕರೆಲ್ಲಾ ತಲೆ ಕೆಡಿಸಿಕೊಂಡು ಕೂತಿದ್ದರೆ, ಇತ್ತ ಭಕ್ತರೊಬ್ಬರು ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ಕಾಣಿಕೆ ನೀಡಿದ್ದಾರೆ. ಹೈದರಾಬಾದ್ ಮೂಲದ ಉದ್ಯಮಿ ಬಿ. ಕರುಣಾಕರ್ ರೆಡ್ಡಿ ಎಂಬುವರೇ ಟಿಟಿಡಿಗೆ ಒಂದು ಕೋಟಿ ರೂ. ಕಾಣಿಕೆ ನೀಡಿದವರು.
ಕುಟುಂಬ ಸಮೇತ ತಿರುಪತಿ ದೇವಸ್ಥಾನಕ್ಕೆ ಆಗಮಿಸಿದ ರೆಡ್ಡಿ, ಟಿಟಿಡಿ ಯ ಕಾರ್ಯನಿರ್ವಾಹಕ ಅಧಿಕಾರಿ ಕೆಎಸ್ ಶ್ರೀನಿವಾಸ್ ರಾಜು ಅವರಿಗೆ ಒಂದು ಕೋಟಿ ರೂ. ಮೌಲ್ಯದ ಚೆಕ್ ಕಾಣಿಕೆಯಾಗಿ ನೀಡಿದರು. ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದು, ಅವರ ಈ ಕಾರ್ಯಕ್ಕೆ ಕೈ ಜೋಡಿಸುತ್ತಿರುವುದಾಗಿ ಕರುಣಾಕರ್ ರೆಡ್ಡಿ ಹೇಳಿದ್ದಾರೆ.
ಇನ್ನು ಕರುಣಾಕರ್ ಅವರ ಸೇವೆ ಶ್ಲಾಘನೀಯ ಎಂದು ಟಿಟಿಡಿ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ. ಕಳೆದ ವಾರವಷ್ಟೇ ವೆಂಕಟೇಶ್ವರುಲು ಎಂಬ ಮತ್ತೋರ್ವ ಉದ್ಯಮಿ ಕೂಡ ಟಿಟಿಡಿಗೆ 1.60 ಕೋಟಿ ರೂ. ದೇಣಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.