
ಬೆಂಗಳೂರು(ಅ.30): RSS ರುದ್ರೇಶ್ ಹಂತಕರು ಪೊಲೀಸರ ವಿಚಾರಣೆ ಸಮಯದಲ್ಲಿ ಸ್ಫೋಟಕ ಮಾಹಿತಿ ಹೊರಹಾಕಿದ್ದು, ಬಿಜೆಪಿ ಸಂಸದ ಪ್ರತಾಪ್ ಸಿಂಹ ಹತ್ಯೆಗೆ ಎರಡು ಬಾರಿ ಯತ್ನ ನಡೆಸಲಾಗಿತ್ತು ಎಂದು ಸತ್ಯ ಬಾಯ್ಬಿಟ್ಟಿದ್ದಾರೆ.
RSS ರುದ್ರೇಶ್ ಹಂತಕರು ಹಿಂದೂಪರ ಮುಖಂಡರು, ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿದ್ದರು ಎನ್ನಲಾಗಿದೆ. ಸೆ.16ರಂದು ಶಿವಾಜಿನಗರದಲ್ಲಿ ರುದ್ರೇಶ್ರನ್ನು ಕೊಂದಿದ್ದ ಹಂತಕರು ವಿರಚಾರಣೆ ಸಮಯದಲ್ಲಿ ಅನೇಕ ಮಾಹಿತಿಯನ್ನು ಹೊರ ಹಾಕುತ್ತಿದ್ದು, ನಮ್ಮ ಮೊದಲ ಟಾರ್ಗೆಟ್ ಆಗಿದ್ದವರು ಪ್ರತಾಪ್ ಸಿಂಹ ಎಂದಿದ್ದಾರೆ.
ಬಿಜೆಪಿ ಸಂಸದ ಪ್ರತಾಪ್ ಸಿಂಹ ಹತ್ಯೆಗೆ ಸಂಚು ರೂಪಿಸಿದ್ದ RSS ರುದ್ರೇಶ್ ಹಂತಕರು, ಎರಡು ಬಾರಿ ಕೊಲೆಗೆ ಯತ್ನಿಸಿ, ವಿಫಲರಾಗಿದ್ದಾಗಿ ತನಿಖಾಧಿಕಾರಿಗಳ ಎದುರು ಬಾಯ್ಬಿಟ್ಟಿದ್ದಾರೆ. ಬಂಧಿತರ ಬಳಿ ಪ್ರತಾಪ್ ಸಿಂಹರ ಇತ್ತೀಚಿನ ಕಾರ್ಯಕ್ರಮಗಳ ಪಟ್ಟಿ ಇತ್ತು ಎನ್ನಲಾಗಿದೆ. ಇದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.