[ವೈರಲ್ ಚೆಕ್] ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಆನ್‌ಲೈನ್ ವೋಟಿಂಗ್!

By Suvarna Web DeskFirst Published Nov 28, 2017, 12:49 PM IST
Highlights

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕೆ? ಅಥವಾ ಬಾಬ್ರಿ ಮಸೀದಿ ನಿರ್ಮಾಣ ಮಾಡಬೇಕೆ ಎಂಬ ಬಗ್ಗೆ ಆನ್‌ಲೈನ್ ಮೂಲಕ ವೋಟಿಂಗ್ ಮಾಡಲಾಗುತ್ತಿದೆ!

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕೆ? ಅಥವಾ ಬಾಬ್ರಿ ಮಸೀದಿ ನಿರ್ಮಾಣ ಮಾಡಬೇಕೆ ಎಂಬ ಬಗ್ಗೆ ಆನ್‌ಲೈನ್ ಮೂಲಕ ವೋಟಿಂಗ್ ಮಾಡಲಾಗುತ್ತಿದೆ. ಸಾರ್ವಜನಿಕರ ಅಭಿಪ್ರಾಯ ಆಧರಿಸಿ ಕೋರ್ಟ್ ನಿರ್ಧಾರ ಕೈಗೊಳ್ಳಲಿದೆ. ಹೀಗಾಗಿ ಬಹುಸಂಖ್ಯಾತರಾಗಿರುವ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವಂತೆ ಸುಪ್ರೀಂಕೋರ್ಟ್ ಮೇಲೆ ಒತ್ತಡ ಹೇರಬೇಕು. ಇದಕ್ಕಾಗಿ www.jagoindian.cm/ayodhya-polls ಲಿಂಕ್‌ಗೆ ಕ್ಲಿಕ್ ಮಾಡಿ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಒಂದು ವೇಳೆ ನೀವು ಲಿಂಕ್ ಕ್ಲಿಕ್ ಮಾಡಿ, ಮತ ಹಾಕಿದರೆ ಮತಹಾಕಿದ್ದಕ್ಕೆ ಧನ್ಯವಾದಗಳು ಎಂಬ ಸಂದೇಶ ಬರುತ್ತದೆ. ಬಳಿಕ ಇದನ್ನು ವಾಟ್ಸಪ್ ಮತ್ತು ಫೇಸ್‌ಬುಕ್‌ನಲ್ಲಿ ಷೇರ್ ಮಾಡುವಂತೆ ತಿಳಿಸಲಾಗುತ್ತದೆ. ಆದರೆ, ಇದು ವೈರಲ್ ಆಗುತ್ತಾ ಇದ್ದಂತೆ ಈ ಬಗ್ಗೆ ಆರ್‌ಟಿಐ ಕಾರ್ಯಕರ್ತರೊಬ್ಬರು ಮಾಹಿತಿ ಕಲೆಹಾಕಿದ ಸಂದರ್ಭದಲ್ಲಿ ಇದರ ಹಿಂದಿನ ಅಸಲೀತ ನ ತಿಳಿದುಬಂದಿದೆ.

ಉತ್ತರ ಪ್ರದೇಶ ಸರ್ಕಾರಕ್ಕೂ ಈ ವೆಬ್‌ಸೈಟ್‌ಗೂ ಯಾವುದೇ ಸಂಬಂಧ ಇಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಬಗ್ಗೆ ಆನ್‌ಲೈಲ್ ವೋಟಿಂಗ್ ನಡೆಸಲು ಸೃಷ್ಟಿಸಿದ ನಕಲಿ ವೆಬ್ ಸೈಟ್ ಇದಾಗಿದೆ. ಇಲ್ಲಿ ವೋಟ್ ಮಾಡಿದರೂ ಕೋರ್ಟ್ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಹಿಂದೆಯೂ ಉತ್ತರ ಪ್ರದೇಶ ಸರ್ಕಾರ www.ayodhya-issue.gov.up.in ವೆಬ್‌ಸೈಟ್ ಮೂಲಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮತದಾನ ಕೈಗೊಂಡಿದೆ ಎಂಬ ಸುದ್ದಿಯನ್ನು ಹರಿಬಿಡಲಾಗಿತ್ತು.

click me!