
ಕಲಬುರಗಿ(ಅ.30): ಎರಡು ಸಮುದಾಯಗಳ ನಡುವಿನ ಘರ್ಷಣೆಯಿಂದಾಗಿ ದೇವರ ಜಾತ್ರೆ ಸ್ಥಗಿತಗೊಂಡು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ಕಲಬುರಗಿ ಜಿಲ್ಲೆಯ ಮೇಳಕುಂದಾ ಬಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಸದ್ಯ 144 ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಐವತ್ತಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಗ್ರಾಮದ ತುಂಬಾ ಪೊಲೀಸರು ತುಂಬಿಕೊಂಡಿದ್ದು ಈ ಗ್ರಾಮಸ್ಥರು ಜಾತ್ರೆಯ ದಿನ ಸಂಭ್ರಮ ಒತ್ತಟ್ಟಿಗಿರಲಿ ಗ್ರಾಮದಲ್ಲಿ ನೆಮ್ಮದಿ ಯಾಗಿ ಮನೆ ಮುಂದೆ ಕೂಡುವಂತಹ ಸ್ಥಿತಿಯೂ ಇಲ್ಲದಂತಾಗಿದೆ. ಈ ನಡುವೆ ಬೆಳಿಗ್ಗೆ ಜಿಲ್ಲಾಡಳಿತದ ಎಚ್ಚರಿಕೆಯ ನಡುವೆಯೂ ಗ್ರಾಮದ ಮಹಿಳೆಯರು ಪಲ್ಲಕ್ಕಿ ಉತ್ಸವ ನಡೆಸಿದ್ದಾರೆ. ಬಳಿಕ ಪೊಲೀಸರು ಇದನ್ನು ತಡೆದಿದ್ದು , ಸಿದ್ದೇಶ್ವರ ದೇವಸ್ಥಾನವನ್ನು ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ.
ಸಿದ್ದೇಶ್ವರ ದೇವಸ್ಥಾನ ನಮ್ಮದೆಂದು ಲಿಂಗಾಯತ ಸಮುದಾಯ ವಾದಿಸುತ್ತಿದ್ದರೆ, ಇದು ನಮ್ಮ ಸಮುದಾಯಕ್ಕೆ ಸೇರಿದ್ದು ಎಂದು ಕುರುಬ ಸಮಾಜ ಪ್ರತಿವಾದ ನಡೆಸಿತ್ತಿದೆ. ಜಿಲ್ಲಾಡಳಿ ಶಾಂತಿ ಸಭೆ ನಡೆಸಲು ನಡೆಸಿದ ಯತ್ನ ವಿಫಲಗೊಂಡ ಬಳಿಕ, ಮುಂಜಾಗ್ರತಾ ಕ್ರಮವಾಗಿ ಜಾತ್ರೆ ಮಾಡದಂತೆ ಆದೇಶ ಹೊರಡಿಸಿದೆ. ಅದರೂ ಪಲ್ಲಕ್ಕಿ ಉತ್ಸವ ನಡೆಸಿರುವುದರಿಂದ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.