
ಮೈಸೂರು(ಅ.30): ಕೇವಲ 10 ಸಾವಿರ ಬೆಲೆಬಾಳುವ ಮೊಬೈಲ್ ಆಸೆಗಾಗಿ ಟೆಕ್ಕಿಯೊಬ್ಬನನ್ನು ಕೊಂದ ಘಟನೆ ಮೈಸೂರಿನಲ್ಲಿ ನಡೆದಿದೆ. ಅಕ್ಟೋಬರ್ 18 ರಂದು ಈ ಘಟನೆ ನಡೆದಿದ್ದು, ಮೃತಪಟ್ಟ ವ್ಯಕ್ತಿ ಬಳ್ಳಾರಿ ಮೂಲದ ಬಸವರಾಜ್ ಹಳಗುಂಡಿ ಎಂದು ತಿಳಿದು ಬಂದಿದೆ.
ಇತ್ತ ಖಾಸಗಿ ಕಂಪನಿಯಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿದ್ದು, ಮೂವರು ದರೋಡೆಕೋರರು ಇತನ ಕೈಯಲ್ಲಿದ ಮೊಬೈಲ್ ಆಸೆಗೆ ಬಿದ್ದು, ಅದನ್ನು ಕಸಿದುಕೊಳ್ಳುವ ಭರದಲ್ಲಿ ಆತನ ಹೃದಯವನ್ನೇ ಬಗೆದಿದ್ದಾರೆ. ಇಷ್ಟಾದರೂ ಪೊಲೀಸರಿಗೆ ಬಸವರಾಜು ಕೊಲೆ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಆದರೆ ಈ ಮೂವರು ಖದೀಮರು ಬಸವರಾಜ್ನ್ನು ಕೊಂದು ಆತನ ಬಳಿ ತೆಗೆದುಕೊಂಡು ಹೋಗಿದ್ದ ಮೊಬೈಲ್ ಇದ್ದಕಿದ್ದಂತೆ ಸ್ವಿಚ್ ಆನ್ ಆದಾಗ ಪೊಲೀಸರಿಗೆ ಮೊದಲ ಸುಳಿವು ಸಿಕ್ಕಿತ್ತು. ಇದನ್ನೇ ಬೆನ್ನತ್ತಿ ಹೋದ ಪೊಲೀಸರು ಮೂವರು ದರೋಡೆಕೋರರು ಸಿಕ್ಕಿಬಿದ್ದಿದ್ದಾರೆ.
ಬಂಧಿತರನ್ನು ಮೈಸೂರಿನ ನಂದೀಶ್ ಮತ್ತು ವಿನೋದ್ ಹಾಗೂ ಮಂಡ್ಯದ ಮಂಜುನಾಥ್ ಎನ್ನಲಾಗಿದೆ. ಆದರೆ ಕೇವಲ 10 ಸಾವಿರ ಬೆಲೆಯ ಮೊಬೈಲ್ ಆಸೆಗಾಗಿ ಒಬ್ಬ ವ್ಯಕ್ತಿಯನ್ನೇ ಕೊಂದಿರುವುದು ಅಮಾನುಷವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.