
ಬೆಂಗಳೂರು: ಕವಿ ಪಂಪ ಈ ಭೂಲೋಕದಿಂದ ಮುಕ್ತಿಯವರೆಗೆ ಮನುಷ್ಯನನ್ನು ಕರೆದುಕೊಂಡು ಹೋಗುವ ಧರ್ಮಕ್ಕೆ ದಯೆ, ದಾನ, ತಪಸ್ಸು ಎಂಬ ಧರ್ಮದ ಲಕ್ಷಣಗಳಿವೆ ಎಂದಿದ್ದಾರೆ. ಪ್ರಸ್ತುತ ಇದಕ್ಕೆ ಧರ್ಮ ಹಿಂಸೆಯನ್ನು ಸಹ ಸೇರಿಸಿಕೊಳ್ಳಬಹುದು ಎನಿಸುತ್ತದೆ ಎಂದು ಸಂಶೋಧಕ ಪ್ರೊ. ಎಂ. ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಶಿಕ್ಷಕರ ಸದನದಲ್ಲಿ ಭಾನುವಾರ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿ ದ ಅವರು, ಧರ್ಮದ ಸಂರಕ್ಷಣೆಗಾಗಿ ಹಿಂಸೆ ಮಾಡುವುದು ಕೂಡ ಪರಮಧರ್ಮ ಎಂದು ಶ್ರೇಷ್ಠ ಚಿಂತಕರೊಬ್ಬರು ಹೇಳಿದ್ದಾರೆ.
ನಾನು ಹಿಂದೂ ಧರ್ಮಕ್ಕೆ ಸೇರಿದವನು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತ ದೆ. ಇದಕ್ಕಾಗಿ ಭಾರತೀಯತೆ ಎಂಬ ಪುಸ್ತಕ ಬರೆದಿದ್ದು, ನಿಜವಾದ ಭಾರತೀಯನಾಗಲು ಯಾವ ರೀತಿಯ ಚಿಂತನೆ, ನಡವಳಿಕೆ ರೂಢಿಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಹಾಗೆಯೇ ಹಿಂದೂ ಧರ್ಮದ ಮೇಲೆ ನಡೆದಿರುವ ಅಪಾರ ಪ್ರಮಾಣದ ಆಕ್ರಮಣಗಳು ಧರ್ಮದ ನಿಜವಾದ ಸ್ವರೂಪಗಳನ್ನು ಪುಸ್ತಕ ತಿಳಿಸಲಿದೆ ಎಂದು ಹೇಳಿದರು.
ಇತಿಹಾಸಕಾರ ಪ್ರೊ. ಸತೀಶ್ ಚಂದ್ರ ಮಿತ್ತಲ್ ಮಾತನಾಡಿ, ಶಿಕ್ಷಣ ನಮಗೆ ಮಾರ್ಗದರ್ಶನ ಹಾಗೂ ಗುರಿಯನ್ನು ತೋರಿಸುತ್ತದೆ. ಉತ್ತಮ ಶಿಕ್ಷಕರು ದೇಶದ ನಿರ್ಮಾತೃಗಳು ಹಾಗಾಗಿಯೇ ಅವರನ್ನು ವಿಶ್ವಗುರು ಎಂದು ಪರಿಗಣಿಸುತ್ತೇವೆ. ಬ್ರಿಟಿಷರು ಬಂದ ನಂತರ ಶೈಕ್ಷಣಿವಾಗಿ ಹಾಗೂ ಸಾಮಾಜಿಕವಾಗಿ ದೇಶವನ್ನು ಬದಲಾವಣೆಯತ್ತ ಕೊಂಡೊಯ್ಯುವ ಜವಾಬ್ದಾರಿ ಕುರಿತಂತೆ ಪ್ರಶ್ನೆ ಎದುರಾಗಿತ್ತು. ಆದರೆ, ಇಂದು ಅದನ್ನು ಸಮರ್ಥವಾಗಿ ಎದುರಿಸಿದ್ದೇವೆ ಎಂದರು.
ಸ್ವಾಮಿ ವಿವೇಕಾನಂದ, ಸ್ವಾಮಿ ದಯಾನಂದ ಸರಸ್ವತಿ, ತಿಲಕರು ಸೇರಿದಂತೆ ಅನೇಕ ಮಹನೀಯರು ಶಿಕ್ಷಣದಿಂದಲೇ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಾರಿದರು. ಸ್ವಾಮಿ ಶ್ರದ್ಧಾನಂದ, ರವೀಂದ್ರನಾಥ ಠಾಕೂರ್ ಸೇರಿದಂತೆ ಅನೇಕರು ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಗೆ ಒತ್ತು ನೀಡಿದರು. ಅವರೆಲ್ಲರೂ ಶೈಕ್ಷಣಿಕವಾಗಿ ಸಮಾಜ ಹಾಗೂ ರಾಷ್ಟ್ರವನ್ನು ಪರಿವರ್ತನೆಯತ್ತ ಕೊಂಡೊಯ್ಯುವಲ್ಲಿ ಮಹತ್ವಪೂರ್ಣ ಕೊಡುಗೆ ನೀಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಶಿಕ್ಷಣ ವ್ಯವಸ್ಥೆ ಬ ದಲಾಗಿದೆ. ಆದರೆ, ಇಂದಿಗೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದರು.
ರಾಮಕೃಷ್ಣ ಮಠದ ಮಂಗಲನಾಥಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು, ಶಿಕ್ಷಣ ತಜ್ಞ ಪ್ರೊ. ದಯಾನಂದ ಭಾರ್ಗವ್ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.