ತುಮಕೂರಿನಲ್ಲಿ ಗ್ರಾಮಸ್ಥರು ಈ ತಲೆಬುರುಡೆ ತೆಗೆದಿದ್ದು ಏಕೆ ಗೊತ್ತೆ ?

By Suvarna web DeskFirst Published May 19, 2017, 10:49 PM IST
Highlights

ಒಂದೂವರೆವರ್ಷದಹಿಂದೆಮಲ್ಲೇಗೌಡಎಂಬವ್ಯಕ್ತಿಸಾವನ್ನಪ್ಪಿದ್ದ.

ಮಳೆಗಾಗಿ ತುಮಕೂರಿನಲ್ಲೊಂದು ವಿಲಕ್ಷಣ ಆಚರಣೆ ಬೆಳಕಿಗೆ ಬಂದಿದೆ. ಚಿಕ್ಕನಾಯಕನಹಳ್ಳಿ ಅಣೆಕಟ್ಟೆ  ಗ್ರಾಮಸ್ಥರು ಮಳೆ ಬರುತ್ತೆ ಅನ್ನೋ ಮೂಢನಂಬಿಕೆಯಲ್ಲಿ ಹೂತು ಹಾಕಿದ್ದ ಶವದ ಬುರುಡೆಯನ್ನ ಹೊರ ತೆಗೆದಿದ್ದಾರೆ. ಒಂದೂವರೆ ವರ್ಷದ ಹಿಂದೆ ಮಲ್ಲೇಗೌಡ ಎಂಬ ವ್ಯಕ್ತಿ ಸಾವನ್ನಪ್ಪಿದ್ದ. ಮೃತ ಮಲ್ಲೆಗೌಡನಿಗೆ ತೊನ್ನು ಇತ್ತು. ಹಾಗಾಗಿ ಆತ ಸಾವನ್ನಪ್ಪಿದ ದಿನದಿಂದ ಬೀಕರ ಬರಗಾಲ ಬಂದಿದೆ. ಹಾಗಾಗಿ ಆ ಶವದ ಬುರುಡೆ ಹೊರ ತೆಗೆದರೆ ಮಳೆ ಬರುತ್ತದೆ  ಎಂಬ ಕುರುಡು ನಂಬಿಕೆಯಲ್ಲಿ ಗ್ರಾಮಸ್ಥರು ಈ ಮೌಡ್ಯಾಚರಣೆಗೆ ಮುಂದಾಗಿದ್ದಾರೆ. ಸರ್ಕಾರ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿ ತರಲು ಮುಂದಾಗಿರುವ ಬೆನ್ನಲ್ಲೇ, ಈ ವಿಚಿತ್ರ ಆಚರಣೆ ಬೆಳಕಿಗೆ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.

click me!