ಜಗತ್ತಿನ ‘ಅತೀ ಚುರುಕಿನ ಕ್ಯಾಶಿಯರ್’ ಬಗ್ಗೆ ನೀವು ತಿಳಿದಿರಲೇಬೇಕಾದ ‘ಕಟುಸತ್ಯ’...

By Suvarna Web Desk  |  First Published Oct 30, 2016, 3:24 AM IST

ಜಗತ್ತಿನ ‘ಅತೀ ಚುರುಕಿನ ಕ್ಯಾಶಿಯರ್’ ಬಗ್ಗೆ ನೀವು ತಿಳಿದಿರಲೇಬೇಕಾದ ‘ಕಟುಸತ್ಯ’...


ಅಕ್ಟೋಬರ್ 24ರಂದು ಬಲರಾಜು ಸೋಮಿಸೆಟ್ಟಿ ಎಂಬವರು ತನ್ನ ಫೇಸ್’ಬುಕ್’ ಖಾತೆಯಲ್ಲಿ ‘ಜಗತ್ತಿನ ಅತೀ ಚುರುಕಿನ ಬ್ಯಾಂಕ್ ಕ್ಯಾಶಿಯರ್’ ಎಂಬ ವ್ಯಂಗಭರಿತ ಶಿರೋನಾಮೆಯೊಂದಿಗೆ  ಅಪ್’ಲೋಡ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು.

ಆ ವಿಡಿಯೋನಲ್ಲಿ ‘ಬ್ಯಾಂಕ್ ಆಫ್ ಮಹಾರಾಷ್ಟ್ರ’ದ ಮಹಿಳಾ ಕ್ಯಾಶಿಯರ್’ವೊಬ್ಬರು ಅತೀ ಮಂದಗತಿಯಲ್ಲಿ ಕೆಲಸ ಮಾಡುವುದನ್ನು ಗುಪ್ತವಾಗಿ ಚಿತ್ರಿಕರಿಸಲಾಗಿತ್ತು. ಕೇವಲ ಒಂದೇ ವಾರದ ಅವಧಿಯಲ್ಲಿ 1.3 ಕೋಟಿ ಮಂದಿ ಆ ವಿಡಿಯೋವನ್ನು ವೀಕ್ಷಿಸಿ ಗೇಲಿಮಾಡಿದ್ದರೆ, 1.54ಲಕ್ಷ ಮಂದಿ ಅದನ್ನು ಶೇರ್ ಮಾಡಿದ್ದಾರೆ.

Tap to resize

Latest Videos

ಆದರೆ ಆ ವಿಡಿಯೋ ಬಗ್ಗೆ ಅಘಾತಕಾರಿ ಅಂಶವೊಂದು ಹೊರಬಿದ್ದಿದೆ. ಕುಂದನ್ ಶ್ರಿವಾಸ್ತವ್ ಎಂಬವರು ಆ ಮಹಿಳೆಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಮುಂದಿನ ವರ್ಷ ನಿವೃತ್ತಿ ಹೊಂದಲಿರುವ ಆ ಬ್ಯಾಂಕ್ ಉದ್ಯೋಗಿ ಹೆಸರು ಪ್ರೇಮಲತಾ ಶಿಂಧೆ. ಅವರು ಈಗಾಗಲೇ ಎರಡು ಬಾರಿ ಹೃದಯಾಘಾತಕ್ಕೆ ಒಳಾಗಾಗಿದ್ದಾರೆ ಹಾಗೂ ಒಂದು ಬಾರಿ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. ಚಿಕಿತ್ಸೆ ಮುಗಿಸಿ ಇತ್ತೀಚೆಗಷ್ಟೇ ಅವರು ಕೆಲಸಕ್ಕೆ ಸೇರಿಕೊಂಡಿದ್ದಾರೆ, ಆದರೆ ಅವರ ಕೆಲಸದ ಶೈಲಿಯನ್ನು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾ

ಆಕೆಯ ಖಾತೆಯಲ್ಲಿ ರಜೆಗಳಿದ್ದರೂ, ಮನೆಯಲ್ಲಿ ಕೂರದೇ ಆಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರಿಗಾಗಿಯೇ ಬ್ಯಾಂಕ್ ಹೆಚ್ಚುವರಿ ಕೌಂಟರ್’ಅನ್ನು ತೆರೆದಿದೆ. ಆದರೆ ಈ ಎಲ್ಲಾ ಅಂಶಗಳನ್ನು ತಿಳಿದುಕೊಳ್ಳದೇ ಶ್ರಮಜೀವಿಯಾಗಿರುವ ಹಿರಿಯ ಮಹಿಳಾ ಉದ್ಯೋಗಿಯೊಬ್ಬಳ ಬಗ್ಗೆ ಲೇವಡಿ ಮಾಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲಾ ಫೋಟೋಗಳು/ ವಿಡಿಯೋಗಳು ನೈಜವಾಗಿದೆ ಎಂದು ಹೇಳುವ ಹಾಗಿಲ್ಲ. ಆದುದರಿಂದ ಇಂತಹ ದುಸ್ಸಾಹಸಗಳನ್ನು ಮಾಡುವ ಮುಂದೆ ಎಚ್ಚರವಹಿಸಬೇಕು. ಇತರರ, ವಿಶೇಷವಾಗಿ ಮಹಿಳೆ ಹಾಗೂ ಹಿರಿಯ ನಾಗರಿಕರೊಂದಿಗೆ ವಿವೇಕದೊಂದಿಗೆ ವರ್ತಿಸಬೇಕು.  

 

click me!