
ಬೆಂಗಳೂರು(ಎ.18): ಭಾನುವಾರ, ಬೆಂಗಳೂರಿನ ಜಕ್ಕೂರಿನಲ್ಲಿರುವ ಕೇರ್ (ಇಅ್ಕಉ) ಕೇಂದ್ರದ ಸಿಬ್ಬಂದಿಗೆ ಎಂದಿನಂತೆ ಅವತ್ತೂ ಒಂದು ದಿನ. ಕೇರ್ ಎಂದರೆ ಚಾರ್ಲೀಸ್ ಅನಿಮಲ್ ರೆಸ್ಕೂ್ಯಸ್ ಸೆಂಟರ್ ಅಂತ. ಆ್ಯಕ್ಸಿಡೆಂಟ್‌ನಿಂದ ಗಾಯಗೊಂಡಿರುವ, ಹೊಟ್ಟೆಗಿಲ್ಲದೆ ಅಲೆಯುವ ಅನಾಥ ನಾಯಿಗಳನ್ನು ರಕ್ಷಿಸಿ ಅವುಗಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಕೆಲಸವನು ಈ ಕೇರ್ ಸಂಸ್ಥೆ ಮಾಡುತ್ತದೆ. ಅವತ್ತು ಆ ಕೇಂದ್ರದ ಮಂದಿಗೆ ತಮಗೊಂದು ಸರ್ಪೈಸ್ ಇದೆ ಅನ್ನುವುದು ಗೊತ್ತಿರಲಿಲ್ಲ.
ಬೆಳಗ್ಗೆ ಅಲ್ಲಿನವರೆಲ್ಲಾ ತಮ್ಮ ತಮ್ಮ ಕೆಲಸ ಮಾಡುತ್ತಿರುವ ಹೊತ್ತಿಗೆ ಅಲ್ಲಿಗೊಂದು ಕಾರು ಬಂತು. ಯಾರು ಬಂದಿದ್ದು ಅಂತ ನೋಡಿದರೆ ಅಲ್ಲಿ ನಿಂತಿದ್ದು ಬೇರೆ ಯಾರೂ ಅಲ್ಲ. ಸಾಕ್ಷಾತ್ ವಿರಾಟ್ ಕೊಹ್ಲಿ. ಅವತ್ತು ಸಂಜೆ ಆರ್‌ಸಿಬಿ ಮತ್ತು ಪುಣೆ ಕ್ರಿಕೆಟ್ ಪಂದ್ಯವಿತ್ತು. ಬೆಳಿಗ್ಗೆ ಪ್ರಾಣಿ ಪ್ರೇಮಿ ವಿರಾಟ್ ನಾಯಿಗಳ ಜೊತೆ ಸ್ವಲ್ಪ ಹೊತ್ತು ಕಳೆಯಲು ಈ ಕೇರ್ ಕೇಂದ್ರಕ್ಕೆ ಭೇಟಿ ನೀಡಿದ್ದರು. ಅವರು ಬಂದ ಕೂಡಲೇ ಅಲ್ಲಿದ್ದವರಿಗೆಲ್ಲಾ ಅಚ್ಚರಿ, ಆತಂಕ. ಆದರೆ ವಿರಾಟ್ ನಿರಾಳರಾಗಿದ್ದರು. ಅವರ ಹತ್ತಿರಕ್ಕೆ ಓಡಿ ಬಂದ ನಾಯಿಗಳನ್ನು ಮುದ್ದಿಸಿದರು. ನಾಯಿಮರಿಯೊಂದನ್ನು ಎತ್ತಿ ಹೆಗಲ ಮೇಲೆ ಹಾಕಿಕೊಂಡರು. ನಕ್ಕರು. ಖುಷಿ ಪಟ್ಟರು.
ಕಡೆಗೆ ವಿರಾಟ್ ಕೊಹ್ಲಿ ಹದಿನೈದು ನಾಯಿಗಳನ್ನು ದತ್ತು ಪಡೆದರು. ಆ ಎಲ್ಲಾ ನಾಯಿಗಳು ಕೂಡ ಅನಾರೋಗ್ಯ ಪೀಡಿತ ನಾಯಿಗಳು. ಅವುಗಳಲ್ಲಿ ಕೆಲವು ನಾಯಿಗಳಿಗೆ ಅಂಗವೈಕಲ್ಯ. ಇನ್ನು ಕೆಲವು ದೃಷ್ಟಿಹೀನ ನಾಯಿಗಳು. ಅವುಗಳೆಲ್ಲವನ್ನೂ ಖುದ್ದಾಗಿ ನೋಡಿ ಬೇಜಾರಾದರು.
ವಿರಾಟ್ ಕೊಹ್ಲಿ ಕ್ರೀಡಾಂಗಣದಲ್ಲಿ ಅಬ್ಬರಿಸುವುದು ಎಲ್ಲರಿಗೂ ಗೊತ್ತು. ಅವರು ಎಷ್ಟುಪ್ರತಿಭಾವಂತರೋ ಅಷ್ಟೇ ಪ್ರೀತಿಪಾತ್ರರೂ ಹೌದು. ಕಷ್ಟದಲ್ಲಿರುವವರನ್ನು ಕಂಡರೆ ಅವರ ಮನಸ್ಸು ಮಿಡಿಯುತ್ತದೆ. ನಾಯಿಗಳ ಕಷ್ಟಕ್ಕೆ ಮಿಡಿದದ್ದು ನೋಡಿದರೆ ಅವರನ್ನು ಮೆಚ್ಚದಿರಲು ಯಾರಿಗೂ ಸಾಧ್ಯವಿಲ್ಲ. ಅವರ ಈ ನಡೆ ಮತ್ತೊಂದಷ್ಟುಜನರಿಗೆ ಸ್ಫೂರ್ತಿಯಾಗಲಿ
ವರದಿ: ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.