
ಲಂಡನ್[ಫೆ.04] ಭಾರತದ ವಿವಿಧ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಗಡಿಪಾರಿಗೆ ಇಂಗ್ಲೆಂಡ್ ಅಸ್ತು ಎಂದಿದೆ. ಆದರೆ ಮಲ್ಯ ಮೂರನೇ ಅಂಪೈರ್‌ಗೆ ಮನವಿ ಸಲ್ಲಿಸಲು ಅವಕಾಶವೊಂದು ಹಾಗೆ ಉಳಿದುಕೊಂಡಿದೆ.
ಮೋದಿಗೆ ರಾಜತಾಂತ್ರಿಕ ಗೆಲುವು ಸಿಕ್ಕಿದ್ದರೂ ಮಲ್ಯರನ್ನು ಭಾರತಕ್ಕೆ ಕರೆತರುವುದು ಅಷ್ಟು ಸುಲಭವಾದ ಕೆಲಸ ಅಲ್ಲ. 14 ದಿನದ ಒಳಗಾಗಿ ಲಂಡನ್ ಹೈ ಕೋರ್ಟ್‌ಗೆ ಆದೇಶ ಪ್ರಶ್ನೆ ಮಾಡಿ ಮಲ್ಯ ಮನವಿ ಸಲ್ಲಿಸಬಹುದು. ಒಂದು ವೇಳೆ ಲಂಡನ್ ಕೋರ್ಟ್ ನಲ್ಲಿ ಈ ಆದೇಶಕ್ಕೆ ತಡೆ ಸಿಕ್ಕರೆ ಮಲ್ಯ ಮತ್ತೆ ಸೇಫ್ ಆಗುತ್ತಾರೆ.
ಮದ್ಯದ ದೊರೆ ಗಡಿಪಾರಿಗೆ ಬ್ರಿಟನ್ ಸರ್ಕಾರ ಅಸ್ತು, 'ವೆಲ್ ಕಮ್' ಮಲ್ಯ
ಭಾರತದ ವಿವಿಧ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿಗೂ ಅಧಿಕ ಹಣ ವಂಚಿಸಿ ಪರಾರಿಯಾಗಿದ್ದ ಮಲ್ಯ ಆಗಾಗ ಕ್ರಿಕೆಟ್ ಪಂದ್ಯಗಳ ವೇಳೆ ಕಾಣಿಸಿಕೊಳ್ಳುತ್ತಿದ್ದರು. ರಾಜತಾಂತ್ರಿಕ ಮಾರ್ಗದಲ್ಲಿ ಮಲ್ಯರನ್ನು ವಾಪಸ್ ಕರೆತರಲು ಭಾರತ ಯಶಸ್ವಿ ಆಗಿದ್ದರೂ ಇನ್ನೊಂದು ಆಯ್ಕೆ ಹಾಗೆ ಉಳಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ