ಪ್ಯಾಂಟ್ ಧರಿಸುತ್ತಿದ್ದ ಸಿಎಂ ಪಂಚೆ ಉಡೋಕೆ ಶುರು ಮಾಡಿದ್ಯಾಕೆ? ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ!

Published : Sep 15, 2017, 03:37 PM ISTUpdated : Apr 11, 2018, 12:36 PM IST
ಪ್ಯಾಂಟ್ ಧರಿಸುತ್ತಿದ್ದ ಸಿಎಂ ಪಂಚೆ ಉಡೋಕೆ ಶುರು ಮಾಡಿದ್ಯಾಕೆ? ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ!

ಸಾರಾಂಶ

ವಿಕ್ಟೋರಿಯಾ ಆಸ್ಪತ್ರೆ ನೂತನ ಕಟ್ಟಡಗಳ ಉದ್ಘಾಟನೆ ವೇಳೆ ಸಿಎಂ ಸಿದ್ದರಾಮಯ್ಯ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲರ ಕಾಲೆಳೆದ ಹಾಸ್ಯ ಪ್ರಸಂಗ ನಡೆಯಿತು. ಅಲ್ಲದೇ ಇದೇ ವೇಳೆ ಸಿದ್ದರಾಮಯ್ಯ ತಮ್ಮ ಪಂಚೆಯ ರಹಸ್ಯವನ್ನ ಸಹ ಬಿಚ್ಚಿಟ್ಟರು.

ಬೆಂಗಳೂರು(ಸೆ.15): ವಿಕ್ಟೋರಿಯಾ ಆಸ್ಪತ್ರೆ ನೂತನ ಕಟ್ಟಡಗಳ ಉದ್ಘಾಟನೆ ವೇಳೆ ಸಿಎಂ ಸಿದ್ದರಾಮಯ್ಯ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲರ ಕಾಲೆಳೆದ ಹಾಸ್ಯ ಪ್ರಸಂಗ ನಡೆಯಿತು. ಅಲ್ಲದೇ ಇದೇ ವೇಳೆ ಸಿದ್ದರಾಮಯ್ಯ ತಮ್ಮ ಪಂಚೆಯ ರಹಸ್ಯವನ್ನ ಸಹ ಬಿಚ್ಚಿಟ್ಟರು.

 ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶರಣಪ್ರಕಾಶ ಪಾಟೀಲ್ ಡರ್ಮಟಾಲಜಿಸ್ಟ್ . ಅಂದರೆ  ಚರ್ಮ ರೋಗ ತಜ್ಞ. ಆದರೆ ಅವರು ಯಾವ ರೋಗಿಗೂ ಸಹಾಯ ಮಾಡಿದಂತೆ ಕಾಣಲ್ಲ. ನನಗೂ ಒಣ ಚರ್ಮದ ಸಮಸ್ಯೆ ಇತ್ತು. ಚಳಿಗಾಲ ಬಂತು ಅಂದ್ರೆ ತುಂಬಾ ಕಷ್ಟವಾಗುತ್ತಿತ್ತು. ಯಾವ ವೈದ್ಯರೂ ರೋಗಕ್ಕೆ ಕಾರಣ ಪತ್ತೆ  ಮಾಡಲು ಸಾಧ್ಯವಾಗಿರಲಿಲ್ಲ. ಕೊನೆಗೊಬ್ಬ ವೈದ್ಯರು ಪ್ಯಾಂಟ್ ಧರಿಸುವುದನ್ನು ನಿಲ್ಲಿಸಿ, ಪಂಚೆ ಧರಿಸಲು ಸಲಹೆ ಮಾಡಿದ್ದರು. ಚೆನ್ನಾಗಿ ಗಾಳಿಯಾಡಿದ್ರೆ ಸರಿ ಹೋಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ರು. ಈಗ ಅದು ಸರಿ ಹೋಯ್ತು. ಆದ್ದರಿಂದ ನಾನು ಯಾರನ್ನೂ ಅನುಕರಣೆ ಮಾಡಲು ಪಂಚೆ ಉಡುತ್ತಿಲ್ಲ. ಬದಲಾಗಿ ಆರೋಗ್ಯದ ಕಾರಣಕ್ಕೆ ಪಂಚೆ ಧರಿಸುತ್ತಿದ್ದೇನೆ ಅಂತ ಸಿಎಂ ಸಿದ್ದರಾಮಯ್ಯ ತಮ್ಮ ಪಂಚೆಯ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Viral Video: ದೇಶದ ಭಯಂಕರ ವಿಷಕಾರಿ ಹಾವಿನ ವಿಡಿಯೋ ಹಂಚಿಕೊಂಡ IFS ಅಧಿಕಾರಿ; ಇದು ಕಚ್ಚಿದ್ರೆ ಟಿಕೆಟ್ ಫಿಕ್ಸ್!
ಪುರಾಣ ಪ್ರಸಿದ್ಧ ತೋಪಿನ ತಿಮ್ಮಪ್ಪ ದೇಗುಲ ವಶಕ್ಕೆ ಸರ್ಕಾರ ಕಸರತ್ತು; ಗ್ರಾಮಸ್ಥರ ಒಗ್ಗಟ್ಟಿಗೆ ಅಧಿಕಾರಿಗಳು ಸುಸ್ತು!