ಹುಟ್ಟೂರಲ್ಲಿ ರೈತ, ಬೆಂಗಳೂರಲ್ಲಿ ಪೊಲೀಸ್ ಅಧಿಕಾರಿ

Published : Oct 30, 2016, 03:30 AM ISTUpdated : Apr 11, 2018, 12:54 PM IST
ಹುಟ್ಟೂರಲ್ಲಿ ರೈತ, ಬೆಂಗಳೂರಲ್ಲಿ ಪೊಲೀಸ್ ಅಧಿಕಾರಿ

ಸಾರಾಂಶ

ಚಂದ್ರಯ್ಯ ಎನ್ನುವ ಒಂದೆ ಹೆಸರು ಇದ್ದಿದ್ದರೆ, ಇದೀಗ ಕಟಕಟೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ, ಈತನಿಗೆ ಶ್ರೀನಿವಾಸಯ್ಯ ಎನ್ನುವ ಇನ್ನೊಂದು ಹೆಸರಿದೆ. ಅದು ನಿಕ್​​ ನೇಮ್​​ ಅಲ್ಲ. ಸರ್ಕಾರಿ ದಾಖಲೆಗಳಲ್ಲಿಯೇ ಇದ್ದು, ಅದೇ ಹೆಸರಲ್ಲಿ ಸರ್ಕಾರದಿಂದ ಗೋಮಾಳ ಜಮೀನನ್ನು ಮಂಜೂರು ಮಾಡಿಸಿಕೊಂಡಿದ್ದಾನೆ. ಆದರೆ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡದೇ ವಂಚಿಸಿದ್ದಾನೆ. ಹೀಗಾಗಿ ಈತನ ವಿರುದ್ಧ  ಕ್ರಮಕೈಗೊಳ್ಳದ ಗೃಹ ಇಲಾಖೆ, ಡಿಜಿ.ಐಜಿಪಿ ಸೇರಿ 7 ಮಂದಿ ವಿರುದ್ಧ  ಹೈಕೋರ್ಟ್​​ನಲ್ಲಿ ರಿಟ್​ ಅರ್ಜಿ ದಾಖಲಿಸಲಾಗಿದ್ದು, ಎಲ್ಲರಿಗೂ ನೋಟಿಸ್​ ಜಾರಿಯಾಗಿದೆ.

ಬೆಂಗಳೂರು(ಅ.31): ಡಬಲ್​​ ಆಕ್ಟಿಂಗ್​​, ಥ್ರಿಬ್ಬಲ್ ಆಕ್ಟಿಂಗ್'ನ್ನು ಸಿನಿಮಾದಲ್ಲಿ ನೋಡಿರುತ್ತೇವೆ. ನಿಜ ಜೀವನದಲ್ಲಿ ಡಬಲ್​​ ಆಕ್ಟಿಂಗ್​ ಮಾಡುವುದು ಸುಲಭವಲ್ಲ? ಆದರೆ, ಬೆಂಗಳೂರಲ್ಲಿ ಒಬ್ಬ ಪೊಲೀಸಪ್ಪ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಸರ್ಕಾರದ ಕಣ್ಣಿಗೇ ಮಣ್ಣೆರಚಿದ್ದಾನೆ. ಅಷ್ಟಕ್ಕೂ ಆತ ಯಾರು?ಆತನ ಡಬಲ್​​ ರೋಲ್​​ ಡ್ರಾಮ ಹೇಗಿತ್ತು? ಇಲ್ಲಿದೆ ವಿವರ

ಎರಡೆರಡು ಹೆಸರು ಇಟ್ಕೊಂಡು ಸರ್ಕಾರಕ್ಕೆ ವಂಚನೆ!

ಜಯನಗರ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಹೆಡ್​​ ಕಾನ್ಸ್​​ಟೇಬಲ್​​ ಚಂದ್ರಯ್ಯನೇ ಸರ್ಕಾರಕ್ಕೆ ಡಬಲ್ ರೋಲ್ ಮಾಡಿ ವಂಚಿಸಿದವನು. ಕಳ್ಳರು, ದರೋಡೆಕೋರರನ್ನು ಹಿಡಿದು ಕಂಬಿ ಹಿಂದೆ ತಳ್ಳಬೇಕಾದ ಈತನೇ  ಸರ್ಕಾರಕ್ಕೆ ಪಂಗನಾಮ ಹಾಕಿದ್ದಾನೆ.

ಚಂದ್ರಯ್ಯ ಎನ್ನುವ ಒಂದೆ ಹೆಸರು ಇದ್ದಿದ್ದರೆ, ಇದೀಗ ಕಟಕಟೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ, ಈತನಿಗೆ ಶ್ರೀನಿವಾಸಯ್ಯ ಎನ್ನುವ ಇನ್ನೊಂದು ಹೆಸರಿದೆ. ಅದು ನಿಕ್​​ ನೇಮ್​​ ಅಲ್ಲ. ಸರ್ಕಾರಿ ದಾಖಲೆಗಳಲ್ಲಿಯೇ ಇದ್ದು, ಅದೇ ಹೆಸರಲ್ಲಿ ಸರ್ಕಾರದಿಂದ ಗೋಮಾಳ ಜಮೀನನ್ನು ಮಂಜೂರು ಮಾಡಿಸಿಕೊಂಡಿದ್ದಾನೆ. ಆದರೆ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡದೇ ವಂಚಿಸಿದ್ದಾನೆ. ಹೀಗಾಗಿ ಈತನ ವಿರುದ್ಧ  ಕ್ರಮಕೈಗೊಳ್ಳದ ಗೃಹ ಇಲಾಖೆ, ಡಿಜಿ.ಐಜಿಪಿ ಸೇರಿ 7 ಮಂದಿ ವಿರುದ್ಧ  ಹೈಕೋರ್ಟ್​​ನಲ್ಲಿ ರಿಟ್​ ಅರ್ಜಿ ದಾಖಲಿಸಲಾಗಿದ್ದು, ಎಲ್ಲರಿಗೂ ನೋಟಿಸ್​ ಜಾರಿಯಾಗಿದೆ.

ಚಂದ್ರಯ್ಯ, ಹೀಗೆ ಎರಡು ಹೆಸರನ್ನು ಹೊಂದಿ ಸರ್ಕಾರಕ್ಕೆ ಮಣ್ಣೆರೆಚುತ್ತಿದ್ದ ಬಗ್ಗೆ ಗ್ರಾಮಸ್ಥ ಪೂಜಾರಿ ರಾಮಯ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಸಂಬಂಧ ಕನಕಪುರ ತಹಸಿಲ್ದಾರ್​​ ತನಿಖೆ ನಡೆಸಿ, ಚಂದ್ರಯ್ಯ ಹಾಗೂ ಶ್ರೀನಿವಾಸಯ್ಯ ಒಬ್ಬರೇ ವ್ಯಕ್ತಿಯಾಗಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಿ. ಜೊತೆಗೆ ಅವರಿಗೆ ಮಂಜೂರಾಗಿರುವ ಜಮೀನನ್ನು ಹಿಂಪಡೆಯುವಂತೆ ಸರ್ಕಾರಕ್ಕೆ 2014ರಲ್ಲಿ ವರದಿ ನೀಡಿದ್ದಾರೆ. ಆದರೆ, 2 ವರ್ಷ ಕಳೆದರೂ, ಸರ್ಕಾರದಿಂದಾಗಲಿ, ಪೊಲೀಸ್​ ಇಲಾಖೆಯಿಂದಾಗಲಿ ಯಾವುದೇ ಕ್ರಮ ಜಾರಿಯಾಗಿಲ್ಲ. ಅಲ್ಲದೆ, ಬೆಂಗಳೂರಿನ ಜಯನಗರ ಠಾಣೆಯಲ್ಲಿ ಹೆಡ್​​ ಕಾನ್ಸ್​ಟೇಬಲ್​​ ಆಗಿ ಕೆಲಸ ಮುಂದುವರೆಸಿದ್ದಾರೆ.

ಚಂದ್ರಯ್ಯ, ತಾನೂ ಇಲಾಖೆಗೆ ಸೇರಿ ಕೆಲವೇ ದಿನಗಳ ಮುಂಚೆ ಜಮೀನು ಮಂಜೂರಾಗಿತ್ತು ಎಂದು ವಾದಿಸುತ್ತಿರುವುದಲ್ಲದೆ, ಇಂದಿಗೂ ಜಮೀನು ಶ್ರೀನಿವಾಸಯ್ಯ ಎಂಬ ಹೆಸರಲ್ಲಿಯೇ ಇದೆ. ​​ಸರ್ಕಾರಿ ನೌಕರಿಯಲ್ಲಿದ್ದರೂ, ಶ್ರೀನಿವಾಸಯ್ಯ ಎಂಬ ಹೆಸರಲ್ಲಿ ಅವರ ಪತ್ನಿ ಹೆಸರಲ್ಲಿ ಆಶ್ರಯ ಮನೆ ಹಾಗೂ ಬ್ಯಾಂಕ್​​'ನಲ್ಲಿ ಸಾಲ ಪಡೆದಿದ್ದಾರೆ. ಒಟ್ಟಾರೆ, ಒಬ್ಬ ಸರ್ಕಾರಿ ಅಧಿಕಾರಿಯಾಗಿ ಎರಡು ಹೆಸರನ್ನು ಹೊಂದಿ ಸರ್ಕಾರಕ್ಕೆ ಮಣ್ಣೆರಚುತ್ತಿರುವುದು ಮಾತ್ರ ದೊಡ್ಡ ದ್ರೋಹ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷಪೂರಿತ ದಾಳಿ ತಡೆಗೆ ರಕ್ಷಾ ಕವಚ ಈ ವಿಧೇಯಕ: ಸುಪ್ರೀಂ ಕೋರ್ಟ್‌ ವಕೀಲ ಸಂಕೇತ ಏಣಗಿ ಲೇಖನ
ಬಸ್‌ ದುರಂತವಾದ್ರೂ ಎಚ್ಚೆತ್ತುಕೊಳ್ಳದ KSRTC, ಫೋನ್‌ ಕಿವಿಯಲ್ಲಿಟ್ಟುಕೊಂಡೇ ಡ್ರೈವಿಂಗ್‌!