
ನವದೆಹಲಿ(ಫೆ.14): ಇಂದು ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಅದುವರೆಗೂ ಮುನಿಸಿಕೊಂಡಿದ್ದ ಪ್ರೇಮಿಗಳು ಅದನ್ನು ಮರೆತು ಒಂದಾಗುವುದು, ಪ್ರಪೋಸ್ ಮಾಡುವುದಕ್ಕೆ ಕಾಯುವ ಹುಡುಗರು, ಯಾರ್ಯಾರು ಪ್ರಪೋಸ್ ಮಾಡಬಹುದು ಎಂದು ಮನದೊಳಗೆ ಮಂಡಿಗೆ ತಿನ್ನುವ ಹುಡುಗಿಯರು, ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಬೇಸರ.. ಹೀಗೆ ಪ್ರೇಮಿಗಳ ದಿನ ಒಬ್ಬೊಬ್ಬರಿಗೆ ಒಂದೊಂದು ರೀತಿ ಅನುಭೂತಿ ನೀಡುತ್ತದೆ. ಹಾಗಂತ ಇದು ಕೇವಲ ಹುಡುಗ ಹುಡುಗಿಯರಿಗೆ ಮಾತ್ರ ಸೀಮಿತವಾದದ್ದಲ್ಲ. ರಾಜಕೀಯ ರಂಗದಲ್ಲೂ ವ್ಯಾಲಂಟೇನ್ಸ್ ಡೇ ಆಚರಿಸಲಾಗುತ್ತದೆ. ಇಲ್ಲಿದೆ ಕೆಲವು ರಾಜಕೀಯ ಜೋಡಿಗಳ ಪ್ರೇಮ ಕಥೆ
ರಾಹುಲ್ ಗಾಂಧಿ-ಅಖಿಲೇಶ್ ಯಾದವ್
ಉತ್ತರ ಪ್ರದೇಶ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ-ಅಖಿಲೇಶ್ ಯಾದವ್ ಒಬ್ಬರಿಗೊಬ್ಬರು ಕಿತ್ತಾಡುತ್ತಿದ್ದರು. ಪರಸ್ಪರ ಟೀಕೆ-ಪ್ರತಿ ಟೀಕೆಗಳನ್ನು ಮಾಡುತ್ತಿದ್ದರು. ಇಂತಿಪ್ಪ ಜೋಡಿಯನ್ನು ಒಂದಾಗಿಸಿದ್ದು ಉತ್ತರ ಪ್ರದೇಶ ಚುನಾವಣೆ. ಯಾವಾಗ ಚುನಾವಣೆ ಬಂತೋ ಇಬ್ಬರು
ಭಿನ್ನಾಭಿಪ್ರಾಯವನ್ನು ಬಿಟ್ಟು ಒಂದಾಗಿ ಬಿಟ್ಟರು. ಆದರೆ ರಾಹುಲ್ ಅಪ್ಪನಿಗೆ ಮಾತ್ರ ಈ ಜೋಡಿ ಇಷ್ಟವಾಗಿಲ್ಲ!
ಲಾಲು ಪ್ರಸಾದ್ ಯಾದವ್-ನಿತೀಶ್ ಕುಮಾರ್
ಯಾವಾಗಲೂ ಪರಸ್ಪರ ಕಿತ್ತಾಡುತ್ತಿದ್ದ ಲಾಲು ಮತ್ತು ನಿತೀಶ್ ಕುಮಾರ್ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ದುಶ್ಮನಿಗಳಂತೆ ಇದ್ದವರು ದೋಸ್ತಾಗಿದ್ದಾರೆ. ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ. ಈ ವ್ಯಾಲೆಂಟೈನ್ಸ್ ಡೇ ಇಬ್ಬರ ನಡುವೆ ಪ್ರೀತಿಯನ್ನು ಹುಟ್ಟಿಹಾಕಿದೆ ಎಂದರೆ ತಪ್ಪಾಗಲಿಕ್ಕಿಲ್ಲ!
ಪನ್ನೀರ್ ಸೆಲ್ವಂ- ಸ್ಟಾಲಿನ್
ಸ್ಟಾಲಿನ್ ಮತ್ತು ಪನ್ನೀರ್ ಸೆಲ್ವಂ ನಡುವೆ ಗುದ್ದಾಟ ಆಗಾಗ ನಡೆಯುತ್ತಿರುವುದು ತಮಿಳುನಾಡಿಗರಿಗೆ ಹೊಸದೇನಲ್ಲ. ಆದರೆ ಕೆಲವೊಮ್ಮೆ ರಾಜಕೀಯದಲ್ಲಿ ವಿರೋಧಿಗಳ ಸಹಾಯವೂ ಬೇಕಾಗುತ್ತದೆ. ಇದೀಗ ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಹಾಗೆಯೇ ಇದೆ. ಪನ್ನೀರ್ ಸೆಲ್ವಂ, ಸ್ಟಾಲಿನ್ ನಡುವೆ ಸುದೀರ್ಘವಾದ ಹಾದಿಯಿದೆ.
ಅಣ್ಣಾ ಹಜಾರೆ-ಪನ್ನೀರ್ ಸೆಲ್ವಂ
ಅಣ್ಣಾ ಹಜಾರೆ-ಕೇಜ್ರಿವಾಲ್ ನಡುವಿನ ಸಂಬಂಧ ಸುದೀರ್ಘವಾದುದು. ಆದರೆ ಬಹಳ ಕಾಲ ಇಬ್ಬರೂ ಒಟ್ಟಿಗೆ ಉಳಿಯಲಿಲ್ಲ. ಪರಸ್ಪರರು ಒಬ್ಬರನ್ನು ಬಿಟ್ಟು ಒಬ್ಬರು ದೂರವೂ ಉಳಿಯುವುದಿಲ್ಲ. ಸಂಬಂಧ ಸ್ಥಿರವಾಗಿ ಉಳಿಸಿಕೊಳ್ಳಲು ಇಬ್ಬರೂ ರಾಜಿ ಮಾಡಿಕೊಂಡಿದ್ದಾರೆ.
ನರೇಂದ್ರ ಮೋದಿ –ನರೇಂದ್ರ ಮೋದಿ
ಮೋದಿಗೆ ಮೋದಿಯೇ ಸಾಟಿ. ತಮಗೆ ತಾವೊಬ್ಬರೇ ಅರ್ಹವಾಗಿರುವ ಏಕೈಕ ವ್ಯಕ್ತಿ ಇವರು. ಅವರಿಗೆ ಅವರಿಗಿಂತ ಬೇರೆ ಯಾರೂ ಉತ್ತಮ ಜೋಡಿಯಾಗಲಾರರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.