Fact Check: ಭಾರತದ ಮದರಸಾದಲ್ಲಿ ವಿದ್ಯಾರ್ಥಿಗಳು ಪಾಕ್ ಜಿಂದಾಬಾದ್ ಕೂಗಿದ್ದು ಹೌದಾ?

By Web DeskFirst Published Jul 18, 2019, 5:16 PM IST
Highlights

ಶಾಲಾ ಮಕ್ಕಳು ಪಾಕಿಸ್ತಾನ ಜಿಂದಾಬಾದ್ ಎಂದು ಶಾಲಾ ಮಕ್ಕಳು ಕೂಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ  ಇದರ ಅಸಲಿ ಕತೆ ಏನು ಎಂಬುದನ್ನು ಹುಡುಕಿ ಹೊರಗೆ ತೆಗೆಯಲಾಗಿದೆ.

ಭೋಪಾಲ್[ಜು. 18] ಶಾಲಾ ಮಕ್ಕಳು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದರಾ? ಈ ಮದರಸಾದಲ್ಲಿ ಅಷ್ಟಕ್ಕೂ ಆಗಿದ್ದೇನು? ಸೋಶಿಯಲ್ ಮೀಡಿಯಾದಲ್ಲಿ ಏಕಾಏಕಿ ವಿಡಿಯೋ ವೈರಲ್ ಆಗಲು ಕಾರಣ ಏನು?

ನೆಟ್ಟಿಗರು ಈ ವಿಡಿಯೋ ಮಧ್ಯಪ್ರದೇಶದ ಮಂಡಸೂರ್ ಮದರಸಾವೊಂದರದ್ದು  ಎಂದು ಕಮೇಂಟ್ ಮಾಡಿದ್ದರು. ಆದರೆ ಈ ಸುದ್ದಿಯ ಮೂಲ ಪತ್ತೆ ಹಚ್ಚಲಾಗಿದೆ. ಸಬೀರ್ ಸಾಹೇಬ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದನ್ನು ಪಾಕಿಸ್ತಾನ್ ಜಿಂದಾಬಾದ್ ಎಂಬ ರೀತಿ ಬದಲಾಯಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲ ಸಬೀರ್ ಪಾನ್  ವಾಲಾ ತಿಳಿಸಿದ್ದಾರೆ.

Fact Check: ರಾತ್ರಿ 11.30 ರಿಂದ ಬೆಳಗ್ಗೆ 6 ರ ವರೆಗೆ ವಾಟ್ಸ್ ಆ್ಯಪ್ ಬಂದ್ ಆಗುತ್ತಾ?

ಫೆಸ್ ಬುಕ್, ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ನಲ್ಲಿ ವಿಡಿಯೋ ಶೇರ್ ಅಗುತ್ತಲೆ ಇದೆ.  ಪೊಲೀಸರ ಎದುರಿನಲ್ಲಿಯೇ ಮಕ್ಕಳೂ ಘೋಷಣೆ ಕೂಗಿದ್ದರೂ ಅದು ಯಾವ ಕಾರಣಕ್ಕೆ ಪಾಕಿಸ್ತಾನದ ಹೆಸರು ಬಂತೋ ಗೊತ್ತಿಲ್ಲ ಮಧ್ಯಪ್ರದೇಶದ ಅನ್ವಾರೋಲ್ ಉಲುಮ್ ಶಾಲೆಯ ದೃಶ್ಯಾವಳಿ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

 

click me!