ಹೆಣ್ಣು ಮಗು ಸ್ವಾಗತಿಸಿದ ವಿರುಷ್ಕಾ, ಕೇಂದ್ರಕ್ಕೆ ಕೃಷಿ ಕಾಯ್ದೆ ಸಂಕಷ್ಟ; ಜ.11ರ ಟಾಪ್ 10 ಸುದ್ದಿ!

By Suvarna News  |  First Published Jan 11, 2021, 5:01 PM IST

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಕೃಷಿ ಕಾಯ್ದೆ ಹಾಗೂ ರೈತರ ಪ್ರತಿಭಟನೆ ಕುರಿತು ಸುಪ್ರೀಂ ಕೋರ್ಟ್ ಕೆಲ ಮಹತ್ವದ ವಿಚಾರಗಳನ್ನು ಪ್ರಕಟಿಸಿದೆ. ಚೀನಾದಲ್ಲಿ ಹೊಸ ಕೊರೋನಾ ಕೇಸ್ ಪತ್ತೆಯಾಗಿದೆ. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನಿಂದ ಪಾರಾಗಿದೆ. ಮೌನಿ ರಾಯ್ ಹಾಟ್ ಫೋಟೋ, ಕುಮಾರಸ್ವಾಮಿ 3 ಕೋಟಿ ಆಫರ್ ಬಾಂಬ್ ಸೇರಿದಂತೆ ಜನವರಿ 11ರ ಟಾಪ್ 10 ಸುದ್ದಿ ವಿವರ ಇಲ್ಲಿದೆ
 


ವಿಶ್ವಾಸ ಮೂಡಲು ನಾನೇ ಮೊದಲ ಲಸಿಕೆ ಪಡೆಯುವೆ: ಸಚಿವ ಸುಧಾಕರ್...

Tap to resize

Latest Videos

ಜನರಲ್ಲಿ ವಿಶ್ವಾಸ ಮೂಡಿಸಲು ನಾನೇ ಮೊದಲು ಲಸಿಕೆ ಪಡೆಯುತ್ತೇನೆ. ಆದರೆ ಅದಕ್ಕೂ ಮೊದಲು ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಟವಾಗಬೇಕು. ಮಾರ್ಗಸೂಚಿಯಲ್ಲಿ ಯಾರಾರ‍ಯರು ಲಸಿಕೆ ಪಡೆಯಬಹುದು ಎಂಬಿತ್ಯಾದಿ ಎಲ್ಲಾ ಅಂಶಗಳೂ ಇರಲಿವೆ ಎಂದು ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ. 

ಕೃಷಿ ಕಾಯ್ದೆ: ಕೇಂದ್ರಕ್ಕೆ ಸುಪ್ರಿಂ ಕೋರ್ಟ್ ಹೇಳಿದ್ದಿಷ್ಟು!...

ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ| ಕೃಷಿ ಕಾಯ್ದೆ ವಿರುದ್ಧ ಸಲ್ಲಿಸಲಾದ ವಿವಿಧ ಅರ್ಜಿಗಳುಕೇ ವಿಚಾರಣೆ ನಡೆಸಿದ ಸುಪ್ರೀಂ| ಈ ಕುರಿತಾಘಿ ಹೆಚ್ಚಿನ ಮಾಹಿತಿ ನೀಡಿ ಎಂದು ಕೇಂದ್ರಕ್ಕೆ ಆದೇಶಿಸಿದ ಕೋರ್ಟ್

ಇಂಡೋನೇಷ್ಯಾ ವಿಮಾನದ ಅವಶೇಷ, ಅಂಗಾಂಗ ಪತ್ತೆ: ಯಾರೂ ಬದುಕುಳಿದ ಸುಳಿವಿಲ್ಲ!...

ಇಂಡೋನೇಷ್ಯಾದ ಜಕಾರ್ತದಿಂದ ಟೇಕ್‌ಆಫ್‌ ಆದ ಕೆಲವೇ ಹೊತ್ತಲ್ಲಿ ಜಾವಾ ಸಮುದ್ರದಲ್ಲಿ ಪತನಗೊಂಡಿದ್ದ ಬೋಯಿಂಗ್‌ 737-500 ವಿಮಾನದ ಭಗ್ನಾವಶೇಷಗಳು ಮತ್ತು ಮಾನವ ದೇಹದ ಭಾಗಗಳು ಸಮುದ್ರದ 75 ಅಡಿ ಆಳದಲ್ಲಿ ಭಾನುವಾರ ಪತ್ತೆಯಾಗಿವೆ ಎಂದು ವರದಿಯಾಗಿದೆ.

ಚೀನಾದಲ್ಲಿ ಮತ್ತೆ ಕೊರೋನಾ ಆತಂಕ: ಬೀಜಿಂಗ್‌ ಸನಿಹದಲ್ಲೇ 380 ಹೊಸ ಕೇಸ್‌!...

ಜಗತ್ತಿಗೇ ಕೊರೋನಾ ಹಬ್ಬಿಸಿ ತಣ್ಣಗೆ ಕುಳಿತಿದ್ದ ಚೀನಾಗೆ ಮತ್ತೆ ಕೊರೋನಾ ವೈರಸ್‌ ಆತಂಕ ಉಂಟಾಗಿದೆ. ರಾಜಧಾನಿಯ ಸನಿಹದಲ್ಲೇ ಇರುವ ದಕ್ಷಿಣ ಬೀಜಿಂಗ್‌ನ ಹುಬೈ ಪ್ರಾಂತ್ಯದಲ್ಲಿ 380ಕ್ಕೂ ಹೆಚ್ಚು ಜನರಿಗೆ ಕೋವಿಡ್‌ ಸೋಂಕು ತಗುಲಿದೆ.

ಸಿಡ್ನಿ ಟೆಸ್ಟ್‌; ಪಂತ್ ಶೈನಿಂಗ್, ಸೋಲಿನಿಂದ ಪಾರು ಮಾಡಿದ ಹನುಮ-ಅಶ್ವಿನ್...

ಭಾರತ-ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಪಂದ್ಯ ಐತಿಹಾಸಿಕ ಡ್ರಾನಲ್ಲಿ ಅಂತ್ಯವಾಗಿದೆ. ಹನುಮ ವಿಹಾರಿ-ರವಿಚಂದ್ರನ್ ಅಶ್ವಿನ್‌ ಕೆಚ್ಚೆದೆಯ ಜತೆಯಾಟ ತಂಡವನ್ನು ಸೋಲಿನಿಂದ ಪಾರು ಮಾಡಿದೆ.

ಮೌನಿ ರಾಯ್ ಹಾಟ್‌ ಫೋಟೋ; ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಟೇಂಜ್ ಎಡವಟ್ಟು...

ನ್ಯಾಷನಲ್‌ ಸ್ಟಾಕ್‌ಎಕ್ಸ್‌ಚೇಂಜ್ ಟ್ಟಿಟರ್‌ ಖಾತೆಯಿಂದ ನ್ಯಾಷನಲ್‌ ಸುದ್ದಿಯಾದ ಮೌನಿ ರಾಯ್. ಕ್ಷಮೆ ಕೇಳಿದ ಎನ್‌ಎಸ್‌ಇ

ನನಗೆ ಬರೋಬ್ಬರಿ 3 ಕೋಟಿ ರೂ. ಆಫರ್​ ಬಂದಿತ್ತು: ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ...

ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಬಿಎಸ್ಸೆನ್ನೆಲ್‍ನ 2399 ಮತ್ತು 1999 ರೂ. ಪ್ಲ್ಯಾನ್ ಪರಿಷ್ಕರಣೆ, ಯಾವೆಲ್ಲ ಆಫರ್?...

72ನೇ ಗಣರಾಜ್ಯೋತ್ಸವ ಆಫರ್ ಆಗಿ ಬಿಎಸ್ಸೆನ್ನೆಲ್ ತನ್ನ ಎರಡು ದೀರ್ಘಾವಧಿ ವ್ಯಾಲಿಡಿಟಿಯ ಪ್ರಿಪೇಡ್ ಪ್ಲ್ಯಾನ್‌ಗಳನ್ನು ಪರಿಷ್ಕರಿಸಿದೆ. ಈ ಹೊಸ ಪ್ಲ್ಯಾನ್ ಸಕ್ರಿಯಗೊಂಡರೆ ಬಿಎಸ್ಸೆನ್ನೆಲ್ ಗ್ರಾಹಕರಿಗೆ ಹೆಚ್ಚುವರಿ ವ್ಯಾಲಿಡಿಟಿಯ ದಿನಗಳ ಸಿಗಲಿವೆ. ಜೊತೆಗೆ ಒಂದಿಷ್ಟು ಆಫರ್‌ಗಳೂ ಕೂಡ.

ಭಾರತದಲ್ಲಿ ಡ್ರೈವಿಂಗ್ ವೇಳೆ ಕಾಣಸಿಗುವ 8 ತಪ್ಪು; ನೀವು ಈ ಮಿಸ್ಟೇಕ್ ಮಾಡುತ್ತಿದ್ದೀರಾ?...

ಭಾರತದ ರಸ್ತೆಗಳಲ್ಲಿ ಡ್ರೈವಿಂಗ್ ಸುಲಭದ ಮಾತಲ್ಲ. ಕಾರಣ ರಸ್ತೆ ಒನ್ ವೇ ಆಗಿದ್ದರೂ, ಎರಡೂ ಬದಿ ನೋಡಲೇಬೇಕು. ಎಲ್ಲಿಂದ ವಾಹನ ನುಗ್ಗುತ್ತೆ ಅನ್ನೋದು ಊಹಿಸಲು ಸಾಧ್ಯವಿಲ್ಲ. ಹೀಗೆ ಭಾರತದ ರಸ್ತೆಗಳಲ್ಲಿ ಡ್ರೈವಿಂಗ್ ವೇಳೆ ಸಾಮಾನ್ಯವಾಗಿ ಬಹುತೇಕರು ಮಾಡುವ 8 ತಪ್ಪುಗಳ ಕುರಿತ ಮಾಹಿತಿ ಇಲ್ಲಿದೆ

ಹೆಣ್ಣು ಮಗುವನ್ನು ಸ್ವಾಗತಿಸಿದ ವಿರುಷ್ಕಾ ದಂಪತಿ...

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

click me!