ಮೂರು ರಾಜ್ಯ ಗೆದ್ದರೂ ಕಾಂಗ್ರೆಸ್ ಗೆ ಮತಯಂತ್ರದ ಮೇಲೆ ಡೌಟ್

By Web DeskFirst Published Dec 11, 2018, 3:53 PM IST
Highlights

ಪಂಚರಾಜ್ಯಗಳಲ್ಲಿ ಈಗಾಗಲೇ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಬಹುತೇಕ ಬಹುಮತ ಪಡೆದುಕೊಂಡಿದ್ದು, ಸರ್ಕಾರ ರಚನೆ ಖಚಿತವಾದದಂತಾಗಿದೆ. ಆದರೆ ತೆಲಂಗಾಣದಲ್ಲಿ ಟಿಆರ್ ಎಸ್ ಬಹುಮತ ಪಡೆದಿದ್ದು, ಕಾಂಗ್ರೆಸ್ ಮತಯಂತ್ರದ ಮೇಲೆ ಅನುಮಾಣ ವ್ಯಕ್ತಪಡಿಸಿದೆ. 

ಹೈದ್ರಾಬಾದ್ : ಐದು ರಾಜ್ಯಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಸರಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಈಗಲಾದರೂ ಕಾಂಗ್ರೆಸ್ ಮಂತಯಂತ್ರ ತಿರುಚಿದೆ ಎಂದು ಆರೋಪಿಸುವುದಿಲ್ಲವೆಂದುಕೊಂಡರೆ ಅದು ತಪ್ಪು. ಎಐಎಂಐಎಂ ಜತೆ ಕೈ ಜೋಡಿಸಿ ಸರಕಾರ ರಚಿಸುವ ಕನಸು ಕಾಣುತ್ತಿದ್ದ ಕಾಂಗ್ರೆಸ್‌ಗೆ ತೆಲಂಗಾಣದಲ್ಲಿ ತೀವ್ರ ಹಿನ್ನಡೆಯಾಗಿದ್ದು, ಅಲ್ಲಿ ಮತಯಂತ್ರವನ್ನು ತಿರುಚಲಾಗಿದೆ ಎಂದು ಆರೋಪಿಸುತ್ತಿದೆ. 

ಕಳೆದ ಡಿಸೆಂಬರ್ 7 ಎಂದು ನಡೆದ ತೆಲಂಗಾಣದ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ತೆಲಂಗಾಣ ಸರ್ಕಾರ ರಚಿಸುವಷ್ಟು ಬಹುಮತ ಟಿಐರ್‌ಎಸ್‌ಗೆ ಸಿಕ್ಕಿದೆ. ಕೆ.ಸಿ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್ 85 ಸ್ಥಾನಗಳಲ್ಲಿ ಗೆಲುವು ಪಡೆದಿದ್ದು, ಕಾಂಗ್ರೆಸ್ ಮೈತ್ರಿಕೂಟ ಕೇವಲ 23 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಇತರರು 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿಗೆ ಮೂರು ಕ್ಷೇತ್ರಗಳಲ್ಲಿ ಜಯಲಕ್ಷ್ಮಿ ಒಲಿದಿದ್ದಾಳೆ. 

ತೆಲಂಗಾಣದಲ್ಲಿ ಕೆಸಿಆರ್ ನೇತೃತ್ವದ ಟಿಆರ್‌ಎಸ್ ಬಹುಮತ ಪಡೆದ  ಬೆನ್ನಲ್ಲೇ ರಾಜ್ಯದಲ್ಲಿ ಮತಯಂತ್ರವನ್ನು ತಿರುಚಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮತಯಂತ್ರ ತಿರುಚಿರುವ ಸಾಧ್ಯತೆ ಇದ್ದು, ವಿವಿ ಪ್ಯಾಟ್ ಸ್ಲಿಪ್ ಗಳ ಮೂಲಕ ಮತ ಎಣಿಕೆ ಮಾಡಬೇಕು ಎಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಆಗ್ರಹಿಸಿದ್ದಾರೆ. 

ರಾಜ್ಯದಲ್ಲಿ 119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 60 ಮ್ಯಾಜಿಕ್ ನಂಬರ್. ಟಿಆರ್‌ಎಸ್ 85 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ರಾಜ್ಯ ರಚನೆಯಾದ ನಂತರ ಎರಡನೇ ಬಾರಿ ಪಕ್ಷ ಗದ್ದುಗೆ ಏರುತ್ತಿದೆ. 

ಡಿಸೆಂಬರ್ 7 ರಂದು ದೇಶದ ಪಂಚರಾಜ್ಯಗಳಾದ ಮಧ್ಯ ಪ್ರದೇಶ, ತೆಲಂಗಾಣ, ಮಿಜೋರಾಂ, ಛತ್ತೀಸ್ ಗಢ, ರಾಜಸ್ಥಾನದಲ್ಲಿ ಮುಕ್ತಾಯವಾದ ಚುನಾವಣೆ ಫಲಿತಾಂಶ ಇಂದು [ಡಿ.11] ಹೊರಬಿದ್ದಿದೆ.

click me!