ಎಸ್.ನಾರಾಯಣ್ ಜೊತೆ ತೇಜಸ್ವಿನಿ ರಮೇಶ್ ಸ್ಪರ್ಧೆ? ಕುಮಾರ ಸ್ವಾಮಿ ಬಗ್ಗೆ ತಮ್ಮ ನಿರ್ದೇಶನದಲ್ಲಿ ಸಿನಿಮಾ!

Published : May 19, 2017, 11:48 PM ISTUpdated : Apr 11, 2018, 12:49 PM IST
ಎಸ್.ನಾರಾಯಣ್ ಜೊತೆ ತೇಜಸ್ವಿನಿ ರಮೇಶ್ ಸ್ಪರ್ಧೆ? ಕುಮಾರ ಸ್ವಾಮಿ ಬಗ್ಗೆ ತಮ್ಮ ನಿರ್ದೇಶನದಲ್ಲಿ ಸಿನಿಮಾ!

ಸಾರಾಂಶ

 ಕುಮಾರಸ್ವಾಮಿ ತಾವು ರೈತರ ಪರ ನಾಯಕ ಅಂತಾ ಎಂದು ಬಿಂಬಿಸಿಕೊಳ್ಳಲು ಭೂಮಿ ಪುತ್ರ ಹೆಸರಲ್ಲಿ ಚಿತ್ರ ಮಾಡಲು ಹೊರಟಿದ್ದಾರೆ.

ಮಂಡ್ಯ(ಮೇ.19): ಮಾಜಿ ಸಿ.ಎಂ. ಕುಮಾರಸ್ವಾಮಿಯನ್ನು ಜನನಾಯಕನೆಂದು ಬಳಿ ಹೊರಟಿರುವ ಭೂಮಿಪುತ್ರ ಚಿತ್ರದಲ್ಲಿ ಸತ್ಯವನ್ನು ಮರೆ ಮಾಡಲಿದ್ದು  ಅದಕ್ಕಾಗಿ‌ ತಮ್ಮ ನಿರ್ದೇಶನದಲ್ಲಿ ಕುಮಾರಸ್ವಾಮಿ 20 ತಿಂಗಳ ಅವಧಿಯಲ್ಲಿ ಮಾಡಿದ  ದ್ರೋಹವನ್ನು ಒಂದು ಚಿತ್ರವನ್ನು ಮಾಡಿ ಜನರಿಗೆ ತೋರಿಸೋದಾಗಿ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಹೇಳಿದ್ದಾರೆ.

ಮಂಡ್ಯದ ಪ್ರವಾಸಿ ಮಂದಿರದಲ್ಲಿ ಈ ಕುರಿತು‌ ಮಾತನಾಡಿದ ಮಾಜಿ ಸಂಸದೆ ತೇಜಸ್ವಿನಿ ರಮೇಶ್  ಕುಮಾರಸ್ವಾಮಿ ಸಾಚಾ ಅಲ್ಲ ಅವರೇನು ಪ್ರಶ್ನಾತೀತರು ಅಲ್ಲ ಅಂತಾ ಕಿಡಿ ಕಾರಿದ್ರು. ಅವರ ವಿರುದ್ಧ ಆರೋಪ ಬಂದಾಗ ತಾವು ಪರಿಶುದ್ಧರು ಇದರ ಹಿಂದೆ ತಮ್ಮ ಪಕ್ಷದ ಯಡಿಯೂರಪ್ಪ ಅವರ ಕೈವಾಡವಿದೆ ಅಂತಾ ಆರೋಪ ಮಾಡ್ತಾರೆ. ಅದರೆ ಯಡಿಯೂರಪ್ಪ ಎಂದು ದ್ವೇಷದ ರಾಜಕಾರಣ ಮಾಡಿಲ್ಲ.ಬದಲಾಗಿ ಜೆಡಿಎಸ್ ಪಕ್ಷದ ದ್ವೇಷದ ರಾಜಕಾರಣ ಮಾಡ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿ , ಕುಮಾರಸ್ವಾಮಿ ಯಾರನ್ನೋ ಮುಗಿಸಲು ಹಳ್ಳ ತೋಡಿದ್ದರು ಆಂದರೆ ದುರದೃಷ್ಟವಶಾತ್ ಅವರೆ ಈಗ ಆ ಹಳ್ಳಕ್ಕೆ ಬಿದ್ದಿದ್ದಾರೆ ಅಂತಾ ವ್ಯಂಗ್ಯವಾಡಿದ್ರು.

ಇನ್ನು ಕುಮಾರಸ್ವಾಮಿ ತಾವು ರೈತರ ಪರ ನಾಯಕ ಅಂತಾ ಎಂದು ಬಿಂಬಿಸಿಕೊಳ್ಳಲು ಭೂಮಿ ಪುತ್ರ ಹೆಸರಲ್ಲಿ ಚಿತ್ರ ಮಾಡಲು ಹೊರಟಿದ್ದಾರೆ. ಆದರೆ ನಿಜವಾದ ಭೂಮಿಪುತ್ರ ಜನಕ ಯಡಿಯೂರಪ್ಪ ಅಂದರು. ಇನ್ನು ಕುಮಾರ ಸ್ವಾಮಿಯ  ಭೂಮಿಪುತ್ರ ಚಿತ್ರದಲ್ಲಿ ಕುಮಾರಸ್ವಾಮಿ ಮಾಡಿದ ದ್ರೋಹ‌ ತೋರಿಸಲ್ಲ. ಆದ್ದರಿಂದ ನಿಜವಾದ ಕ್ಲೈಮಾಕ್ಸ್ ನ್ನು ನನ್ನ ನಿರ್ದೇಶನದ ಭೂಮಿಪುತ್ರ ಜನಕ ಅಥವಾ ಕಾಯಕಯೋಗಿ ಚಿತ್ರದಲ್ಲಿ ಇದನ್ನು ಜನರಿಗೆ ತೋರಿಸೋದಾಗಿ ಹೇಳಿದ್ರು. ಇನ್ನು ತಮ್ಮ ನಿರ್ದೇಶನದ ಈ ಚಿತ್ರ ಕ್ಕೆ ಎಲ್ಲಾ ಬಿಜೆಪಿ ಕಾರ್ಯಕರ್ತರ ತಲಾ ಒಂದೊಂದು ಲಕ್ಷ ನೀಡಿ ನಿರ್ಮಾಪಕರಾಗ್ತಿರೋದು ವಿಶೇಷ ಅಂದ್ರು. ಮುಂದಿನ ದಿನಗಳಲ್ಲಿ ಈ ಚಿತ್ರ ಸೆಟ್ಟೇರಲಿದ್ದು ಶೀಘ್ರವೇ ಜನರಿಗೆ ಕುಮಾರಸ್ವಾಮಿ ಬಿಜೆಪಿ ಪಕ್ಷ ಮತ್ತು ಯಡಿಯೂರಪ್ಪನವರಿಗೆ ಮಾಡಿದ ದ್ರೋಹ ತೋರಿಸಲಿದ್ದು ಕಥಾ ಪಾತ್ರಧಾರಿಗಳ ಹುಡುಕಾಟದಲ್ಲಿರೋದಾಗಿ ಹೇಳಿದ್ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕಿಂಗ್ ನ್ಯೂಸ್; ಡಿ.26ರಿಂದಲೇ ಹೊಸ ದರಗಳು ಅನ್ವಯ
Hate Speech Bill: ಒಬ್ಬ ವ್ಯಕ್ತಿಯ ಮಾತನ್ನು ದ್ವೇಷಭಾಷಣ ಅಂತ ಹೇಗೆ ಸಾಬೀತು ಮಾಡುತ್ತೀರಿ