'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್‌ ಬ್ಯಾನ್'!

By Web DeskFirst Published Nov 11, 2018, 3:49 PM IST
Highlights

ಭೋಪಾಲದ ಪ್ರಾದೇಶಿಕ ಕಚೇರಿಯಲ್ಲಿ ಬಿಡುಗಡೆಗೊಳಿಸಿರುವ ತನ್ನ ಈ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳನ್ನು ಬ್ಯಾನ್ ಮಾಡುವುದಾಗಿ ಘೋಷಿಸಿದೆ. ಇದಾದ ಬೆನ್ನಲ್ಲೇ ಮಧ್ಯಪ್ರದೇಶದ ರಾಜಕೀಯ ಕಾವು ಹೆಚ್ಚಿದೆ.

ಭೋಪಾಲ್[ನ.11]: ಮಧ್ಯಪ್ರದೇಶ ಚುನಾವಣೆ ಸಮೀಪಿಸುತ್ತಿದ್ದು ಕಾಂಗ್ರೆಸ್ ಶನಿವಾರದಂದು ತನ್ನ 'ವಚನ ಪತ್ರ' ಎಂಬ ಹೆಸರಿನಡಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಭೋಪಾಲದ ತನ್ನ ಪ್ರಾದೇಶಿಕ ಕಚೇರಿಯಲ್ಲಿ ಬಿಡುಗಡೆಗೊಳಿಸಿರುವ ತನ್ನ ಈ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳನ್ನು ಬ್ಯಾನ್ ಮಾಡುವುದಾಗಿ ಘೋಷಿಸಿದೆ. ಇದಾದ ಬೆನ್ನಲ್ಲೇ ಮಧ್ಯಪ್ರದೇಶದ ರಾಜಕೀಯ ಕಾವು ಹೆಚ್ಚಿದೆ.

‘ಸರ್ಕಾರಿ ಆವರಣಗಳಲ್ಲಿ ಆರ್‌ಎಸ್‌ಎಸ್ ಶಾಖೆಗಳನ್ನು ನಿರ್ಬಂಧಿಸಲಾಗುವುದು ಸರ್ಕಾರಿ ಅಧಿಕಾರಿ ಹಾಗೂ ಉದ್ಯೋಗಿಗಳಿಗೆ ಶಾಖೆಗಳಲ್ಲಿ ನೀಡುವ ರಿಯಾಯಿತಿಯನ್ನೂ ನಿಲ್ಲಿಸುತ್ತೇವೆ' ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬರೆದುಕೊಂಡಿದೆ. ಇದಾದ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಸಿಕೊಂಡಿವೆ.

ಈ ವಿಚಾರವಾಗಿ ಬಿಜೆಪಿಯು ಕಾಂಗ್ರೆಸ್‌ನ್ನು ಗುರಿಯಾಗಿಸಿಕೊಂಡಿದೆ. ಬಿಜೆಪಿ ವಕ್ತಾರ ರಜನೀಶ್ ಅಗರ್‌ವಾಲ್ ಮಾತನಾಡುತ್ತಾ 'ಕಾಂಗ್ರೆಸ್ ಆರ್‌ಎಸ್‌ಎಸ್ ಹೆಸರು ಬಳಸಿ ಕೇವಲ ಅಲ್ಪಸಂಖ್ಯಾತರು ಹಾಗೂ ಇತರ ಜನರಲ್ಲಿ ಸಂಘದ ಕುರಿತಾಗಿ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುತ್ತಿದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧವೂ ಧ್ವನಿ ಎತ್ತಿದ ಅವರು 'ರಾಹುಲ್ ಗಾಂಧಿ ಎಲ್ಲಿ ಹೋಗುತ್ತಾರೋ ಅಲ್ಲೆಲ್ಲಾ ದೇಶ ವಿರೋಧಿ ಘೋಷಣೆಗಳು ಕೇಳಲು ಸಿಗುತ್ತವೆ' ಎಂದಿದ್ದಾರೆ.

ಕಾಂಗ್ರೆಸ್ ಮಧ್ಯಪ್ರದೇಶಕ್ಕಾಗಿ ಬಿಡುಗಡೆಗೊಳಿಸಿರುವ ಪ್ರಣಾಳಿಕೆಯಲ್ಲಿ ಆರ್ಎಸ್ಎಸ್ ವಿಚಾರ ಹೊರತುಪಡಿಸಿ ಬಹುಚರ್ಚಿತ ವ್ಯಾಪಂ ಹಗರಣದ ಪರೀಕ್ಷೆಗಳಲ್ಲಿ ಕಳೆದ 10 ವರ್ಷಗಳಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳ ಹಣವನ್ನು ಹಿಂತಿರುಗಿಸುವ ಭರವಸೆ ನೀಡಿದೆ. ಇದರೊಂದಿಗೆ ವ್ಯಾಪಂ ಬಂದ್ ಮಾಡುವುದಾಗಿಯೂ ಘೋಷಿಸಿದೆ.

click me!