
ಕರ್ನಾಟಕದ ರಾಜಕೀಯದ ಎವರ್‌ಗ್ರೀನ್ ನಾಯಕ ಅನಂತ್ ಕುಮಾರ್
ಶಿಷ್ಯನ ಸಾವಿಗೆ ಕಂಬನಿ ಮಿಡಿದ ಭೀಷ್ಮ
ದೂರದೃಷ್ಟಿಯುಳ್ಳ ಅನಂತ್
ಅನಂತ್ ಹಿಡಿದಿದ್ರೆ ಎಲ್ಲ ಕೆಲಸವಾಗುತ್ತಿತ್ತು: ಅಂಬರೀಶ್
ಅನಂತಕುಮಾರ್ ನನ್ನ ಆತ್ಮೀಯ ಸ್ನೇಹಿತ. ಒಬ್ಬ ಒಳ್ಳೆಯ ರಾಜಕಾರಣಿ. ಕೇಂದ್ರದಲ್ಲಿ ಪ್ರಭಾವಿಯುತ ರಾಜಕಾರಣಿಯಾಗಿದ್ರು. ವಿಷ್ಣುವರ್ಧನ್‌ಗೆ ತುಂಬಾ ಆತ್ಮೀಯರಾಗಿದ್ರು. ನನ್ನನ್ನ ಅಡ್ವಾಣಿ ಬಳಿ ಕರೆದುಕೊಂಡು ಹೋಗಿದ್ರು. ಕೇಂದ್ರದಲ್ಲಿ ಏನಾದರೂ ಕೆಲಸ ಆಗಬೇಕು ಅಂದ್ರೆ ಅನಂತಕುಮಾರ್ ಹಿಡಿದ್ರೆ ಸಾಕು ಕೆಲಸ ಆಗುತ್ತೆ ಅಂತ ಹೇಳುತ್ತಿದ್ದೀವಿ. ಇಂದು ನಮ್ಮ ಸ್ನೇಹಿತ ನಮ್ಮನ್ನ ಅಗಲಿದ್ದಾರೆ. ನಾವು ಬೇರೆ ಬೇರೆ ಪಕ್ಷದಲ್ಲಿದ್ರು ಉತ್ತಮ ಸ್ನೇಹಿತರಾಗಿದ್ವಿ.
- ಅಂಬರೀಶ್, ಮಾಜಿ ಸಚಿವ
ನನ್ನನ್ನು ಸಚಿವನ್ನಾಗಸಿದ್ದೇ ಅನಂತ್ ಕುಮಾರ್: ಯತ್ನಾಳ್
ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಅನಂತಕುಮಾರ ಅವರು. ನನ್ನನ್ನು ರಾಜಕೀಯಕ್ಕೆ ತಂದವರು, ನನಗೆ ಸ್ಥಾನ ಮಾನ ಸಿಗಲು ಅವರೇ ಕಾರಣ.ಶಾಸಕನಾಗಲು, ಸಂಸದನಾಗಲು ಹಾಗೂ ಕೇಂದ್ರ ಸಚಿವನಾಗಿಸಿದ್ದೇ ಅವರು. ಕಳೆದ 30 ವರ್ಷಗಳಿಂದ ಅವರು ಪರಿಚಿತ. ಅನಂತ ನಿಧನ ಜೀವನದ ಕರಾಳ ದಿನ. ರಾಜ್ಯಕ್ಕೆ ಅನ್ಯಾಯವಾದಾಗ ಸಿಡಿದೆದ್ದಿದ್ದರು. ಆಲಮಟ್ಟಿ ಡ್ಯಾಂ ಎತ್ತರದ ವಿಷಯದಲ್ಲಿ ಆಂಧ್ರ ಪ್ರದೇಶ ವಿರೋಧಿಸಿತ್ತು. ಅಟಾರ್ನಿ ಜನರಲ್ ಹರೀಶ ಸಾಳ್ವೆ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆ ಹರಿಸಲು ಸಹಾಯ ಮಾಡಿದ್ದರು. ರಾಷ್ಟ್ರದಲ್ಲಿ ಕರ್ನಾಟಕದ ಧ್ವನಿಯಾಗಿದ್ದರು. ರಾಜಕೀಯವಾಗಿ ಎಲ್ಲ ನಾಯಕರ ಒಡನಾಟವಿತ್ತು. ಟ್ರಬಲ್ ಶೂಟರ್ ನಿಧನದಿಂದ ಬಿಜೆಪಿಗೆ ರಾಜ್ಯಕ್ಕೆ ಅಪಾರ ನಷ್ಟವಾಗಿದೆ- ಬಸನಗೌಡ ಪಾಟೀಲ್ ಉತ್ನಾಳ್, ವಿಜಯಪುರ ನಗರ ಶಾಸಕ
ವಿನಯವಂತ ಕಾಡಕಾರಣಿಗೆ ಭೈರಪ್ಪ ಸಂತಾಪ
ಅವರೊಬ್ಬ ಉತ್ತಮ ರಾಜಕೀಯ ಪಟು. ವಿದ್ವಾಂಸರು, ಗಂಭೀರ ಚಿಂತಕರನ್ನು ಕಂಡರೆ ಬಹಳವಾಗಿ ಗೌರವಿಸುತ್ತಿದ್ದರು. ಬ್ಯಾಂಕ್‌ಗಳನ್ನು ಕೇಂದ್ರೀಕೃತ ವ್ಯವಸ್ಥೆಗೆ ಒಳಪಡಿಸುವ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹಿತ ಕಾಪಾಡಿದ್ದರು.ನಾನೂ ಸೇರಿದಂತೆ ನಿಯೋಗವನ್ನು ಅರುಣ್ ಜೇಟ್ಲಿ ಅವರ ಬಳಿ ಕರೆದೊಯ್ದು ಮನವರಿಕೆ ಮಾಡಿಸಿಕೊಟ್ಟರು. ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಪ್ರಚಾರ ಪಡೆಯದೆ ಮೌನವಾಗಿರುತ್ತಿದ್ದ ವಿನಯವಂತ ರಾಜಕಾರಣಿ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ.
-ಎಸ್.ಎಲ್. ಭೈರಪ್ಪ, ಹಿರಿಯ ಸಾಹಿತಿ
ಅನಂತ್‌ಗೆ ಅದಮ್ಯ ಚೈತನ್ಯವಾಗಿದ್ದ ಪತ್ನಿಗೆ ಇನ್ಫೋಸಿಸ್ ಸುಧಾ ಮೂರ್ತಿ ಸಾಂತ್ವನ
ಗೆಳೆಯನ ಅಂತಿದ ದರ್ಶನ ಪಡೆದ ಸಂಸದ ಆರ್‌ಸಿ
ಹಿರಿಯಣ್ಣನಂತಿದ್ದ ಅನಂತ್ ನಿಧನಕ್ಕೆ ಸಂಸದ ಪ್ರತಾಪ್ ಸಿಂಹ ಸಂತಾಪ
ಅನಂತ್ ಸಾವಿಗೆ ಅಮಿತ್ ಸಂತಾಪ
;
ಸಹೋದ್ಯೋಗಿ ಸಾವಿಗೆ ಕಣ್ಣೀರಾದ ಪಿಯೂಶ್, ಉಪ ರಾಷ್ಟ್ರಪತಿ
ಅಗಲಿದ ಗೆಳೆಯನಿಗೆ ನಿತೀಶ್ ಅಶ್ರುತರ್ಪಣ
ಅನಂತ್ ಅಂತಿಮ ದರ್ಶನ ಪಡೆದ ರಾಜ್ಯಪಾಲ
ರಾಜ್ಯದಲ್ಲಿ ಪಕ್ಷ ಬೆಳೆಸಿದ ಅನಂತ್ ನೆನೆದ ಬಿಎಸ್‌ವೈ
ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕೊಡಿಸುತ್ತಿದ್ದರು. ನನ್ನ ಅವರ ಸಂಬಂಧ 30 ವರ್ಷಗಳದ್ದು. ಕರ್ನಾಟಕದಲ್ಲಿ ಬಿಜೆಪಿ ಇಷ್ಟು ಬೆಳೆಯೋದಕ್ಕೆ ಅವರ ಕೊಡುಗೆ ಅಪಾರ. ನಾನು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ರಾಜ್ಯದ ಉದ್ದಗಲಕ್ಕೂ ನನ್ನ ಜೊತೆಯಲ್ಲೇ ಪ್ರವಾಸ ಮಾಡಿದ್ರು. ನಾನು ಶಾಸಕನಾದಾಗ ಅವರು ಹೈ ಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು. ಅವತ್ತು ಅವರು ಕೋಟ್ ಬಿಚ್ಚಿಟ್ಟು ಸಕ್ರಿಯ ರಾಜಕಾರಣಕ್ಕೆ ಬಂದರು. ಅಂದಿನಿಂದ ಇಂದಿನವರೆಗೂ ರಾಜಕಾರಣದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ, ಮೋದಿ ಅವರ ಸರ್ಕಾರದಲ್ಲಿ ಅವರು ಮಂತ್ರಿಯಾಗಿ ಕಾರ್ಯನಿರ್ವಾಹಿಸಿದ್ದಾರೆ. ಆರು ಬಾರಿ ಬೆಂಗಳೂರಿನ ಸಂಸದರಾಗಿ ಆಯ್ಕೆಯಾಗಿದ್ದರು. ಅವರ ಅಕಾಲಿಕ ಮರಣ ಅತೀವ ಶೋಕ ತಂದಿದೆ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ.
- ಬಿ.ಎಸ್.ಯಡಿಯೂರಪ್ಪ
'ವಿಭವ'ದಲ್ಲಿ ನೀರವ ಮೌನ
ಹುಬ್ಬಳ್ಳಿಯ ಅನಂತಕುಮಾರ್ ನಿವಾಸದಲ್ಲಿ ನೀರವ ಮೌನ. ಇಂದಿರಾ ನಗರದಲ್ಲಿರುವ ಅನಂತಕುಮಾರ್ ಅವರ ತಂದೆ ನಾರಾಯಣ ಶಾಸ್ತ್ರಿಗಳು ಕಟ್ಟಿಸಿದ್ದ 'ವಿಭವ' ನಿವಾಸವಿದೆ. ಇದೇ ಮನೆಯಿಂದ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದ ಅನಂತಕುಮಾರ್. ಹುಬ್ಬಳ್ಳಿಗೆ ಬಂದಾಗ ಇಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರು. ಅನಂತಕುಮಾರ್ ನಿಧನದ ಸುದ್ದಿ ಕೇಳಿ ತೀವ್ರ ಆಘಾತಗೊಂಡ ಮನೆ ಅಕ್ಕಪಕ್ಕದ ನಿವಾಸಿಗಳು ಕಣ್ಣೀರಿಟ್ಟಿದ್ದಾರೆ. ಮನೆಗೆ ಬೀಗ ಹಾಕಿ ಹದಿನೈದು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿದೆ ಅನಂತ್ ಕುಮಾರ್ ಕುಟುಂಬ.
ಮಾರ್ಗದರ್ಶಕನ ನಿಧನಕ್ಕೆ ಕೋಟಾ ಶ್ರೀನಿವಾಸ ಪೂಜಾರಿ ಸಂತಾಪ
ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನ ರಾಷ್ಟ್ರ ಮತ್ತು ರಾಜ್ಯಕ್ಕೆ ಅಪಾರ ನಷ್ಟ ತಂದಿದೆ. ನಾನು ವಿಪಕ್ಷ ನಾಯಕನಾಗಿದ್ದಾಗ ನನಗೆ ಮಾರ್ಗದರ್ಶನ ಮಾಡಿದ್ದರು. ರಾಜ್ಯದಲ್ಲಿ ವಿರೋಧವಿಲ್ಲದೆ ವಿರೋಧ ಪಕ್ಷದ ನಾಯನಾಗಿದ್ದೀರಿ, ಅಂತ ಶುಭ ಹಾರೈಸಿದ್ದರು. ನೂರಾರು ಬಿಜೆಪಿ ನಾಯಕರಿಗೆ ಮಾರ್ಗದರ್ಶನ ಮಾಡಿದ್ದರು. ಯಾವುದೇ ವಿಚಾರ ಮಂಡನೆ ಮಾಡುವಾಗಸೂ ದೂರದೃಷ್ಟಿ ಇಟ್ಟುಕೊಂಡು ವಿಚಾರ ಮಂಡನೆ ಮಾಡುತ್ತಿದ್ದರು. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕೊಡಲಿ.
- ಕೋಟಾ ಶ್ರೀನಿವಾಸ ಪೂಜಾರಿ, ಪರಿಷತ್ ವಿಪಕ್ಷ ನಾಯಕ
AICC ಅಧ್ಯಕ್ಷ ರಾಹುಲ್ ಗಾಂಧಿ ಅಗಲಿದ ಬಿಜೆಪಿ ನಾಯಕ ಅನಂತ್ ಕುಮಾರ್’ಗೆ ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದಾರೆ.
I’m sorry to hear about the passing of Union Minister, Shri Ananth Kumar ji, in Bengaluru, earlier this morning. My condolences to his family & friends. May his soul rest in peace. Om Shanti.
ಸತತ ಆರು ಬಾರಿ ಸಂಸದರಾಗಿದ್ದ ಅನಂತ್ ಕುಮಾರ್ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಪ್ರಧಾನಿ ಮೋದಿ ಸರಕಾರದಲ್ಲಿ ಗೊಬ್ಬರ ಹಾಗೂ ರಾಸಾಯನಿಕ ಸಚಿವರಾಗಿದ್ದ ಅನಂತ್ ಕುಮಾರ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪ್ರಭಾವಿತರಾಗಿದ್ದರು.ರಾಜ್ಯದಲ್ಲಿ ಬಿಜೆಪಿಯನ್ನು ಬೆಳೆಸಿ, ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ