ಕಾವೇರಿಗಾಗಿ ಗಲಭೆ: 8 ಕರವೇ ಕಾರ್ಯಕರ್ತರಿಗೆ ಶಿಕ್ಷೆ

By Suvarna Web DeskFirst Published Sep 15, 2017, 3:30 PM IST
Highlights

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧ ಸುಪ್ರೀಂ ಕೋರ್ಟ್ 2012ರಲ್ಲಿ ನೀಡಿದ್ದ ತೀರ್ಪು ಖಂಡಿಸಿ ಗಲಭೆ ಮಾಡಿದ್ದ ಕನ್ನಡ ರಕ್ಷಣಾ ವೇದಿಕೆಯ 8 ಮಂದಿ ಕಾರ್ಯಕರ್ತರಿಗೆ ತಲಾ 2 ವರ್ಷ ಜೈಲು ಶಿಕ್ಷೆ, 8 ಸಾವಿರ ರುಪಾಯಿ ದಂಡ ವಿಧಿಸಿ ನಗರದ 56ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ನೀಡಿದೆ.

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧ ಸುಪ್ರೀಂ ಕೋರ್ಟ್ 2012ರಲ್ಲಿ ನೀಡಿದ್ದ ತೀರ್ಪು ಖಂಡಿಸಿ ಗಲಭೆ ಮಾಡಿದ್ದ ಕನ್ನಡ ರಕ್ಷಣಾ ವೇದಿಕೆಯ 8 ಮಂದಿ ಕಾರ್ಯಕರ್ತರಿಗೆ ತಲಾ 2 ವರ್ಷ ಜೈಲು ಶಿಕ್ಷೆ, 8 ಸಾವಿರ ರುಪಾಯಿ ದಂಡ ವಿಧಿಸಿ ನಗರದ 56ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ನೀಡಿದೆ.

ನೀಲಕಂಠ ಗೌಡ, ರಘು ಗೌಡ, ಕುಮಾರ್, ಪ್ರಸನ್ನ, ನರಸಿಂಹ, ಶ್ರೀನಿವಾಸ್, ಸತೀಶ್, ದೀಪಕ್ ಶಿಕ್ಷೆಗೆ ಗುರಿಯಾದವರು. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಕರ್ನಾಟಕದ ವಿರುದ್ಧ ವಾಗಿ ಸುಪ್ರೀಂ 2012ರ ಡಿಸೆಂಬರ್ 22 ರಂದು ತೀರ್ಪು ನೀಡಿತ್ತು.

ಈ ತೀರ್ಪು ವಿರೋಧಿಸಿ ಕೇಂದ್ರ ಸರ್ಕಾರದ ಕಚೇರಿಗಳ ಮೇಲೆ ಕರವೇ ಕಾರ್ಯಕರ್ತರು ದಾಳಿ ನಡೆಸಿದ್ದರು. ಮಲ್ಲೇಶ್ವರ ಪೊಲೀಸರು ಈ 8 ಮಂದಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ ಎಫ್’ಐಆರ್ ದಾಖಲಿಸಿದ್ದರು.

(ಸಾಂದರ್ಭಿಕ ಚಿತ್ರ)

click me!