ಆರ್‌ಬಿಐ: ನೆಹರು ಮಾಡಿದ್ದನ್ನೇ ಮಾಡಿದ ಮೋದಿ ಮೇಲೇಕೆ ಕಣ್ಣು?

By Web DeskFirst Published Dec 11, 2018, 3:54 PM IST
Highlights

ಆರ್‌ಬಿಐ ಗವರ್ನರ್ ಸ್ಥಾನಕ್ಕೆ ಊರ್ಜಿತ್ ಪಟೇಲ್ ರಾಜಿನಾಮೆ | ಆರ್‌ಬಿಐ ವಿಚಾರದಲ್ಲಿ ಮೋದಿ ಮೂಗುತೂರಿಸುವಿಕೆ ಜಾಸ್ತಿ ಆಯ್ತಾ? 

ನವದೆಹಲಿ (ಡಿ.11):  ಸ್ವತಃ ಪ್ರಧಾನಿ ನರೇಂದ್ರ ಮೋದಿ ಆರಿಸಿ ತಂದ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಚುನಾವಣಾ ಫಲಿತಾಂಶಗಳು ಬರುವ ಮುನ್ನಾ ದಿನ ರಾಜೀನಾಮೆ ನೀಡಿರುವುದು ಮೋದಿ ಅವರಿಗೆ ಒಂದು ದೊಡ್ಡ ಹಿನ್ನಡೆ. 

ಹೋಗ್ಬನ್ನಿ ಒಳ್ಳೆದಾಗ್ಲಿ: ಮೋದಿ ಬಿಚ್ಚಿಟ್ಟ ಊರ್ಜಿತ್ ರಹಸ್ಯ!

ಹಾಗೆ ನೋಡಿದರೆ 15 ದಿನಗಳ ಹಿಂದೆಯೇ ಊರ್ಜಿತ್ ಪಟೇಲ್ ಪ್ರಧಾನಿಯನ್ನು ಭೇಟಿ ಆದಾಗ ರಾಜೀನಾಮೆಯ ಸಂಕೇತ ನೀಡಿದ್ದರು. ಆದರೆ ಒಂದು ಕಡೆ ತಾನೇ ನೇಮಿಸಿದ ಸಲಹೆಗಾರ ನೋಟು ರದ್ದತಿ ಬಗ್ಗೆ ಕಿಡಿ ಕಾರಿರುವಾಗ, ಎಕ್ಸಿಟ್ ಪೋಲ್‌ಗಳು ಬಿಜೆಪಿಗೆ ಖುಷಿಯಾಗುವ ಮಾತನ್ನಂತೂ ಹೇಳದಿರುವಾಗ ಖಂಡಿತವಾಗಿಯೂ ಗವರ್ನರ್ ರಾಜೀನಾಮೆ ಒಳ್ಳೆಯ ಸುದ್ದಿ ಏನಲ್ಲ. ಹಾಗೆ ನೋಡಿದರೆ ಬ್ರಿಟಿಷ್ ಕಾಲದಿಂದಲೂ ಆರ್‌ಬಿಐ ಕೇವಲ ಸಲಹೆ ನೀಡಬಹುದೋ ಅಥವಾ ಸ್ವಾಯತ್ತ ಸಂಸ್ಥೆಯೋ ಎನ್ನುವ ಬಗ್ಗೆ ಜಗಳಗಳು ನಡೆದಿವೆ.

ಮೋದಿಯನ್ನು ನಡುನೀರಲ್ಲಿ ಬಿಟ್ಟ ಊರ್ಜಿತ್: ಆರ್‌ಬಿಐ ಸ್ಥಾನಕ್ಕೆ ರಾಜೀನಾಮೆ!

ನೆಹರು ಕ್ಯಾಬಿನೆಟ್ ನಲ್ಲಿ ಹಣಕಾಸು ಸಚಿವರಾಗಿದ್ದ ಟಿ ಟಿ ಕೃಷ್ಣಮಾಚಾರಿ ಮತ್ತು ಆಗಿನ ಆರ್‌ಬಿಐ ಗವರ್ನರ್ ರಾಮ್ ರಾವ್ ನಡುವೆ ಜಗಳ ಹತ್ತಿಕೊಂಡಾಗ ಪಂಡಿತ್ ನೆಹರು, ಆರ್‌ಬಿಐ ಸರ್ಕಾರದ ಅಧೀನ ಎಂದು ಹೇಳಿದ್ದರು. ಇನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಆರ್‌ಬಿಐ ಹಣಕಾಸು ಇಲಾಖೆಗೆ ಸಲಹೆ ಕೊಡಬಹುದು, ನಿಯಂತ್ರಣದ ಅಧಿಕಾರ ಇಲ್ಲ ಎಂದಿದ್ದರು. ಆದರೆ ಈಗ ಮೋದಿ ಕಾಲದಲ್ಲಿ ಮತ್ತೆ ಇದೇ ಪ್ರಶ್ನೆ ಉದ್ಭವವಾಗಿ ರಾಜೀನಾಮೆವರೆಗೆ ವಿಪರೀತಕ್ಕೆ ಹೋಗಿದೆ. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ    ಕ್ಲಿಕ್ ಮಾಡಿ  

click me!