ಮೋದಿ ಸರ್ಕಾರದ್ದು ತೆರಿಗೆ ಭಯೋತ್ಪಾದನೆ

By Suvarna Web DeskFirst Published Nov 8, 2017, 11:05 AM IST
Highlights

ಅಪನಗದೀಕರಣ ಯೋಜನೆಗೆ ಒಂದು ವರ್ಷ ತುಂಬುತ್ತಿರುವ ಹೊತ್ತಲ್ಲೇ, ಮೋದಿ ಸರ್ಕಾರದ ನೋಟ್‌ಬ್ಯಾನ್ ಮತ್ತು ಜಿಎಸ್‌ಟಿ ನೀತಿಗಳು ತೆರಿಗೆ ಭಯೋತ್ಪಾದನೆಯಂತಿವೆ ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಕಟುವಾಗಿ ಟೀಕಿಸಿದ್ದಾರೆ.

ಅಹಮದಾಬಾದ್: ಅಪನಗದೀಕರಣ ಯೋಜನೆಗೆ ಒಂದು ವರ್ಷ ತುಂಬುತ್ತಿರುವ ಹೊತ್ತಲ್ಲೇ, ಮೋದಿ ಸರ್ಕಾರದ ನೋಟ್‌ಬ್ಯಾನ್ ಮತ್ತು ಜಿಎಸ್‌ಟಿ ನೀತಿಗಳು ತೆರಿಗೆ ಭಯೋತ್ಪಾದನೆಯಂತಿವೆ ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಕಟುವಾಗಿ ಟೀಕಿಸಿದ್ದಾರೆ.

ಅಲ್ಲದೇ ಅಪನಗದೀಕರಣ ಪ್ರಕ್ರಿಯೆ ಅಜಾಗರೂಕ ಕ್ರಮ. ಅಧಿಕ ಮೌಲ್ಯದ ನೋಟುಗಳನ್ನು ರದ್ದು ಮಾಡಿದ್ದು ಸಂಘಟಿತ ಮತ್ತು ಕಾನೂನು ಬಾಹಿರ ಲೂಟಿ ಎಂದು ಆರೋಪಿಸಿದ್ದಾರೆ. ಈ ನಡುವೆ ಸಿಂಗ್ ಟೀಕೆಗೆ ತಿರುಗೇಟು ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಅಪನಗದೀಕರಣ ನೈತಿಕ ಮತ್ತು ನೀತಿಯುತ ಕ್ರಮವಾಗಿದೆ.

ಯುಪಿಎ ಅವಧಿಯಲ್ಲಿ ೨ಜಿ, ಕಾಮನ್‌ವೆಲ್ತ್ ಗೇಮ್ ಮತ್ತು ಕಲ್ಲಿದ್ದಲು ಹಗರಣದಲ್ಲಿ ದೇಶವನ್ನು ಲೂಟಿಗೈಯಲಾಗಿದೆ ಎಂದು ಜೇಟ್ಲಿ ತಿರುಗೇಟು ನೀಡಿದ್ದಾರೆ.

ಸಿಂಗ್ ಟೀಕೆ: ಗುಜರಾತ್ ಚುನಾವಣಾ ಪ್ರಚಾರದ ಭಾಗವಾಗಿ ವ್ಯಾಪಾರಸ್ಥರು ಮತ್ತು ಉದ್ಯಮಿಗಳ ಜತೆಗಿನ ಸಂವಾದದಲ್ಲಿ ಮಂಗಳವಾರ ಮಾತನಾಡಿದ ಮನಮೋಹನ್ ಸಿಂಗ್, ಅಪನಗದೀಕರಣ ಪ್ರಕ್ರಿಯೆ ಅಜಾಗರೂಕ ಕ್ರಮ ಎಂದು ಟೀಕಿಸಿದರು.

ಇದೇ ವೇಳೆ ಜಿಎಸ್‌ಟಿ ವಿರುದ್ಧವೂ ಸಿಂಗ್ ಹರಿಹಾಯ್ದರು. ಲೂಟಿ ಮಾಡಿದ್ದು ಕಾಂಗ್ರೆಸ್: ಇದೇ ವೇಳೆ ಕೇಂದ್ರದ ಅಪನಗದೀಕರಣ ಕ್ರಮವನ್ನು ಸಮರ್ಥಿಸಿಕೊಂಡ ಹಣ ಕಾಸು ಸಚಿವ ಅರುಣ್ ಜೇಟ್ಲಿ, ಯುಪಿಎ ಸರ್ಕಾರ 2ಜಿ, ಕಾಮನ್‌ವೆಲ್ತ್, ಕಲ್ಲಿದ್ದಲು ಗಣಿ ಹಂಚಿಕೆ ಹಗರಣದಲ್ಲಿ ದೇಶವನ್ನು ಲೂಟಿ ಹೊಡೆದಿದೆ ಎಂದು ಆರೋಪಿಸಿದರು.

click me!