ಶಬರಿಮಲೆಗೆ 2 ದಿನ ಮಹಿಳೆಯರಿಗಷ್ಟೇ ಪ್ರವೇಶ!

Published : Nov 24, 2018, 08:47 AM IST
ಶಬರಿಮಲೆಗೆ 2 ದಿನ ಮಹಿಳೆಯರಿಗಷ್ಟೇ ಪ್ರವೇಶ!

ಸಾರಾಂಶ

ಸುಪ್ರೀಂ ಆದೇಶದ ಹೊರತಾಗಿಯೂ, ಇದುವರೆಗೆ 10-50ರ ವಯೋಮಾನದ ಮಹಿಳೆಯರಿಗೆ ಅಯ್ಯಪ್ಪನ ದರ್ಶನ ಸಾಧ್ಯವಾಗದ ಹಿನ್ನೆಲೆಯಲ್ಲಿ, ಎರಡು ದಿನವನ್ನು ಕೇವಲ ಮಹಿಳಾ ಭಕ್ತರ ಪ್ರವೇಶಕ್ಕೆಂದೇ ಮೀಸಲಿಡಲು ಸಿದ್ಧವಿರುವುದಾಗಿ ಕೇರಳ ಸರ್ಕಾರ, ರಾಜ್ಯ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಕೊಚ್ಚಿ[ನ.24]: ಶಬರಿಮಲೆ ಅಯ್ಯಪ್ಪ ದರ್ಶನ ಪಡೆಯಲು ಎಲ್ಲಾ ವಯೋಮಾನದ ಮಹಿಳೆಯರಿಗೆ ಅವಕಾಶ ಕೊಟ್ಟಸುಪ್ರೀಂಕೋರ್ಟ್‌ ತೀರ್ಪಿನಿಂದ ಉದ್ಭವವಾಗಿರುವ ಬಿಕ್ಕಟ್ಟು, ಶೀಘ್ರವೇ ಇನ್ನೊಂದು ಮಹತ್ವದ ಘಟ್ಟತಲುಪುವ ಸಾಧ್ಯತೆ ಇದೆ. ಸುಪ್ರೀಂ ಆದೇಶದ ಹೊರತಾಗಿಯೂ, ಇದುವರೆಗೆ 10-50ರ ವಯೋಮಾನದ ಮಹಿಳೆಯರಿಗೆ ಅಯ್ಯಪ್ಪನ ದರ್ಶನ ಸಾಧ್ಯವಾಗದ ಹಿನ್ನೆಲೆಯಲ್ಲಿ, ಎರಡು ದಿನವನ್ನು ಕೇವಲ ಮಹಿಳಾ ಭಕ್ತರ ಪ್ರವೇಶಕ್ಕೆಂದೇ ಮೀಸಲಿಡಲು ಸಿದ್ಧವಿರುವುದಾಗಿ ಕೇರಳ ಸರ್ಕಾರ, ರಾಜ್ಯ ಹೈಕೋರ್ಟ್‌ಗೆ ಶುಕ್ರವಾರ ಮಾಹಿತಿ ನೀಡಿದೆ.

ಇದನ್ನೂ ಓದಿ: ಶಬರಿಮಲೆಯಲ್ಲೇಕೆ ಹೀಗಾಯ್ತು..?

ರಾಜ್ಯ ಸರ್ಕಾರದ ಈ ಕ್ರಮಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುವುದು ಖಚಿತವಿರುವ ಹಿನ್ನೆಲೆಯಲ್ಲಿ, ಈಗಾಗಲೇ ಉದ್ವಿಗ್ನ ಸ್ಥಿತಿ ನೆಲೆಸಿರುವ ಶಬರಿಮಲೆ ಸುತ್ತಮುತ್ತಲ ಪ್ರದೇಶ ಹಾಗೂ ಕೇರಳದ ಹಲವು ಭಾಗಗಳು ಮತ್ತೊಮ್ಮೆ ಹೋರಾಟಕ್ಕೆ ವೇದಿಕೆಯಾಗುವ ಎಲ್ಲಾ ಸಾಧ್ಯತೆಗಳೂ ಇವೆ.

ಇದನ್ನೂ ಓದಿ: ಶಬರಿಮಲೆ ಯಾತ್ರಾರ್ಥಿಗಳಿಗೆ ಇ- ಬಸ್ ಸೌಲಭ್ಯ !

ಭದ್ರತೆ ಕೊಡಿ: ಪ್ರತಿಭಟನೆ ಹಿನ್ನೆಲೆಯಲ್ಲಿ ಇದುವರೆಗೆ ಅಯ್ಯಪ್ಪ ದರ್ಶನ ಸಾಧ್ಯವಾಗದ ಹಿನ್ನೆಲೆಯಲ್ಲಿ ನಾಲ್ವರು ಮಹಿಳೆಯರ ಗುಂಪೊಂದು ಶುಕ್ರವಾರ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿತ್ತು. ಅದರಲ್ಲಿ, ಶಬರಿಮಲೆ ಸುತ್ತಮುತ್ತಲ ಪ್ರದೇಶದಿಂದ ಪ್ರತಿಭಟನಾ ನಿರತರನ್ನು ತೆರವುಗೊಳಿಸಬೇಕು. ಮಹಿಳೆಯರ ಪ್ರವೇಶಕ್ಕೆ ವಿಶೇಷ ಭದ್ರತೆ ಒದಗಿಸಬೇಕು. ಮಹಿಳೆಯರ ಪ್ರವೇಶಕ್ಕೆಂದೇ 3 ದಿನ ಮೀಸಲಿಡಬೇಕು ಎಂದು ಕೋರಿದ್ದರು. ಈ ವೇಳೆ ಪ್ರತಿಕ್ರಿಯೆ ಸಲ್ಲಿಸಿದ್ದ ಕೇರಳ ಸರ್ಕಾರದ ಪರ ವಕೀಲರು 3 ದಿನ ಮೀಸಲಿಡುವುದು ಸಾಧ್ಯವಿಲ್ಲ. 2 ದಿನವನ್ನುಮಹಿಳೆಯರಿಗೆ ಮೀಸಲು ಇಡಲು ಸಿದ್ಧ ಎಂದು ಘೋಷಿಸಿತು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಾಲಯ ಈ ವೇಳೆ, ಈ ಸಂಬಂಧ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಸೂಚಿಸಿತು ಪ್ರಕರಣವನ್ನು ಮುಂದೂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಬಸ್ 3 ಕಾರುಗಳ ಮಧ್ಯೆ ಸರಣಿ ಅಪಘಾತ : ನಾಲ್ವರು ಬೆಂಕಿಗಾಹುತಿ
ಕೇಂದ್ರ, ಮೋದಿ ಮಾಡಿದ್ದೆಲ್ಲ ತಪ್ಪು ಎನ್ನಲಾಗದು, Vote Chori ಆರೋಪದಿಂದ ಕಾಂಗ್ರೆಸ್‌ನ ನೈತಿಕತೆ ಕುಸಿತ!