ದಾಖಲೆ ಮುಟ್ಟಲಿರುವ ಈ ವರ್ಷದ ತಿರುಪತಿ ಬಜೆಟ್ : ಲಡ್ಡು ಸಂಪಾದನೆ ಎಷ್ಟು ಗೊತ್ತೆ ?

Published : Feb 14, 2017, 11:12 AM ISTUpdated : Apr 11, 2018, 12:51 PM IST
ದಾಖಲೆ ಮುಟ್ಟಲಿರುವ ಈ ವರ್ಷದ ತಿರುಪತಿ ಬಜೆಟ್ : ಲಡ್ಡು ಸಂಪಾದನೆ ಎಷ್ಟು ಗೊತ್ತೆ ?

ಸಾರಾಂಶ

ಪ್ರಸಿದ್ಧ ಪ್ರಸಾದವೆಂದ ಪರಿಗಣಿಸಲಾಗಿರುವ ಲಡ್ಡು ಮಾರಾಟದಿಂದ ---

ತಿರುಪತಿ(ಫೆ.14): ಇಲ್ಲಿನ ವಿಶ್ವಪ್ರಸಿದ್ಧ ತಿರುಪತಿ ತಿರುಮಲ ದೇಗುಲಕ್ಕೆ 2017-18ರ ವಿತ್ತೀಯ ವರ್ಷದಲ್ಲಿ 2,858 ಕೋಟಿ ವರಮಾನ ಬರುವ ನಿರೀಕ್ಷೆಯಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ಹೇಳಿದೆ. ಭಕ್ತಾದಿಗಳಿಂದ ಹುಂಡಿಗೆ ಹಾಕುವ 1,110 ಕೋಟಿ, ವಿವಿಧ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿರುವ ಹಣಕ್ಕೆ 807.7 ಕೋಟಿ ಬಡ್ಡಿ, ಭಕ್ತಾದಿಗಳ ಕೂದಲು ಮಾರಾಟದಿಂದ 100 ಕೋಟಿ, ದರ್ಶನದ ಟಿಕೆಟ್‌ನಿಂದ 256 ಕೋಟಿ, ಪ್ರಸಿದ್ಧ ಪ್ರಸಾದವೆಂದ ಪರಿಗಣಿಸಲಾಗಿರುವ ಲಡ್ಡು ಮಾರಾಟದಿಂದ 165 ಕೋಟಿ ಮತ್ತು ಭಕ್ತಾದಿಗಳು ಬಂದು ಕೆಲ ದಿನಗಳ ಕಾಲ ನೆಲೆಸುವುದರಿಂದ 124 ಕೋಟಿ ಸಂಪಾದನೆಯಾಗುವ ಸಾಧ್ಯತೆಯಿದೆ. ಇದರಲ್ಲಿ, ಇಂಜಿನಿಯರ್ ಕಾರ್ಯಗಳಿಗೆ 200 ಕೋಟಿ ಮತ್ತು ಖಾಯಂ ಸಿಬ್ಬಂದಿ ಮತ್ತು ಗುತ್ತಿಗೆ ಕಾರ್ಮಿಕರ ವೇತನಕ್ಕಾಗಿ 828 ಕೋಟಿ ವೆಚ್ಚವಾಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿಮ್ಮ ಅಥ್ವಾ ಸತ್ತವರ ಬ್ಯಾಂಕ್​ ಖಾತೆ ನಿಷ್ಕ್ರಿಯವಾಗಿದ್ರೆ ಚಿಂತೆ ಬೇಡ: ಕೂಡಲೇ ಹೀಗೆ ಮಾಡಿ ಹಣ ಪಡೆಯಿರಿ
ಸಾರಿಗೆ ನಿಗಮದ ಮಹಿಳಾ ನೌಕರರಿಗೆ ಗುಡ್‌ನ್ಯೂಸ್‌ ನೀಡಿದ ಇಲಾಖೆ, ಋತುಚಕ್ರ ರಜೆಗೆ ಗ್ರೀನ್‌ ಸಿಗ್ನಲ್‌!