ನಾಳೆಯೇ ಪಳಿನಿಸ್ವಾಮಿ ಸಿಎಂ ಆಗಿ ಪ್ರಮಾಣ ವಚನ : ಫೆ.22ಕ್ಕೆ ವಿಶ್ವಾಸ ಮತ

Published : Feb 14, 2017, 11:14 AM ISTUpdated : Apr 11, 2018, 12:39 PM IST
ನಾಳೆಯೇ ಪಳಿನಿಸ್ವಾಮಿ ಸಿಎಂ ಆಗಿ ಪ್ರಮಾಣ ವಚನ : ಫೆ.22ಕ್ಕೆ ವಿಶ್ವಾಸ ಮತ

ಸಾರಾಂಶ

ಪ್ರಸ್ತುತ ಕೊವತ್ತೂರು ಬಳಿಯ ಖಾಸಗಿ ರೆಸಾರ್ಟ್'ನಲ್ಲಿರುವ ಪಳಿನಿ ಸ್ವಾಮಿ 12 ಮಂದಿ ಶಾಕರೊಂದಿಗೆ  ಇಂದು ಸಂಜೆ 5.30ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಿ ವಿಶ್ವಾಸ ಮತಕ್ಕೆ ಅವಕಾಶ ಕೇಳುವ ಸಾಧ್ಯತೆಯಿದೆ.

ಚೆನ್ನೈ(ಫೆ.14): ತಮಿಳುನಾಡಿನಲ್ಲಿ  ಅನಿರೀಕ್ಷಿತ ರಾಜಕೀಯ ವಿದ್ಯಾಮಾನಗಳು ನಡೆಯುತ್ತಿದ್ದು, ಶಶಿಕಲಾ ಬಣದ ಲೋಕಪಯೋಗಿ ಸಚಿವ ಹಾಗೂ ಎಐಎಡಿಎಂಕೆ ಶಾಸಕಾಂಗ ನಾಯಕರಾಗಿರುವ ಕೆ.ಪಳಿನಿಸ್ವಾಮಿ ಅವರು  ಮುಖ್ಯಮಂತ್ರಿಯಾಗಿ ಪದಗ್ರಹಣ ಸ್ವೀಕರಿಸಲಿದ್ದಾರೆ.  ಪಳಿನಿಯವರಿಗೆ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. ಫೆ.22ಕ್ಕೆ ವಿಶೇಷ ಅಧಿವೇಶನ ಕರೆಯಲಿರುವ ರಾಜ್ಯಪಾಲರು ವಿಶ್ವಾಸ ಮತ ಯಾಚನೆಗೆ ಸೂಚನೆ ನೀಡಲಿದ್ದಾರೆ.

ಪ್ರಸ್ತುತ ಕೊವತ್ತೂರು ಬಳಿಯ ಖಾಸಗಿ ರೆಸಾರ್ಟ್'ನಲ್ಲಿರುವ ಪಳಿನಿ ಸ್ವಾಮಿ 12 ಮಂದಿ ಶಾಕರೊಂದಿಗೆ  ಇಂದು ಸಂಜೆ 5.30ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಿ ವಿಶ್ವಾಸ ಮತಕ್ಕೆ ಅವಕಾಶ ಕೇಳುವ ಸಾಧ್ಯತೆಯಿದೆ. ಈ ನಡುವೆ ಶಶಿಕಲಾಗೆ ಜೈಲು ಶಿಕ್ಷೆ ಪ್ರಕಟವಾದ ಹಿನ್ನಲೆಯಲ್ಲಿ ಅನಾರೋಗ್ಯದ ಕಾರಣ ನೀಡಿ ಶರಣಾಗತಿಗೆ 4 ವಾರಗಳ ಕಾಲಾವಕಾಶ ಕೋರಿ ಸುಪ್ರೀಂಕೋರ್ಟ್'ಗೆ ಮನವಿ ಸಲ್ಲಿಸಿದ್ದಾರೆ.  ಚೆನ್ನೈನ ಗೋಲ್ಡನ್ ಬೇ ರೆಸಾರ್ಟ್'ನಲ್ಲಿರುವ ಶಶಿಕಲಾ ಅವರಿಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ಅಶ್ವತ್ಥ್ ನಾರಾಯಣ್ ವಿಶೇಷ ನ್ಯಾಯಾಧೀಶ : ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶಶಿಕಲಾಗೆ ಜೈಲು ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಸಷನ್ಸ್ ಕೋರ್ಟ್'ನ ನ್ಯಾಯಾಧೀಶ ಅಶ್ವತ್ಥ್ ನಾರಾಯಾಣ್ ಅವರನ್ನು ವಿಶೇಷ ಕೋರ್ಟ್ ಉಸ್ತುವಾರಿಯಾಗಿ ನೇಮಿಸಲಾಗಿದೆ. ಈ ನಡುವೆ ಶಶಿಕಲಾ ಅವರು ಸೆಲ್ವಂ ಜೊತೆ ಗುರುತಿಸಿಕೊಂಡಿದ್ದ 11 ಸಂಸದರು, 10 ಶಾಸಕರು ಹಾಗೂ 20 ನಾಯಕರನ್ನು ವಜಾಗೊಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನೇಕಲ್‌ನಲ್ಲಿ ಭೀಕರ ಅಪಘಾತ; 20 ವಾಹನಕ್ಕೆ ಕಂಟೈನರ್ ಡಿಕ್ಕಿ, 2ಕ್ಕೂ ಹೆಚ್ಚು ಸಾವು, ಹಲವರು ಗಂಭೀರ
ಅಪ್ರಾಪ್ತರಿಂದ 8ನೇ ಕ್ಲಾಸ್ ಬಾಲಕಿಗೆ ಕಿರುಕುಳ: ನಾಲ್ವರು ಬಾಲಕರ ತಾಯಂದಿರನ್ನು ಬಂಧಿಸಿದ ಪೊಲೀಸರು