ಸಿಎಂ ಜನತಾ ದರ್ಶನಕ್ಕೆ ಬಂದು ವಾಪಸ್ಸಾದ ಜನ

First Published May 24, 2018, 6:10 PM IST
Highlights

ರಾಜ್ಯದಲ್ಲಿ ಜನತಾ ದರ್ಶನ ಎಂಬ ಕಾನ್ಸೆಪ್ಟ್ ಮೂಲಕ ಜನರಿಗೆ ಹತ್ತಿರವಾದ ಮೊದಲ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು. ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಜನತಾ ದರ್ಶನದ ಮೂಲಕ ಜನರ ಸಮಸ್ಯೆಗಳನ್ನು ಆಲಿಸುವ ಪರಿಪಾಠ ಹಾಕಿ ಕೊಟ್ಟರು. ಅದರಂತೆ ಮುಂದೆ ಬಂದ ಮುಖ್ಯಮಂತ್ರಿಗಳೂ ಕೂಡ ಜನತಾ ದರ್ಶನ ಮುಂದುವರೆಸಿದ್ದರು.

ಬೆಂಗಳೂರು (ಮೇ. 24): ರಾಜ್ಯದಲ್ಲಿ ಜನತಾ ದರ್ಶನ ಎಂಬ ಕಾನ್ಸೆಪ್ಟ್ ಮೂಲಕ ಜನರಿಗೆ ಹತ್ತಿರವಾದ ಮೊದಲ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು. ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಜನತಾ ದರ್ಶನದ ಮೂಲಕ ಜನರ ಸಮಸ್ಯೆಗಳನ್ನು ಆಲಿಸುವ ಪರಿಪಾಠ ಹಾಕಿ ಕೊಟ್ಟರು. ಅದರಂತೆ ಮುಂದೆ ಬಂದ ಮುಖ್ಯಮಂತ್ರಿಗಳೂ ಕೂಡ ಜನತಾ ದರ್ಶನ ಮುಂದುವರೆಸಿದ್ದರು.

ಇದೀಗ ಬದಲಾದ ಸನ್ನಿವೇಶದಲ್ಲಿ ಕುಮಾರಸ್ವಾಮಿ ಮತ್ತೆ ಸಿಎಂ ಆಗಿದ್ದಾರೆ. ಅಲ್ಲದೇ ತಮ್ಮದೇ ಕಾನ್ಸೆಪ್ಟ್ ಆದ ಜನತಾ ದರ್ಶನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿಭಾಯಿಸಲಿದ್ದಾರೆ ಎಂಬ ನಿರೀಕ್ಷೆ ಕೂಡ ಇದೆ. ಆದರೆ ಇಂದು ಮಧ್ಯಾಹ್ನ 2:30ಕ್ಕೆ ನಿಗದಿಯಾಗಿದ್ದ ಸಿಎಂ ಜನತಾ ದರ್ಶನ ರದ್ದಾಗಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಿಗದಿಯಾಗಿದ್ದ ಜನತಾ ದರ್ಶನಕ್ಕೆ ಕಾದು ಕಾದು ಜನಸಾಮ್ಯಾರು ಸುಸ್ತಾಗಿದ್ದಾರೆ.

ಸಿಎಂ ಭೇಟಿಗೆ ಕಾತರರಾಗಿದ್ದ ಜನ ಕಾರ್ಯಕ್ರಮ ಇಲ್ಲ ಎಂದು ಗೊತ್ತಾದ ಮೇಲೆ ಮನೆಯತ್ತ ಹೆಜ್ಜೆ ಹಾಕಿದರು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಸಿಎಂ ಅವರ ಆಪ್ತ ಮೂಲಗಳು ಕುಮಾರಸ್ವಾಮಿ ಅವರು ಖಾಸಗಿ ಹೊಟೇಲ್ ನಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಭಾಗವಹಿಸಿದ್ದರ ಪರಿಣಾಮ ಜನತಾ ದರ್ಶನಕ್ಕೆ ಬರಲಾಗಲಿಲ್ಲ ಎಂದು ಹೇಳಿದೆ. ಅಲ್ಲದೇ ಈ ಮೊದಲೇ ಹೇಳಿದಂತೆ ನಾಳೆ ಜನತಾ ದರ್ಶನ ಕಾರ್ಯಕ್ರಮ ನಡೆಸುವುದಾಗಿ ಕುಮಾರಸ್ವಾಮಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

click me!