ಟ್ರಬಲ್‌ಶೂಟರ್ ಸಿದ್ದರಾಮಯ್ಯ ಟ್ರಬಲ್‌ಮೇಕರ್‌ ಆಗಿದ್ದು ಯಾಕೆ?

First Published Jun 27, 2018, 5:26 PM IST
Highlights

ರಾಜ್ಯ ಕಾಂಗ್ರೆಸ್‌ನ ಅಧಿನಾಯಕ ಸಿದ್ದರಾಮಯ್ಯ ಇದೀಗ ರಾಜ್ಯ ಕಾಂಗ್ರೆಸ್‌ಗೆ ಮುಳುವಾಗುತ್ತಿದ್ದಾರೆಯೇ? ಹಾಗಾದರೆ ಸಿದ್ದರಾಮಯ್ಯರ ಇಂಥ ವರ್ತನೆಗಳಿಗೆ ಕಾರಣ ಏನು? ಅಷ್ಟಕ್ಕೂ ಮೈತ್ರಿ ಸರಕಾರದಲ್ಲಿ ಅಪಸ್ವರ ಏಳಲು ಯಾರು ಕಾರಣ? ಉತ್ತರ ಇಲ್ಲಿದೆ.

ಬೆಂಗಳೂರು[ಜೂ.27] ಕಳೆದ ವರ್ಷ ಇದೇ ಸಮಯಕ್ಕೆ ಹೋಲಿಕೆ ಮಾಡಿದರೆ ರಾಜ್ಯ ಕಾಂಗ್ರೆಸ್ಸಿನ ಅಧಿನಾಯಕ ಯಾರು ಎಂದು ಕೇಳಿದ್ದರೆ? ಸಿದ್ದರಾಮಯ್ಯ ಎಂಬ ಉತ್ತರಕ್ಕೆ ಫುಲ್ ಮಾರ್ಕ್ಸ್ ಕೊಡಬಹುದಿತ್ತು. ಆದರೆ ಇಂದು ಅದೇ ಸಿದ್ದರಾಮಯ್ಯ ಕಾಂಗ್ರೆಸ್‌ನ ತಾನು ನಡೆಯಬೇಕು ಎಂದು ಅಂದುಕೊಂಡಿದ್ದ ಹಾದಿಗೆ ಮುಳ್ಳಾಗಿ ನಿಂತಿದ್ದಾರೆ. 

ಒಂದು ಕಾಲದ ಟ್ರಬಲ್‌ಶೂಟರ್ ಸಿದ್ದರಾಮಯ್ಯ ಇದೀಗ ಕಾಂಗ್ರೆಸ್‌ಗೆ ಟ್ರಬಲ್‌ಮೇಕರ್ ಆಗಿ ಪರಿಣಮಿಸುತ್ತಿದ್ದಾರೆ. ವಿಶ್ರಾಂತಿ ಪಡೆಯಲೆಂದು ದಕ್ಷಿಣ ಕನ್ನಡದ ಶಾಂತಿವನಕ್ಕೆ ತೆರಳಿದ್ದ ಸಿದ್ದರಾಮಯ್ಯನವರ ಪ್ರತಿದಿನದ ದಿನಚರಿ ರಾಜ್ಯ ಮತ್ತು ರಾಷ್ಟ್ರ ಕಾಂಗ್ರೆಸ್ ನಾಯಕರಿಗೆ ಬಿಸಿತುಪ್ಪವಾಗಿದೆ. ಸಿದ್ದರಾಮಯ್ಯ ಟ್ರಬಲ್‌ಮೇಕರ್ ಆಗಲು ಕಾರಣ ಏನು? ಉತ್ತರ ಇಲ್ಲಿದೆ..

ಸರ್ಕಾರ ರಚನೆ ವೇಳೆಯೇ ನಡೆದಿದೆ ಮಹತ್ವದ ಒಪ್ಪಂದ

ವಿಧಾನಸಭೆ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ವಿಧಾನಸಭೆ ಚುನಾವಣೆಯನ್ನು ಎದುರಿಸಿತ್ತು.  ಕಾಂಗ್ರೆಸ್ ಬಹುಮತ ಪಡೆದುಕೊಂಡಿದ್ದೆ ಆದಲ್ಲಿ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ತಪ್ಪಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. ಆದರೆ ಫಲಿತಾಂಶ ಅತಂತ್ರ ವಿಧಾನಸಭೆಯನ್ನು ನಿರ್ಮಾಣ ಮಾಡಿತ್ತು.

ಸಮನ್ವಯ ಸಮಿತಿ ಅಧ್ಯಕ್ಷ: ಫಲಿತಾಂಶದ ದಿನವೇ ಜೆಡಿಎಸ್‌ಗೆ ಜಾತ್ಯತೀತ ಶಕ್ತಿಗಳು ಎಂಬ ಆಧಾರ ಇಟಟುಕೊಂಡು ಕಾಂಗ್ರೆಸ್ ಬೇಷರತ್ ಬೆಂಬಲ ನೀಡಿತ್ತು. ಸ್ವತಃ ಸಿದ್ದರಾಮಯ್ಯ ಮತ್ತು ಪರಮೇಶ್ವರ ಅವರೇ ಬೆಂಬಲ ಘೊಷಣೆ ಮಾಡಿಬಿಟ್ಟಿದ್ದರು. ನಂತರ ಸರಕಾರ ರಚನೆಯಾದಾಗ ಸಿದ್ದರಾಮಯ್ಯಗೆ ಕನಿಷ್ಠ ಕಾರ್ಯಕ್ರಮ ರೂಪಿಸುವ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಯಿತು. ಅಲ್ಲದೇ ವಿಧಾನಸೌಧದಲ್ಲಿ ವಿಶೇಷ ಕೊಠಡಿ ನೀಡುವ ವ್ಯವಸ್ಥೆಯನ್ನು ಮಾಡಲಾಯಿತು.

ಅಧಿಕಾರ ಹಿಡಿಯಲು ಆಪರೇಷನ್ ಕಮಲ ನಡೆಸುತ್ತಿದೆ ಬಿಜೆಪಿ?

ಪರಂರೊಂದಿಗಿನ ಮುನಿಸು: ಯಾರೂ ಏನೇ ಅಂದರೂ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಾ. ಜಿ.ಪರಮೇಶ್ವರ ನಡುವೆ ಮುಸುಕಿನ ಗುದ್ದಾಟ ನಡೆದುಕೊಂಡೆ ಬಂದಿದೆ. ಹಿಂದಿನ ಸರಕಾರದಲ್ಲಿ ಸಿದ್ದರಾಮಯ್ಯ ಮೆಲುಗೈ ಸಾಧಿಸಿದ್ದರೆ ಈ ಸರಕಾರದಲ್ಲಿ ಪರಮೇಶ್ವರ ಅಸ್ತಿತ್ವ ಮೇಲಾಯಿತು. ಅಲ್ಲದೇ ಡಿಸಿಎಂ ಪಟ್ಟವೂ ಒಲಿದು ಬಂತು. ಇದು ಒಂದು ಹಂತದಲ್ಲಿ ಸಿದ್ದರಾಮಯ್ಯನವರಿಗೆ ಹಿನ್ನಡೆ ಅನ್ನಿಸಿದ್ದು ಸುಳ್ಳಲ್ಲ.

ಜೆಡಿಎಸ್ ಸಖ್ಯ ಅಷ್ಟಕಷ್ಟೆ! ಜೆಡಿಎಸ್‌ನಿಂದಲೇ ಬಂದ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಮತ್ತು ದೇವೇಗೌಡರೊಂದಿಗೆ ಮೊದಲಿನಂತೆ ನಡೆದುಕೊಳ್ಳುವುದು ಸುಲಭ ಅಲ್ಲ. ಅನಿವಾರ್ಯ ಸಂದರ್ಭದಲ್ಲಿ ಸರಕಾರಕ್ಕೆ ಬೆಂಬಲ ನೀಡಿದ್ದರೂ ತಾವು ಮತ್ತು ತಮ್ಮ ಬೆಂಬಲಿಗರೂ ಮೂಲೆ ಗುಂಪಾಗುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಬಜೆಟ್ ಪುರಾಣ: ಕುಮಾರಸ್ವಾಮಿ ಹೊಸ ಸರಕಾರ ಬಂದಿದೆ. ಹೊಸ ಬಜೆಟ್ ಮಮಡಿಸುತ್ತೇನೆ. ರೈತರ ಸಾಲ ಮನ್ನಾಕ್ಕೆ ಸಿದ್ಧ ಎಂದು ಪದೇ ಪದೇ ಹೇಳುತ್ತಿದ್ದಾರೆ. ಹೊಸ ಬಜೆಟ್ ಮಂಡನೆಗೆ ರಾಹುಲ್ ಗಾಂಧಿ ಸಹ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ ಸಿದ್ದರಾಮಯ್ಯಗೆ ಹೊಸ ಬಜೇಟ್ ಬೇಕಾಗಿಲ್ಲ. ತಾವು ಮಾಡಿದ ಘೋಷಣೆಗಳನ್ನು ಪಕ್ಕಕ್ಕೆ ಸರಿಸಲಾಗುತ್ತದೆ ಎಂಬ ಆತಂಕ ಕಾಡುತ್ತಿದೆ.

ಮುಂದಿನ ರಾಜಕೀಯ ತಂತ್ರ: ಸಚಿವ ಸಂಪುಟ ವಿಸ್ತರಣೆ ಸಂದರ್ಭದ ಅತೃಪ್ತರನ್ನು ಒಂದುಗೂಡಿಸಿಕೊಂಡು ಸಿದ್ದರಾಮಯ್ಯ ಇದೀಗ ಯಾರಿಗೂ ತಿಳಿಯದ ಕಾರ್ಯತಂತ್ರ ಶುರುಹಚ್ಚಿಕೊಂಡಿದ್ದಾರೆ. ಜೆಡಿಎಸ್ ಸಖ್ಯ ಕಾಂಗ್ರೆಸ್‌ಗೆ ಮಾರಕವಾಗುತ್ತಿದೆ ಎಂದು ಬಿಂಬಿಸಲು ಸಿದ್ದು ಯೋಚಿಸಿದ್ದಾರೆಯೋ ? ಅವರೆ ಹೇಳಬೇಕು.

ಮೋದಿ ಎದುರಿಸುವ ಶಕ್ತಿ ಇರೋದು ಸಿದ್ದರಾಮಯ್ಯಗೆ ಮಾತ್ರ!

ಒಟ್ಟಿನಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಆತಂಕ, ತಮ್ಮ ಜನಪ್ರಿಯ ಯೋಜನೆಗಳಿಗೆ ಹಿನ್ನಡೆಯಾಗುತ್ತದೆ ಎಂಬ ಭಯ, ಒಲ್ಲದ ಜೆಡಿಎಸ್ ಸಂಬಂಧ ಎಲ್ಲವೂ ಟ್ರಬಲ್ ಶೂಟರ್ ಆಗಿದ್ದ ಸಿದ್ದರಾಮಯ್ಯರನ್ನು ಇದೀಗ ಟ್ರಬಲ್ ಮೇಕರ್ ಆಗುವಂತೆ ಮಾಡಿದೆ.

click me!