ಇಡೀ ಜಗತ್ತನ್ನು ಬೆಚ್ಚಿ ಬೀಳಿಸಲಿರುವ ಇಸ್ರೋ
ಚಂದ್ರಯಾನ-2 ಜೊತೆ ಹೋಗಲಿದೆ ರೋವರ್
ಚಂದ್ರನ ದಕ್ಷಿಣ ಭೂಭಾಗದ ಅಧ್ಯಯನ ನಡೆಸಲಿದೆ ರೋವರ್
ಹಿಲಿಯಂ-3 ಭೂಮಿಗೆ ತರುವ ಯೋಜನೆ ಯಶಸ್ವಿಯಾಗುತ್ತಾ?
ಬೆಂಗಳೂರು(ಜೂ.27): ಭಾರತದ ಇಸ್ರೋ ಸದ್ಯದಲ್ಲೇ ಚಂದ್ರಯಾನ-2 ಯೋಜನೆ ಕೈಗೊಳ್ಳಲಿದೆ. ಈ ಯೋಜನೆಯಲ್ಲಿ ರೋವರ್ ವೊಂದನ್ನು ಜೊತೆಗೆ ಕಳುಹಿಸಲಿರುವ ಇಸ್ರೋ, ಇದುವರೆಗೂ ಯಾರೂ ನೋಡಿರದ ಚಂದ್ರನ ದಕ್ಷಿಣದ ಭೂಭಾಗದ ಅಧ್ಯಯನ ನಡೆಸಲಿದೆ.
ಈ ಪ್ರದೇಶದಲ್ಲಿ ಹೇರಳವಾಗಿ ಹಿಲಿಯಂ-3 ನಿಕ್ಷೇಪವಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಚಂದ್ರನ ದಕ್ಷಿಣದ ಭೂಭಾಗ ಪ್ರವೇಶಿಸಲಿರುವ ಈ ರೋವರ್, ಅಲ್ಲಿನ ಹಿಲಿಯಂ-3 ನಿಕ್ಷೇಪಗಳ ಕುರಿತು ಅಧ್ಯಯನ ನಡೆಸಲಿದೆ.
ಹಿಲಿಯಂ-3 ಶಕ್ತಿ ಉತ್ಪಾದನೆ ಮತ್ತು ಅಣುಶಕ್ತಿ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ. ಭೂಮಿಯ ಮೇಲೆ ಹಿಲಿಯಂ-3 ಸಂಪತ್ತು ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು, ಜಾಗತಿಕ ಬೇಡಿಕೆಯನ್ನು ಪೂರೈಸಲು ಕಷ್ಟಸಾದ್ಯವಾದ ಮಾತಾಗಿದೆ. ಈ ಹಿನ್ನೆಲೆಯಲ್ಲಿ ಚಂದ್ರನ ದಕ್ಷಿಣ ಭೂಭಾಗದಲ್ಲಿರುವ ಹಿಲಿಯಂ-3 ನ್ನು ಭೂಮಿಗೆ ತರಲು ಜಗತ್ತಿನ ಹಲವಾರು ಸ್ಪೇಶ್ ಏಜೆನ್ಸಿಗಳು ಯೋಜನೆ ಸಿದ್ದಪಡಿಸುತ್ತಿವೆ.
ಆದರೆ ಇವೆಲ್ಲವುಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಭಾರತದ ಇಸ್ರೋ, ತನ್ನ ರೋವರ್ ನ್ನು ಚಂದ್ರನ ದಕ್ಷಿಣದ ಭೂಭಾಗಕ್ಕೆ ಕಳುಹಿಸಲಿದೆ. ಆ ಭೂ ಭಾಗದ ಸಂಪೂರ್ಣ ಮಾಹಿತಿ ಪಡೆದ ನಂತೆ ಅಲ್ಲಿರುವ ಹೇರಳ ಹಿಲಿಯಂ-3 ಸಂಪತ್ತನ್ನು ಭೂಮಿಗೆ ತರುವ ಯೋಜನೆ ಸಿದ್ದಪಡಿಸಲು ಇಸ್ರೋ ಸಜ್ಜಾಗಿದೆ. ಒಂದು ವೇಳೆ ಈ ಯೀಓಜನೆ ಯಶಸ್ವಿಯಾದರೆ ಭಾರತದ ಅಣುಶಕ್ತಿ ಯೋಜನೆಗಳಿಗೆ ಭಾರೀ ಬೆಂಬಲ ಸಿಕ್ಕಂತಾಗುತ್ತದೆ.
ಈ ಕುರಿತು ಮಾಹಿತಿ ನೀಡಿರುವ ಇಸ್ರೋ ಅಧ್ಯಕ್ಷ ಕೆ. ಸಿವನ್, ಅಮೆರಿಕ, ರಷ್ಯಾ, ಜಪಾನ್, ಚೀನಾ ಹಾಗೂ ಭಾರತ ಚಂದ್ರನ ಮೇಲೆ ಶಾಶ್ವತ ವಸಾಹತು ಸ್ಥಾಪಿಸುವ ನಿಟ್ಟಿನಲ್ಲಿ ಪೈಪೋಟಿಗಿಳಿದಿವೆ. ಆದರೆ ಇಸ್ರೋ ಚಂದ್ರನ ಅಗೋಚರ ದಕ್ಷಿಣ ಭೂಭಾಗ ತಲುಪಿ ಅಲ್ಲಿರುವ ಖನಿಜ ಸಂಪತ್ತನ್ನು ಭೂಮಿಗೆ ತರಲು ಯೋಜನೆ ಸಿದ್ದಪಡಿಸಿದೆ. ಕೇಂದ್ರ ಸರ್ಕಾರ ಅನುಮತಿಗಾಗಿ ಕಾಯುತ್ತಿರುವ ನಾವು, ಶೀಘ್ರದಲ್ಲೇ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.