
ಕೋಲ್ಕತ್ತಾ [ನ. 18] ಸಂಸತ್ ನಲ್ಲಿಯೇ ಸಂಚಲನ ಮೂಡಿಸಿದ್ದ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಉಸಿರಾಟದ ತೊಂದಯಿಂದ ಕೋಲ್ಕತ್ತಾ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಟಿಎಂಸಿ ಪಕ್ಷದಿಂದ ಬಸಿರ್‌ಹತ್‌ನಿಂದ ಲೋಕಸಭೆಗೆ ಆಯ್ಕೆಯಾದ ಜಹಾನ್ ಅವರನ್ನು ಭಾನುವಾರ ರಾತ್ರಿ 9.30 ರ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ತೊಂದರೆಯಿಂದಾಗಿ ನುಸ್ರತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಗೆ ಆಸ್ತಮಾ ಸಮಸ್ಯೆ ಇದೆ ಎಂದು ಕುಟುಂಬದ ಮೂಲಗಳು ವಿವರಿಸಿದೆ.
ಹೊಸ ಲೋಕಸಭೆಯಲ್ಲಿ 29 ವರ್ಷದ ಬೆಂಗಾಲಿ ಬೆಡಗಿ, ಎಲ್ಲಿಯ ಸಂಸದೆ?
ನುಸ್ರತ್ ಜಹಾನ್ ಬಂಗಾಳದಲ್ಲಿ ಪ್ರಸಿದ್ಧವಾದ ನಟಿ. ಟಿಎಂಸಿ ಟಿಕೆಟ್ ಪಡೆದು, ಬಸಿರ್ ಹತ್ ಲೋಕಸಭಾ ಕ್ಷೇತ್ರದಿಂದ ಗೆದ್ದ ಈ ನಟಿ ಸಂಸತ್ ಮುಂದೆ ವಿದೇಶಿ ಉಡುಗೆ ತೊಟ್ಟು ತೆಗೆಸಿಕೊಂಡ ಫೋಟೋದಿಂದ ಟ್ರೋಲ್ ಆಗಿದ್ದರು. TMCಯ ಮತ್ತೊಬ್ಬ ಸಂಸದೆ ಮಿಮಿ ಚಕ್ರವರ್ತಿ ಸಹ ಸೌಂದರ್ಯದಲ್ಲಿ ಒಬ್ಬರನ್ನೊಬ್ಬರು ಮೀರಿಸುವಂತೆ ಇದ್ದಾರೆ.
ಸಂಸತ್ತಿನೆದುರು ಪಾಶ್ಚಾತ್ಯ ಉಡುಗೆ ತೊಟ್ಟು ಪೋಸ್: ಸಂಸದೆಯರು ಟ್ರೋಲ್!
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುವ ಈ ನಟಿ ಕಮ್ ಸಂಸದೆ ತಮ್ಮ ಲವ್ ಲೈಫ್ ಬಗ್ಗೆಯೂ ರಿವೀಲ್ ಮಾಡಿದ್ದಾರೆ. ತಮ್ಮ ಮದುವೆ ಬಗ್ಗೆಯೂ ಹೇಳಿಕೊಂಡಿದ್ದು, ಈ ವಿಚಾರವಾಗಿ ಹುಟ್ಟಿಕೊಂಡ ಗಾಸಿಪ್‌ಗಳಿಗೆ ಅಂತ್ಯ ಹಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.