ಮೋದಿಗೆ ಜನ್ಮ ರಹಸ್ಯದ ಬಗ್ಗೆ "ಅಮ್ಮ"ನ ಮಗಳ ಪತ್ರ

Published : Nov 28, 2017, 12:40 PM ISTUpdated : Apr 11, 2018, 12:43 PM IST
ಮೋದಿಗೆ ಜನ್ಮ ರಹಸ್ಯದ ಬಗ್ಗೆ  "ಅಮ್ಮ"ನ ಮಗಳ ಪತ್ರ

ಸಾರಾಂಶ

ಜಯಲಲಿತಾ ಮಗಳು ಎಂದು ಹೇಳಿಕೊಳ್ಳುತ್ತಿರುವ ಅಮೃತಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ತಮ್ಮ ಡಿಎನ್ಎ ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. 

ಹೊಸದಿಲ್ಲಿ(ನ.28): ಜಯಲಲಿತಾ ಮಗಳು ಎಂದು ಹೇಳಿಕೊಳ್ಳುತ್ತಿರುವ ಅಮೃತಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ತಮ್ಮ ಡಿಎನ್ಎ ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.  ತಮ್ಮ ಜನ್ಮ ರಹಸ್ಯದ ಬಗ್ಗೆ ಅನೇಕ ವಿಚಾರಗಳನ್ನು  ಈ ಪತ್ರದಲ್ಲಿ  ಅಮೃತಾ ತಿಳಿಸಿದ್ದಾರೆ. ತಾನು ಜಯಲಲಿತಾ ಹಾಗೂ ಶೋಭನ್  ಬಾಬು ಅವರ ಪುತ್ರಿಯಾಗಿದ್ದು,  ತನ್ನ ತಾಯಿ ಸದಾ ನಿಮ್ಮ ಹೆಸರನ್ನು ಪ್ರಸ್ತಾಪಿಸುತ್ತಿದ್ದ ಕಾರಣ ಪತ್ರ ಬರೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ನನ್ನ ತಾಯಿ ಜಯಲಲಿತಾ ಅವರಾಗಿದ್ದು ಅಜ್ಜಿ ಸಂಧ್ಯಾ ಅಲಿಯಾಸ್ ವೇದವಲ್ಲಿ. ತ ಅಜ್ಜಿ ಕೂಡ ಜಯಲಲಿತಾರಂತೆಯೇ ಸಿನಿಮಾ ನಟಿಯಾಗಿದ್ದರು. ತಮ್ಮ ತಾತ ಜಯರಾಂ ನಿಧನರಾದ ನಂತರ ನನ್ನ ತಾಯಿ ಜಯಲಲಿತಾ ಜೊತೆಯಲ್ಲಿಯೇ ವೇದವಲ್ಲಿ ವಾಸವಾಗಿದ್ದರು. ಬಳಿಕ ಅಜ್ಜಿ ವೇದವಲ್ಲಿ ಅವರು ನಿಧನರಾಗಿದ್ದು, ಈ ಘಟನೆ ಅವರನ್ನು ತುಂಬಾ ಜರ್ಜರಿತಗೊಳಿಸಿತ್ತು ಎನ್ನುವುದನ್ನೂ ಕೂಡ ಅಮೃತಾ ಪತ್ರದಲ್ಲಿ ಹೇಳಿದ್ದಾರೆ.

ಇದರಿಂದ  ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಈ ವೇಳೆ ಶೋಭನ್ ಬಾಬು ಜಯಲಲಿತಾ ಅವರಿಗೆ ನೆರವಾಗಿದ್ದರು. ಜಯಲಲಿತಾ ಅವರು ಮೊದಲಿನಂತಾಗಲು ಶೋಭನ್ ಬಾಬು ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇವರಿಬ್ಬರ ಗೆಳೆತನ ಕಾಲನಂತರ ಪ್ರೀತಿಗೆ ತಿರುಗಿತ್ತು.  ಇದರಿಂದ ಹಿಂದೂ ಸಂಪ್ರದಾಯದಂತೆ ಇಬ್ಬರೂ ಕೂಡ ವಿವಾಹವಾಗಲು ಬಯಸಿದ್ದರು. ಗುಟ್ಟಾಗಿ ಮದುವೆಯಾಗಲು ತೀರ್ಮಾನಿಸಿದ್ದು,  ಮಂಗಲ ಸೂತ್ರವನ್ನೂ ಕೂಡ ಖರೀದಿ ಮಾಡಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ವಿವಾಗ ಮುರಿದು ಬಿತ್ತು. ಬಾಬು  ಪತ್ನಿ ಗಲಾಟೆ ಮಾಡಿದ್ದ ಹಿನ್ನೆಲೆಯಲ್ಲಿ ವಿವಾಗ ಮುರಿಯಿತು. ಅಲ್ಲದೇ ಇವರಿಬ್ಬರ ಬಾಂಧವ್ಯ  ಗಟ್ಟಿಯಾಗಿದ್ದಾಗಲೇ ಆಕೆ ಚಿತ್ರರಂಗದಿಂದಲೂ ಕೂಡ ದೂರ ಸರಿದರು.  ತನ್ನನ್ನು ಸಾಕಿದ್ದ ಜಯಲಕ್ಷ್ಮೀ ಅವರನ್ನೂ ಜಯಲಲಿತಾ ಚೆನ್ನೈಗೆ ಕರೆಸಿಕೊಂಡಿದ್ದರು. ಜಯಲಕ್ಷ್ಮೀ  ಹಾಗೂ ಅವರ ಸಂಬಂಧಿಗಳಾದ ಲಲಿತಾ ಹಾಗೂ ರಜನಿ ಅವರೂ ಕೂಡ ನಾವು ವಾಸವಾಗಿದ್ದ ಮನೆಗೆ ಬಂದಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಮ್ಮ ಕುಟುಂಬದವರ ಪ್ರಕಾರ ನಾವು ಬ್ರಾಹ್ಮಣರಾಗಿದ್ದು, ಶೋಭನ್ ಬಾಬು ಅವರೊಂದಿಗಿನ ಸಂಬಂಧ ಕುಟುಂಬದವರಿಗೆ ಇಷ್ಟ ಇರಲಿಲ್ಲ. ನನ್ನ  ಹುಟ್ಟಿನಿಂದ ಆಘಾತವಾಗಿದ್ದರಿಂದ ೀ ವಿಚಾರವನ್ನೂ ಕೂಡ ಗುಟ್ಟಾಗಿ ಇಟ್ಟರು. ಶೈಲಜಾ ಅವರು ನನ್ನನ್ನು ಸಾಕಲು ನಿರ್ಧರಿಸಿದರು. ಅವರೆಲ್ಲರೂ ಕೂಡ ಪ್ರಮಾಣ ಮಾಡಿ ನನ್ನ ಹುಟ್ಟಿನ ಬಗ್ಗೆ ಎಲ್ಲಿಯೂ ಹೇಳದಿರಲಉ ನಿರ್ಧಾರ ಮಾಡಿದರು. ನನ್ನನ್ನು ಸಾಕಲು ದಾದಿಯೋರ್ವರನ್ನು ಶೈಲಜಾ ನೇಮಿಸಿದ್ದರು. ವಿದ್ಯಾಪೀಠ ಶಾಲೆಗೆ ನನ್ನನ್ನು ದಾಖಲು ಮಾಡಿದ್ದು, ಪ್ರೌಢ ಶಾಲೆಗೆ ಹೋಗುವ ವೇಳೆ ನನ್ನ ತಂದೆ-ತಾಯಿ ಯಾರು ಎನ್ನುವ ಗೊಂದಲ ಆರಂಭವಾಯಿತು. ಶೈಲಜಾ ಪತಿ ನನ್ನನ್ನು ನೋಡಿಕೊಳ್ಳುತ್ತಿದ್ದ ರೀತಿಯೂ ಕೂಡ ನನಗೆ ಅನುಮಾನವಾಗಿತ್ತು. ರಾಜಕಾರಣ ಹಾಗೂ ಸಿನಿಮಾದಿಂದ ದೂರ  ಇರುವಂತೆ ಜಯಲಲಿತಾ ನನಗೆ ಹೇಳುತ್ತಿದ್ದರು ಎಂದು ಅಮೃತಾ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನ್ಯಾಯಾಂಗ ಬೆದರಿಸಿ ಶತಮಾನಗಳ ಕಾರ್ತಿಕ ದೀಪ ಸಂಪ್ರದಾಯ ಮುಗಿಸಲು ಡಿಎಂಕೆ ಯತ್ನ ಬಹಿರಂಗ
ಕೇಂದ್ರದಿಂದ MNREGA ಹೆಸರು ಬದಲಾವಣೆ, ಹೊಸ ನಿಯಮಗಳು ಜಾರಿ, ಕೆಲಸದ ಅವಧಿ, ಕನಿಷ್ಟ ವೇತನ ಹೆಚ್ಚಳ, ವಿವರವಾಗಿ ತಿಳಿಯಿರಿ